ಮಂಗಳೂರು: ತನಿಖೆಗೆ ಮೂರು ತಂಡ ಮಾಡಿದ್ದೇವೆ. ಮಧ್ಯವಯಸ್ಕ ವ್ಯಕ್ತಿಯೋರ್ವ ಸಂಶಯಾಸ್ಪದ ವಾಗಿ ಕಂಡುಬಂದಿದ್ದು, ತನಿಖೆ ನಡೆಸಲಾಗುವುದು ಎಂದು ಕಮಿಷನರ್ ಹರ್ಷ ಹೇಳಿದ್ದಾರೆ.
ಸಂಶಯಾಸ್ಪದ ವ್ಯಕ್ತಿ ಆಟೋ ರಿಕ್ಷಾದಲ್ಲಿ ಬಂದು ಬ್ಯಾಗ್ ಇರಿಸಿದ್ದಾನೆ. ಈ ಬಗ್ಗೆ ಎಲ್ಲಾ ರೀತಿಯ ತನಿಖೆ ನಡೆಸುತ್ತೇವೆ. ಈಗಾಗಲೇ ತಜ್ಞರ ತಂಡ ಬಾಂಬ್ ನಿಷ್ಕ್ರಿಯಗೊಳಿಸಿದೆ ಎಂದು ಪ್ರಕಟಿಸಿದರು.
ಇಂಡಿಗೋ ವಿಮಾನಕ್ಕೆ ಬೆದರಿಕೆ ಕರೆ ಮಾಡಿರುವ ವಿಚಾರದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಟರ್ಮಿನಲ್ ಮ್ಯಾನೇಜರ್ಗೆ ಕರೆ ಬಂದಿದೆ. ಆದರೆ, ಆತಂಕದ ಅಗತ್ಯ ಇಲ್ಲ. ಅಗತ್ಯ ಸುರಕ್ಷಾ ಕ್ರಮವನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹಿತದೃಷ್ಟಿಯಿಂದ ಈ ಬಗ್ಗೆ ಮಾಹಿತಿ ಇದ್ದವರು ಪೊಲೀಸರಿಗೆ ತಿಳಿಸಿ ಎಂದು ಮನವಿ ಸಹ ಮಾಡಿದರು.