ETV Bharat / technology

ರಾಯಲ್​ ಎನ್​ಫೀಲ್ಡ್​ ಫಸ್ಟ್​ ಇವಿ ಲುಕ್​ ರಿವೀಲ್​

ರಾಯಲ್​ ಎನ್​ಫೀಲ್ಡ್​ ಫಸ್ಟ್​ ಇವಿ ಲುಕ್​ ಅನಾವರಣಗೊಳಿಸಿದೆ.

FLYING FLEA C6 PRICE  FLYING FLEA C6 SPECIFICATIONS  FLYING FLEA C6  FLYING FLEA C6 2026
ರಾಯಲ್​ ಎನ್​ಫಿಲ್ಡ್​ ಫಸ್ಟ್​ ಇವಿ ಲುಕ್​ ರಿವಿಲ್ (Royal Enfield)
author img

By ETV Bharat Tech Team

Published : Nov 6, 2024, 11:06 AM IST

Royal Enfield Flying Flea C6: ದೇಶದಲ್ಲಿ ಎಲೆಕ್ಟ್ರಿಕ್​ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳಿಗೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಡಿಮ್ಯಾಂಡ್​ ಹೆಚ್ಚುತ್ತಿದೆ. ಹೀಗಾಗಿ ಹಲವಾರು ಕಂಪನಿಗಳು ಹೊಸ ಫೀಚರ್​ಗಳೊಂದಿಗೆ ತಮ್ಮ ಬೈಕ್​ಗಳನ್ನು ರಿಲೀಸ್​ ಮಾಡಲು ಮುಂದಾಗುತ್ತಿದ್ದಾರೆ. ಈ ಕ್ರಮದಲ್ಲಿ ಈಗಾಗಲೇ ಹಲವು ಕಂಪನಿಗಳು ಈ ವಿಭಾಗದಲ್ಲಿ ಬೈಕ್​ಗಳನ್ನು ಲಾಂಚ್​ ಮಾಡಿವೆ. ಈಗ ಚೆನ್ನೈಗೆ ಸೇರಿರುವ ಪ್ರಮುಖ ಮೋಟಾರ್ ಸೈಕಲ್​ ತಯಾರಿ ಸಂಸ್ಥೆ ರಾಯಲ್​ ಎನ್​ಫೀಲ್ಡ್​ ಸಹ ಇವಿ ಸೆಗ್ಮೆಂಟ್‌ಗೆ ಕಾಲಿಟ್ಟಿದೆ.

ದೇಶದಲ್ಲಿ 250-750ಸಿಸಿ ಮೋಟಾರ್‌ಸೈಕಲ್​ ವಿಭಾಗದಲ್ಲಿ ನಂಬರ್​ ಒನ್​ ಆಗಿರುವ ರಾಯಲ್​ ಎನ್‌ಫೀಲ್ಡ್​ ತನ್ನ ಮೊದಲ ಎಲೆಕ್ಟ್ರಿಕ್​ ಬೈಕ್​ ಅನ್ನು ಆವಿಷ್ಕರಿಸಿದೆ. ಫ್ಲೈಯಿಂಗ್​ ಫ್ಲಿ ಸಿ6 ಹೆಸರಿನ ಮೂಲಕ ಇದನ್ನು ಪರಿಚಯಿಸಿದೆ. ಇದು ರೆಟ್ರೋ ಫ್ಯೂಚರಿಸ್ಟಿಕ್​ ಮೋಟಾರ್‌ಸೈಕಲ್​. ಇನ್ಮುಂದೆ ಮಾರ್ಕೆಟ್​ನಲ್ಲಿ ಪರಿಚಯಿಸುವ ಎಲ್ಲ ಎಲೆಕ್ಟ್ರಿಕ್​ ಬೈಕ್​ಗಳನ್ನು ‘ಫ್ಲೈಯಿಂಗ್​ ಫ್ಲಿ’ ಎಂಬ ಹೆಸರಿನಿಂದ ಪರಿಚಯಿಸಲಾಗುವುದು ಎಂದು ಎನ್​ಫೀಲ್ಡ್​ ಪ್ರಕಟಿಸಿದೆ.

ಫ್ಲೈಯಿಂಗ್​ ಫ್ಲಿ ಸಿ6 ಫೀಚರ್​​ಗಳು:

  • ಈ ಬೈಕ್​ ರೌಂಡ್​ ಎಲ್​ಇಡಿ ಹೆಡ್​ಲೈಟ್, ಮುಂದಿನ ಭಾಗದಲ್ಲಿ ಗಿರ್ಡರ್​ ಫೋರ್ಕ್​ ಜೊತೆ ಬರಲಿದೆ.
  • ಎಬಿಎಸ್​, ಟ್ರಾಕ್ಷನ್​ ಕಂಟ್ರೋಲ್​ ಒಳಗೊಂಡಂತಿದೆ.
  • ಎರಡು ಸೀಟ್​​ಗಳ ವರ್ಷನ್​ ಎಲೆಕ್ಟ್ರಿಕ್​ ಮೋಟಾರ್​ಸೈಕಲ್​ ಬರಬಹುದೆಂದು ಅಂದಾಜು ಮಾಡಲಾಗಿದೆ.
  • ಬೈಕ್​ ಟಿಎಫ್​ಟಿ ಡಿಸ್​ಪ್ಲೇ ಒಳಗೊಂಡಂತಿದೆ.
  • ಸಿಂಗಲ್​ ಚಾರ್ಜಿಂಗ್​ನಲ್ಲೇ 100-150 ಕಿಲೋ ಮೀಟರ್​ ಮೈಲೇಜ್​ ಕೊಡುವ ನಿರೀಕ್ಷೆ ಇದೆ.
  • ಬೈಕ್​ ಲುಕ್​ ಅನ್ನು ರಿವಿಲ್​ ಮಾಡಿರುವ ರಾಯಲ್​ ಎನ್​ಫೀಲ್ಡ್​ ಇದರ ಬೆಲೆ ಮತ್ತು ಫೀಚರ್​ಗಳ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.
  • ಕಂಪನಿ 2026ರ ವೇಳೆಗೆ ಇದನ್ನು ಮಾರುಕಟ್ಟೆಗೆ ತರಲು ಕಸರತ್ತು ನಡೆಸುತ್ತಿದೆ.

ರಾಯಲ್​ ಎನ್​ಫೀಲ್ಡ್​ ಇವಿ ಟೀಸರ್​: ರಾಯಲ್​ ಎನ್​ಫೀಲ್ಡ್​ ತನ್ನ ಮೊದಲ ಎಲೆಕ್ಟ್ರಿಕ್​ ಬೈಕ್​ ಟೀಸರ್​ ರಿಲೀಸ್​ ಮಾಡಿದೆ. ತನ್ನ ಸೋಶಿಯಲ್ ಮೀಡಿಯಾ ಹ್ಯಾಂಡಲ್​ನಲ್ಲಿ ಕಂಪನಿ ಇದರ ಮೊದಲ ಟೀಸರ್​ ಅನ್ನು ಅಧಿಕೃತವಾಗಿ ರಿಲೀಸ್​ ಮಾಡಿದೆ. ಟೀಸರ್​ನಲ್ಲಿ ಪ್ಯಾರಾಚೂಟ್​ ಸಹಾಯದಿಂದ ಬೈಕ್​ ಬಾಹ್ಯಾಕಾಶದಿಂದ ಭೂಮಿಗೆ ಬರುತ್ತಿರುವಂತೆ ತೋರಿಸಿದ್ದಾರೆ.

ಇದನ್ನೂ ಓದಿ: ಬಾಹ್ಯಾಕಾಶದಿಂದಲೇ ಮತ ಚಲಾಯಿಸಲಿರುವ ಸುನಿತಾ ವಿಲಿಯಮ್ಸ್; ಇದು ಹೇಗೆ ಸಾಧ್ಯ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.