ETV Bharat / state

ಮುಂಬೈನಿಂದ ದಕ್ಷಿಣ ಕನ್ನಡಕ್ಕೆ ಬಂದ ಮಹಿಳೆಯಲ್ಲಿ ಕೊರೊನಾ ದೃಢ

ಇದೇ ತಿಂಗಳು 18ರಂದು ಮುಂಬೈನಿಂದ ಮಂಗಳೂರಿಗೆ ಆಗಮಿಸಿದ್ದ ಮಹಿಳೆಯೊಬ್ಬಳಲ್ಲಿ ಕೊರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ.

Corona
ದಕ್ಷಿಣ ಕನ್ನಡ
author img

By

Published : May 22, 2020, 3:12 PM IST

ಮಂಗಳೂರು: ಮಹಾರಾಷ್ಟ್ರದ ಮುಂಬೈನಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಆಗಮಿಸಿದ್ದ ಮಹಿಳೆಗೆ ಕೊರೊನಾ ಇರುವುದು ದೃಢಪಟ್ಟಿದೆ.

ಬೆಳ್ತಂಗಡಿ ತಾಲೂಕಿನ 29 ವರ್ಷದ ಈ ಮಹಿಳೆ ಮೇ 18 ರಂದು ಥಾಣೆಯ ಡೊಂಬಿವಿಲಿಯಿಂದ ಮಂಗಳೂರಿಗೆ ಆಗಮಿಸಿದ್ದರು. ಇವರನ್ನು ಬೆಳ್ತಂಗಡಿಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಪರೀಕ್ಷಿಸಿದ್ದು, ಇಂದು ಮಹಿಳೆಗೆ ಕೊರೊನಾ ಇರುವುದು ವರದಿಯಲ್ಲಿ ದೃಢಪಟ್ಟಿದೆ.

ಸದ್ಯ ಈ ಮಹಿಳಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಕೋವಿಡ್ ವಾರ್ಡ್​ಗೆ ದಾಖಲಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 62 ಪ್ರಕರಣಗಳು ಈವರೆಗೆ ದೃಢಪಟ್ಟಿದ್ದು, ಇದರಲ್ಲಿ 21 ಮಂದಿ ಗುಣಮುಖರಾಗಿದ್ದಾರೆ. ಐವರು ಸಾವನ್ನಪ್ಪಿದ್ದು, 36 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.