ETV Bharat / state

ಸಾರ್ವಜನಿಕ ಕಡತ ತಕ್ಷಣ ವಿಲೇವಾರಿ ಮಾಡಿ; ಸಹಾಯಕ ಕಮಿಷನರ್​ಗೆ ಕಾಂಗ್ರೆಸ್ ನಿಯೋಗ ಆಗ್ರಹ

author img

By

Published : Sep 16, 2020, 12:43 AM IST

ಬೆಳ್ತಂಗಡಿಯಲ್ಲಿ ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್‌ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ ವಿಲೇವಾರಿ ಮಾಡದೇ ಬಾಕಿ ಉಳಿಸಿಕೊಂಡಿರುವ ಸಾರ್ವಜನಿಕ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿತು.

congress comission meets assitanct commissioner
ಕಾಂಗ್ರೆಸ್ ನಿಯೋಗ ಭೇಟಿ

ಬೆಳ್ತಂಗಡಿ/ಮಂಗಳೂರು : ವರ್ಷಾನುಗಟ್ಟಲೇ ಬಾಕಿ ಇರಿಸಿಕೊಂಡಿರುವ ಸಾರ್ವಜನಿಕ ಕಡತಗಳನ್ನು ತಕ್ಷಣ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ನಿಯೋಗ ಮಂಗಳವಾರ ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್‌ಗೆ ಮನವಿ ಮಾಡಿತು.

ಕಾಂಗ್ರೆಸ್ ನಿಯೋಗ ಭೇಟಿ

ಮಿನಿ ವಿಧಾನಸೌಧದಲ್ಲಿ ಸಹಾಯಕ ಕಮಿಷನರ್ ಅವರನ್ನು ಭೇಟಿಯಾದ ನಿಯೋಗ, 94ಸಿ ಯೋಜನೆಯಡಿ ತಯಾರಾದ ಸುಮಾರು ಒಂದು ಸಾವಿರ ಹಕ್ಕು ಪತ್ರಗಳನ್ನು ತಕ್ಷಣ ಫಲಾನುಭವಿಗಳಿಗೆ ನೀಡಬೇಕು. ಎಪಿಎಲ್ ಪಡಿತರ ಚೀಟಿ ಸರಂಡರ್ ಮಾಡಿದ ಜನರಿಂದ ಪಡೆದುಕೊಂಡ ದಂಡದ ಹಣವನ್ನು ತಕ್ಷಣ ವಾಪಸ್ ನೀಡಲು ಕ್ರಮ ಕೈಗೊಳ್ಳಬೇಕು. ಬಾಕಿ ಉಳಿದ ಕಡತಗಳ ವಿವರವನ್ನು ತಹಶಿಲ್ದಾರ್‌ಗೆ ನೀಡಿ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡದಿರುವ ನಿಯಮವನ್ನು ಸಡಿಲಗೊಳಿಸಬೇಕು, ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾದ ಸ್ಥಿರಾಸ್ತಿಗಳ ಬಗ್ಗೆ ಮರು ತನಿಖೆಯಾಗಬೇಕು ಎಂದು ತಹಶೀಲ್ದಾರ್ ಹೇಳುತ್ತಿದ್ದು, ಇದನ್ನು ನಿಲ್ಲಿಸಿ ತಕ್ಷಣ ಹಕ್ಕುಪತ್ರ ನೀಡಬೇಕು, ದೃಢೀಕರಣ ನಕಲು ಕೋರಿ ನೀಡದ ಅರ್ಜಿಗಳನ್ನು ನೀಡದೇ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ, ಇದನ್ನು ತಕ್ಷಣ ಸರಿಪಡಿಸಬೇಕು, ತಾಲೂಕು ಕಚೇರಿಗೆ ಅರ್ಜಿ ನೀಡಲು ಬಂದಾಗ ಅದನ್ನು ವಾಪಾಸ್ ನೀಡುತ್ತಿದ್ದಾರೆ, ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.

ಇದೇ ವೇಳೆ ಶಿರ್ಲಾಲ್ ಗ್ರಾಮದ ಬಡ ಕುಟುಂಬಗಳಿಗೆ 2018 ರಲ್ಲಿ ಮಂಜೂರಾದ ಹಕ್ಕು ಪತ್ರ ಸಿದ್ದಗೊಂಡಿದ್ದರೂ ನೀಡದೆ ಸತಾಯಿಸುತ್ತಿರುವ ಬಗ್ಗೆ ಎಸಿ ಯವರ ಗಮನಕ್ಕೆ ತಂದಾಗ ತಕ್ಷಣ ಹಕ್ಕು ಪತ್ರ ತರಿಸಿ ನೀಡಿದರು. ತಾಲೂಕಿನ ವಿವಿಧೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಸೇತುವೆಗಳ ಕೆಳ ಭಾಗದಿಂದಲೂ ಮರಳು ಯಂತ್ರಗಳ ಮೂಲಕ ಮರಳು ತೆಗೆಯುತ್ತಿದ್ದಾರೆ. ಈ ಬಗ್ಗೆ ಎಸಿಯವರ ಗಮನಕ್ಕೆ ತಂದು ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳಬೇಕು , ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸೇತುವೆಗಳು ಕುಸಿಯುವ ಅತಂಕ ಎದುರಾಗಬಹುದು, ಎಂದು ಕಾಂಗ್ರೆಸ್​​ ನಿಯೋಗ ಮನವಿ ಮಾಡಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಮಾಜಿ ಸಚಿವ ಕೆ. ಗಂಗಾಧರ ಗೌಡ, ಮುಖಂಡರುಗಳಾದ ಜಯವಿಕ್ರಮ್, ಮನೋಹರ್ ಕುಮಾರ್ ಇಳಂತಿಲ, ಅಶ್ರಫ್ ನೆರಿಯ, ಬಿ.ಕೆ ವಸಂತ್, ನಮಿತಾ, ಶೇಖರ್ ಕುಕ್ಕೇಡಿ, ಅಭಿನಂದನ್ ಹರೀಶ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.