ಉಳ್ಳಾಲ: ಮಧ್ಯರಾತ್ರಿ ಭಾರೀ ಮಳೆಯ ಮಧ್ಯೆಯೂ ಆಹಾರ ಸಾಮಗ್ರಿ ಪೂರೈಸುವ ಮೂಲಕ ಕೊರೊನಾದಿಂದ ತತ್ತರಿಸಿರುವ ಉಳ್ಳಾಲ ಠಾಣೆಯ ಸಹೋದ್ಯೋಗಿಗಳಿಗೆ ಮೂಡಬಿದ್ರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಮತ್ತು ಅವರ ತಂಡ ನೆರವಾಗಿದೆ.
ಉಳ್ಳಾಲ ಪೊಲೀಸ್ ಠಾಣೆಯ ಕ್ವಾರೆಂಟೈನ್ ಸಿಬ್ಬಂದಿಗೆ ಆಹಾರ ಸಾಮಗ್ರಿ ಪೂರೈಸಿದ ತಂಡ, ಇದಕ್ಕಾಗಿ ತಡರಾತ್ರಿ 50 ಕಿ.ಮೀ. ದೂರದ ಮೂಡಬಿದ್ರೆ ಠಾಣೆಯಿಂದ ಆಗಮಿಸಿತ್ತು. ಈಗಾಗಲೇ ಉಳ್ಳಾಲ ಠಾಣೆಯ 12 ಮಂದಿ ಸಿಬ್ಬಂದಿಗೆ ಕೊರೊನಾ ತಗುಲಿದೆ. ಉಳಿದ ಸಿಬ್ಬಂದಿ ಉಳ್ಳಾಲದ ಖಾಸಗಿ ಕಟ್ಟಡದಲ್ಲಿ ಕ್ವಾರಂಟೈನ್ನಲ್ಲಿದ್ದಾರೆ. ಪೊಲೀಸರ ಸಂಕಷ್ಟಕ್ಕೆ ಸ್ಪಂದಿಸಿದ ಇನ್ಸ್ಪೆಕ್ಟರ್ ಬಗ್ಗೆ ಉಳ್ಳಾಲ ಪೊಲೀಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.