ETV Bharat / state

ಕಾಂಗ್ರೆಸ್ ನಿಜವಾದ ಕಮ್ಯುನಲ್ ಪಾರ್ಟಿ‌: ಸಿ.ಟಿ.ರವಿ - ಜಾತ್ಯತೀತತೆ

BJP leader C.T.Ravi criticizes congress: ಕಾಂಗ್ರೆಸ್ ಪಕ್ಷ ಹಾಗು ಸಿಎಂ ಸಿದ್ದರಾಮಯ್ಯನವರನ್ನು ಬಿಜೆಪಿ ಮುಖಂಡ ಸಿ.ಟಿ.ರವಿ ಟೀಕಿಸಿದರು.

ಮಾಜಿ ಸಚಿವ ಸಿ ಟಿ ರವಿ
ಮಾಜಿ ಸಚಿವ ಸಿ ಟಿ ರವಿ
author img

By ETV Bharat Karnataka Team

Published : Dec 6, 2023, 6:00 PM IST

Updated : Dec 6, 2023, 6:24 PM IST

ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆ

ಮಂಗಳೂರು: ಓಲೈಕೆ ರಾಜಕಾರಣದ ಮಾನಸಿಕತೆಯೇ ದೇಶ ವಿಭಜನೆಗೆ ಕಾರಣ. ಇಂಥ ಮಾನಸಿಕತೆ ಅಪಾಯಕಾರಿ. ಇದು ಕೋಮುವಾದಿ ರಾಜಕೀಯ ನೀತಿಯ ಪ್ರತ್ಯಕ್ಷ ದರ್ಶನ. ಹೀಗಾಗಿ ಕಾಂಗ್ರೆಸ್ ನಿಜವಾದ ಕಮ್ಯುನಲ್ ಪಾರ್ಟಿ‌ ಎಂದು ಮಾಜಿ ಸಚಿವ ಸಿ.ಟಿ.ರವಿ ಆರೋಪಿಸಿದರು.

ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ದೇಶ, ರಾಜ್ಯದ ಸಂಪತ್ತು ಬಡವರಿಗೆ, ಭಾರತೀಯರಿಗೆ ಸೇರಲಿ ಎಂದು ಏಕೆ ಹೇಳಿಲ್ಲ‌?. ಓಲೈಕೆ ರಾಜಕಾರಣ, ಓಟ್‌ ಬ್ಯಾಂಕ್​ಗಾಗಿ ಮುಸ್ಲಿಂ ಸಮುದಾಯಕ್ಕೆ ದೇಶದ ಸಂಪತ್ತಿನಲ್ಲಿ ಪಾಲಿದೆ ಎಂದು ಹೇಳುತ್ತಾರೆ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಲಿ ಎಂದರು.

ಸಿದ್ಧಗಂಗಾ ಮಠದಲ್ಲಿ ಗುರುಭವನದ ಉದ್ಘಾಟನೆಗೆ ಬಿಜೆಪಿಯವರನ್ನು ಕರೆಯಲಾಗಿದೆ. ಹಾಗೆಯೇ ಆ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಕರೆದಿದ್ದಾರೆ. ಕೇವಲ ಕಾಂಗ್ರೆಸ್‌ನವರನ್ನೇ ಕರೆದಿದ್ದಾರೆ ಅನ್ನೋದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣವಿದೆ. ಜಿಲ್ಲೆಯ ಉಸ್ತುವಾರಿ ಸಚಿವ ಜಿ.ಪರಮೇಶ್ವರ್, ರಾಜಣ್ಣ ಅದೇ ಜಿಲ್ಲೆಯವರು ಎಂದು ಕರೆದಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದರು.

ಸೋಮಣ್ಣ ಬಿಜೆಪಿ ಬಿಡುತ್ತಾರೆ ಎನ್ನುವುದು ತಪ್ಪು ಮಾಹಿತಿ. ಪಕ್ಷ ಹೇಳಿದ್ದಕ್ಕೆ ಅವರು ಎರಡೂ ಕಡೆ ಸ್ಪರ್ಧೆ ಮಾಡಿದ್ದರು. ಅವರು ಬಿಜೆಪಿ ಬಿಡುತ್ತಾರೆ ಅನ್ನೋದು ಊಹಾಪೋಹ. ಅವರು ದೆಹಲಿಗೆ ಯಾವಾಗ ಹೋಗ್ತಾರೆ ಅನ್ನುವ ಬಗ್ಗೆ ನನಗೆ ಮಾಹಿತಿಯಿಲ್ಲ. ಬಿಜೆಪಿಗೆ ಬರುವವರು ಕೇವಲ ರಾಜಕೀಯ ಕಾರಣಕ್ಕೆ ಬರಲ್ಲ. ಬಿಜೆಪಿಯ ವಿಚಾರಧಾರೆ ಒಪ್ಪಿಕೊಂಡು ಬರುತ್ತಾರೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು 28 ಕ್ಷೇತ್ರವನ್ನು ಗೆಲ್ಲುತ್ತೇವೆ. ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಸರಕಾರ ಇರುತ್ತೆ ಅನ್ನೋ ವಿಶ್ವಾಸ ಕಾಂಗ್ರೆಸ್‌ನವರಿಗೆ ಇಲ್ಲ. ಬಸವರಾಯರೆಡ್ಡಿ, ಬಿ.ಆರ್.ಪಾಟೀಲ್ ಬಂಡಾಯ ಎದ್ದಿದ್ದಾರೆ. ಪತ್ರ ಚಳುವಳಿ ಮಾಡುತ್ತಿದ್ದಾರೆ. ಅದನ್ನು ನಾವು ಹೇಳಿಕೊಟ್ಟಿದ್ದಲ್ಲ. ಕಾಂಗ್ರೆಸ್‌ನವರೇ ಹೇಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: 10 ಸಾವಿರ ಕೋಟಿ‌ ಅನುದಾನ ಹೇಳಿಕೆ ವಿಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಹೀಗಿದೆ

Last Updated : Dec 6, 2023, 6:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.