ETV Bharat / state

ಯೋಗಿ ಆದಿತ್ಯನಾಥ್ ವಿರುದ್ಧ ಅವಹೇಳನಕಾರಿ ಭಾಷಣ: ಮಿಥುನ್ ರೈ ವಿರುದ್ಧ ದೂರು ದಾಖಲು

'ಅಯೋಗ್ಯ ಆದಿತ್ಯನಾಥ್ ಅವರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಗೆ ಕಾಲಿಟ್ಟಲ್ಲಿ ಅವರ ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ನಮ್ಮ ಯೂತ್ ಕಾಂಗ್ರೆಸ್​​ನ ಕಾರ್ಯಕರ್ತರು ಮಾಡಲಿದ್ದಾರೆ' ಎಂದು ತುಳು ಭಾಷೆಯಲ್ಲಿ ಯುಪಿ ಮುಖ್ಯಮಂತ್ರಿ ವಿರುದ್ಧ ಭಾಷಣ ಮಾಡಿದ್ದಕ್ಕೆ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ವಿರುದ್ಧ ದೂರು ದಾಖಲಾಗಿದೆ.

Complaint against Mithun Rai
ಮಿಥುನ್ ರೈ
author img

By

Published : Oct 10, 2020, 11:13 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದಾರೆಂದು ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Complaint against Mithun Rai
ದೂರು ಪ್ರತಿ

ಮಿಥುನ್ ರೈ ಅ.8ರಂದು‌ ನಗರದ ಉಳ್ಳಾಲ ತೊಕ್ಕೊಟ್ಟು ಬಳಿ ಸಾರ್ವಜನಿಕ ಸಭೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಪ್ರಚೋದನಾಕಾರಿ ಭಾಷಣ ಮಾಡಿ, 'ಅಯೋಗ್ಯ ಆದಿತ್ಯನಾಥ್ ಅವರು ಕರ್ನಾಟಕದ ದ.ಕ.ಜಿಲ್ಲೆಗೆ ಕಾಲಿಟ್ಟಲ್ಲಿ ಅವರ ಮುಖಕ್ಕೆ ಮಸಿ ಬಳಿಯುವ ಕೆಲಸವನ್ನು ನಮ್ಮ ಯೂತ್ ಕಾಂಗ್ರೆಸ್​​ನ ಕಾರ್ಯಕರ್ತರು ಮಾಡಲಿದ್ದಾರೆ' ಎಂದು ತುಳು ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆ.

Complaint against Mithun Rai
ಮಿಥುನ್ ರೈ

ಮಿಥುನ್ ರೈ ಅವರು ಉದ್ದೇಶಪೂರ್ವಕವಾಗಿ ಗುಂಪು ಘರ್ಷಣೆ, ಹಲ್ಲೆ, ದೊಂಬಿ ಗಲಾಟೆಗಳು ನಡೆಯುವ ಉದ್ದೇಶದಿಂದ ಪ್ರೇರೇಪಿಸಿ ಭಾಷಣ ಮಾಡಿದ್ದಾರೆ. ಈ ಮೂಲಕ ಅವರು ಸಂಜ್ಞೆಯ ಅಪರಾಧ ಎಸಗಿದ್ದು, ಆದುದರಿಂದ ಅವರ ಮೇಲೆ ಐಪಿಸಿ ಸೆಕ್ಷನ್ 505(2) ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ದ.ಕ.ಜಿಲ್ಲಾಧ್ಯಕ್ಷ ಗುರುದತ್ ನಾಯಕ್ ಬರ್ಕೆ ಪೊಲೀಸ್ ಠಾಣೆಯ ನಿರೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.