ETV Bharat / state

ಮಂಗಳೂರಿನ ಖ್ಯಾತ ವಕೀಲ ಕೆಎಸ್​ಎನ್ ರಾಜೇಶ್‌ ಮೇಲೆ ಲೈಂಗಿಕ ಕಿರುಕುಳ ಆರೋಪ - rape on woman in managlore

ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಕಾಲೇಜು ಯುವತಿಯ ಮೇಲೆ ವಕೀಲ ಕೆಎಸ್​ಎನ್ ರಾಜೇಶ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಾಗಿದೆ.

Complaint register on Renowned lawyer KN Rajesh over rape case
ಖ್ಯಾತ ವಕೀಲ ಕೆಎಸ್​ಎನ್ ರಾಜೇಶ್ ಮೇಲೆ ಅತ್ಯಾಚಾರದ ಆರೋಪ
author img

By

Published : Oct 19, 2021, 10:30 AM IST

Updated : Oct 19, 2021, 10:48 AM IST

ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ಕೆ.ಎಸ್.ಎನ್.ರಾಜೇಶ್ ಎಂಬುವರ ಮೇಲೆ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ.

ಲೋಕಾಯುಕ್ತ ಮತ್ತು ಎಸಿಬಿ ಸ್ಪೆಷಲ್ ಪಿಪಿ ಆಗಿರುವ ವಕೀಲ ರಾಜೇಶ್ ಮೇಲೆ ಈ ಸಂಬಂಧ ದೂರು ದಾಖಲಾಗಿದೆ. ತನ್ನ ಕಚೇರಿಯಲ್ಲಿ ಇಂಟರ್ನ್‌ಶಿಪ್ ಮಾಡಲು ಬಂದಿದ್ದ ಮಂಗಳೂರಿನ ಕಾನೂನು ಪದವಿ ಕಾಲೇಜಿನ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರಿನ ಖ್ಯಾತ ವಕೀಲ ಕೆಎಸ್​ಎನ್ ರಾಜೇಶ್‌ ಮೇಲೆ ಲೈಂಗಿಕ ಕಿರುಕುಳ ಆರೋಪ

ಮಂಗಳೂರು ನಗರ ಪೊಲೀಸ್ ‌ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯಿಸಿ, 'ಯುವತಿಗೆ ಕಚೇರಿಯಲ್ಲಿ ಲೈಂಗಿಕ ಕಿರುಕುಳ ನೀಡಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಸಂತ್ರಸ್ತೆಯ ಜೊತೆ ವಕೀಲ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಆ ಆಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ವಕೀಲರು ಉರ್ವ ಪೊಲೀಸ್ ಠಾಣೆಗೆ ಬಂದು ಆರೋಪಿಸಿದ್ದಾರೆ. ಇದರ ನಡುವೆ ಸಂತ್ರಸ್ತೆ ಯುವತಿಯ ಸ್ನೇಹಿತೆಗೆ ವಕೀಲನ ಕಡೆಯವರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಯುವತಿಯ ಸ್ನೇಹಿತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಐಪಿಎಸ್ ಅಧಿಕಾರಿ ಎಸಿಪಿ ರಂಜಿತ್ ಬಂಡಾರು ಅವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ತನಿಖೆ ನಡೆಸಲಾಗುತ್ತಿದೆ' ಎಂದು ಮಾಹಿತಿ ನೀಡಿದರು.

Last Updated : Oct 19, 2021, 10:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.