ETV Bharat / state

ಮಂಗಳೂರಿನಲ್ಲಿ ಡೆಂಗ್ಯು, ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್ಯು, ಮಲೇರಿಯಾ ಕಾಯಿಲೆಗಳನ್ನು ಮನೆ ಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಟೀಕಿಸಿದ್ರು.

ಮಂಗಳೂರಿನಲ್ಲಿ ಡೆಂಗ್ಯು ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ
author img

By

Published : Nov 9, 2019, 6:27 PM IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್ಯು, ಮಲೇರಿಯಾ ಕಾಯಿಲೆಗಳಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೊಳಗಾಗಿದರು. ಈ ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಈ ಮಾರಕ ರೋಗಗಳನ್ನು ಮನೆಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಟೀಕಿಸಿದ್ದಾರೆ.

ಮಂಗಳೂರಿನಲ್ಲಿ ಡೆಂಗ್ಯು, ಮಲೇರಿಯಾ ಮನೆ ಮನೆ ತಲುಪಿಸಿದ್ದೇ ಕಾಂಗ್ರೆಸ್ ಸಾಧನೆ: ಶಾಸಕ ಭರತ್ ಶೆಟ್ಟಿ

ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಲೇರಿಯಾ ನಿಯಂತ್ರಣಕ್ಕಾಗಿ ರಚಿಸಿದ್ದ 60 ಮಂದಿಯನ್ನೊಳಗೊಂಡ ಮಲೇರಿಯಾ ಸೆಲ್​ನ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡಲಿಲ್ಲ. ಅವರನ್ನು ಅಂದಿನ ಆಡಳಿತ ಸರ್ಕಾರ ನೀರಿನ ಬಿಲ್ ಕೊಡುವ ಮೀಟರ್ ರೀಡಿಂಗ್ ಕೆಲಸಕ್ಕೆ ನೇಮಿಸಿತು. ಇದರಿಂದ ನಗರದ ವಾರ್ಡ್​ಗಳಲ್ಲಿರುವ ಮನೆ ಮನೆಗೆ ತೆರಳಿ ಡೆಂಗ್ಯು, ಮಲೇರಿಯಾ ಹರಡದಂತೆ ಎಚ್ಚರವಹಿಸಲು ಹಾಗು ರೋಗಗಳನ್ನು ನಿಯಂತ್ರಿಸುವಲ್ಲಿ ಸಲಹೆ ನೀಡಬೇಕಾದವರು ಸಿಗದೆ ಜನರು ಸಂಕಷ್ಟಕ್ಕೊಳಗಾದರು ಎಂದು ಶೆಟ್ಟಿ ಆರೋಪಿಸಿದರು.

Intro:ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಡೆಂಗ್ಯು ಭಾದಿಸಿ ಹಲವರು ಸಾವನ್ನಪ್ಪಿದ್ದು ಸಾಕಷ್ಟು ಜನರು ಡೆಂಗ್ಯು ಮಲೇರಿಯಾ ದಿಂದ ಸಂಕಷ್ಟಕ್ಕೊಳಗಾಗಿದ್ದರು. ಡೆಂಗ್ಯುವನ್ನು ಮನೆಮನೆಗೆ ತಲುಪಿಸಿದ್ದೆ ಕಾಂಗ್ರೆಸ್ ಸಾಧನೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಆರೋಪಿಸಿದ್ದಾರೆ.

Body:ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮಲೇರಿಯಾ ಸೆಲ್ ನಲ್ಲಿದ್ದ ಸಿಬ್ಬಂದಿಗಳನ್ನು ಆ ಸಮಯದಲ್ಲಿ ನೀರಿನ ಬಿಲ್ ಕೊಡುವ ಮೀಟರ್ ರೀಡಿಂಗ್ ಕೆಲಸಕ್ಕೆ ನೇಮಿಸಲಾಗಿತ್ತು. ಇದರಿಂದ ಡೆಂಗ್ಯು ನಿಯಂತ್ರಣಕ್ಕೆ ಜನರು ಸಂಕಷ್ಟಕ್ಕೊಳಗಾದರು ಎಂದು ಅವರು ಆರೋಪಿಸಿದರು.
ಮಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಲು ಕಾಂಗ್ರೆಸ್ ಕಾರಣ. ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ಏಳು ಮೀಟರ್‌ ನೀರು ನಿಲ್ಲಿಸಿದರೆ ಮುಳುಗಡೆಯಾಗುವ ಪ್ರದೇಶಕ್ಕೆ ಪರಿಹಾರ ನೀಡಲು 120 ಕೋಟಿ ರೂ ಬೇಕಾಗುತ್ತದೆ. ಅದನ್ನು ನೀಡದ ಪರಿಣಾಮ 6 ಮೀಟರ್ ನೀರು ನಿಲ್ಲಿಸುವುದರಿಂದ ಮಂಗಳೂರಿಗೆ ನೀರಿನ ಸಮಸ್ಯೆಯಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ನ ನಿರ್ಲಕ್ಷ್ಯ ಕಾರಣ. ಇದಕ್ಕೆ 120 ಕೋಟಿ ರೂ ನೀಡಲು ಮುಖ್ಯ ಮಂತ್ರಿ ಗಳಲ್ಲಿ ವಿನಂತಿಸಲಾಗಿದ್ದು ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದರು.
ಬೈಟ್- ಭರತ್ ಶೆಟ್ಟಿ, ಶಾಸಕರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.