ETV Bharat / state

ನರ್ಸಿಂಗ್ ಕಾಲೇಜುಗಳಲ್ಲೇ ಹೆಚ್ಚಿದ ಕೊರೊನಾ ಸೋಂಕಿತರು: ಶೋಕಾಸ್ ನೋಟಿಸ್ ಜಾರಿ - Rukmini Shetty Memorial College of Nursing

ಮಂಗಳೂರು ನಗರದ ನರ್ಸಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕೋವಿಡ್​ ಟೆಸ್ಟ್​, ಇತರ ಕೋವಿಡ್​ ನಿಯಮಗಳೆಡೆಗೆ ಗಮನ ಹರಿಸದ ಹಿನ್ನೆಲೆ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಆರೋಗ್ಯ ಇಲಾಖೆ ಕಾಲೇಜಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಕಾಲೇಜು ಆವರಣ ಹಾಗೂ ಸುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿ ಆದೇಶಿಸಿದೆ.

Corona cases Increased in Nursing Colleges: Shokas Notice Enforced
ನರ್ಸಿಂಗ್ ಕಾಲೇಜುಗಳಲ್ಲೇ ಹೆಚ್ಚಿದ ಕೊರೊನಾ ಸೋಂಕಿತರು: ಶೋಕಾಸ್ ನೋಟಿಸ್ ಜಾರಿ
author img

By

Published : Jan 4, 2021, 12:38 PM IST

ಮಂಗಳೂರು: ನಗರದಲ್ಲಿ ನರ್ಸಿಂಗ್ ಕಾಲೇಜುಗಳ ನಿರ್ಲಕ್ಷ್ಯದಿಂದಾಗಿ ಕೊರೊನಾ ಸೋಂಕಿತ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ನಗರದಲ್ಲಿ ಆತಂಕ ಸೃಷ್ಟಿಸಿದೆ.

ಒಂದೇ ಆಡಳಿತ ವ್ಯವಸ್ಥೆಗೆ ಒಳಪಟ್ಟ ನಗರದ ಸಿಟಿ ನರ್ಸಿಂಗ್ ಕಾಲೇಜು ಹಾಗೂ ರುಕ್ಮಿಣಿ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜುಗಳಲ್ಲಿಯೇ ಬರೋಬ್ಬರಿ 78 ಮಂದಿ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಅದೇ ರೀತಿ ಮಸೂದ್ ನರ್ಸಿಂಗ್ ಕಾಲೇಜಿನಲ್ಲಿ ಆರು ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಕಂಡು ಬಂದಿದೆ.

ಮೊದಲ ಬ್ಯಾಚ್ ನಲ್ಲಿ ಆಗಮಿಸಿದ ವಿದ್ಯಾರ್ಥಿಗಳು ಆರ್​ಟಿಪಿಸಿಆರ್ ತಪಾಸಣೆಗೊಳಗಾಗಿದ್ದರು. ಆದರೆ, ಎರಡನೇ ಬ್ಯಾಚ್ ನ ಅನೇಕ ವಿದ್ಯಾರ್ಥಿಗಳು ಕೊರೊನಾ ತಪಾಸಣೆಗೆ ನಡೆಸದಿರುವುದರಿಂದ ಈ ಆತಂಕ ತಲೆದೂರಿದೆ‌.

ಸದ್ಯ ಸೋಂಕಿತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಇರಿಸಲಾಗಿದೆ. ಹಾಗೂ ಆರೋಗ್ಯ ಇಲಾಖೆ ಕಾಲೇಜಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಕಂಟೇನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಿ ಆದೇಶಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.