ಮಂಗಳೂರು: ನಗರದ ಎಂಆರ್ಪಿಎಲ್ ಕಂಪನಿಯ ಕಾರ್ಯಾಚರಣೆಗೆ ಮುಂದಿನ ದಿನಗಳಲ್ಲಿ ನದಿಯ ಸಿಹಿ ನೀರಿನ ಬದಲಾಗಿ ಸಮುದ್ರದ ಉಪ್ಪು ನೀರು ಬಳಸುವ ಯೋಜನೆ ರೂಪಿಸಲಾಗಿದ್ದು, 551 ಕೋಟಿ ರೂ. ವೆಚ್ಚದಲ್ಲಿ ತಯಾರಾಗುವ ಉಪ್ಪು ನೀರು ಶುದ್ಧೀಕರಣ ಘಟಕದ ಕಾಮಗಾರಿ ಅಂತಿಮ ಹಂತದಲ್ಲಿದೆ.
ಎಂಆರ್ ಪಿಎಲ್ ಮಾಲೀಕತ್ವದ 30 ಎಂಎಲ್ಡಿ ಸಾಮರ್ಥ್ಯದ ಎಸ್ಡಬ್ಲ್ಯುಆರ್ಒ ಡಿಸಾಲಿನೇಷನ್ ಪ್ಲಾಂಟ್ ಕಾಮಗಾರಿ ತಣ್ಣೀರುಬಾವಿಯಲ್ಲಿ ನಡೆಯುತ್ತಿದೆ. ಇದರ ಮುಖ್ಯ ಗುತ್ತಿಗೆದಾರ ಚೆನ್ನೈನ ವಿಎ ಟೆಕ್ ವಾಬಾಗ್ ಲಿ. ಕಾಮಗಾರಿ ನಡೆಸುತ್ತಿದ್ದರೆ, ಸಮುದ್ರದೊಳಗಿನ ಕಾಮಗಾರಿಯನ್ನು ಯೋಜಕ ಸಂಸ್ಥೆ ನಿರ್ವಹಿಸುತ್ತಿದೆ.
ಓದಿ : ಸ್ಥಳೀಯಾಡಳಿತದಲ್ಲೂ ಬಿಜೆಪಿ ಸರ್ವಾಧಿಕಾರ ನಡೆಸುತ್ತಿದೆ: ಮಾಜಿ ಶಾಸಕ ಜೆ.ಆರ್.ಲೋಬೊ
ಕಾಮಗಾರಿ ಪೂರ್ಣಗೊಂಡ ಬಳಿಕ ಅರಬ್ಬೀ ಸಮುದ್ರದಿಂದ ನೀರು ಇನ್ಟೆಲ್ ಪಂಪ್ ಹೌಸ್ಗೆ ನೀರು ಬಂದು, ಅಲ್ಲಿಂದ ಫ್ರೀ ಟ್ರೀಟ್ಮೆಂಟ್ ಪ್ಲ್ಯಾಂಟ್ನಲ್ಲಿ ಕೋಗ್ಯುಲೇಷನ್, ಫ್ಲ್ಯಾಕ್ಯಲೇಷನ್, ಲಾಮಲ್ಲಾ ಕ್ಲಾಫೈಯರ್ ನಡೆದು, ಅಲ್ಟ್ರಾ ಫಿಲ್ಟ್ರೇಶನ್ಗೊಂಡು ಆರ್ಒಗೆ ತಲುಪುತ್ತದೆ. ಬಳಿಕ ಅಲ್ಲಿಂದ ಬ್ರ್ಯಾಕಿಶ್ ಆರ್ಒಗೆ ತಲುಪಿ, ಪ್ರಾಡಕ್ಟ್ ನೀರು ಸಂಗ್ರಹ ಟ್ಯಾಂಕ್ನಿಂದ ಕೊಳವೆ ಮೂಲಕ 9.7 ಕಿ.ಮೀ. ದೂರದ ಎಂಆರ್ಪಿಲ್ಗೆ ಹೋಗುತ್ತದೆ.
ಇದಕ್ಕಾಗಿ ಒಟ್ಟು 14 ಎಕರೆ ಪ್ರದೇಶಗಳಲ್ಲಿ 20 ಪ್ರತ್ಯೇಕ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸಮುದ್ರ ಕಿನಾರೆಯಿಂದ ಒಂದು ಕಿ.ಮೀ. ದೂರ ಸಮುದ್ರದಲ್ಲಿ 1.6 ಮೀ. ವ್ಯಾಸದ ಕೊಳವೆ ಅಳವಡಿಸಲಾಗಿದೆ. ಅದರ ಮೂಲಕ ಘಟಕಕ್ಕೆ ಉಪ್ಪು ನೀರು ಹರಿದು ಬರಲಿದೆ. ಅದೇ ರೀತಿ ಸಮುದ್ರದಿಂದ ಮೀನು, ಕಸ ಬಂದಲ್ಲಿ ಅದನ್ನು ಪ್ರತ್ಯೇಕ ಮಾಡಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಎ.15 ರ ವೇಳೆಗೆ ನೀರು ಪೂರೈಸುವ ಉದ್ದೇಶದಿಂದ ಸುಮಾರು 700 ಕಾರ್ಮಿಕರು ಹಗಲು ರಾತ್ರಿ ದುಡಿಯುತ್ತಿದ್ದಾರೆ.