ETV Bharat / state

ಮಾಧ್ಯಮಗಳ ಮೇಲೆ ಹರಿಹಾಯ್ದ ಸಿಎಂ ಕುಮಾರಸ್ವಾಮಿ - ಸಿಎಂ ಕುಮಾರಸ್ವಾಮಿ

ಇಂದು ಮಂಗಳೂರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ- ನಿಮ್ಮ ಇಡೀ ಸರ್ಕಾರವೇ ಮಂಡ್ಯದಲ್ಲಿ ಹೋಗಿ ಕುಳಿತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಕೆಂಡಾಮಂಡಲವಾದ ಕುಮಾರಸ್ವಾಮಿ.

ಮಾಧ್ಯಮಗಳ ಮೇಲೆ ಹರಿಹಾಯ್ದ ಸಿಎಂ
author img

By

Published : Apr 7, 2019, 1:01 PM IST

ಮಂಗಳೂರು: ಮಾಧ್ಯಮದವರು ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ಒಂದೇ ಕಡೆ ಚುನಾವಣೆ ನಡೆಯುತ್ತಿರುವ ಹಾಗೆ ಬಿಂಬಿಸಲು ಹೊರಟಿದ್ದಾರೆ ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಮಾಧ್ಯಮಗಳ ಮೇಲೆ ಹರಿಹಾಯ್ದ ಸಿಎಂ

ಮಂಡ್ಯ ಚುನಾವಣೆಯ ಬಗ್ಗೆ ಮೇ 23 ರಂದು ಮಾತನಾಡುತ್ತೇನೆ. ಮಂಡ್ಯದಲ್ಲಿ ಮಾಧ್ಯಮದ ವ್ಯವಸ್ಥಾಪಕರು ಪಕ್ಷಗಳಿಗಿಂತ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ನನ್ನನ್ನು ಯಾವ ರೀತಿ ಮುಗಿಸಬೇಕೆಂದು ಕಾಯುತ್ತಿದ್ದಾರೆ. ನನಗೆ ಮಾಧ್ಯಮದ ಮೇಲೆ ಯಾವುದೇ ಕೋಪ ಇಲ್ಲ. ಆದರೆ ಅವರಿಗೆ ಏಕೆ ಕೋಪ ಎಂದು ಗೊತ್ತಿಲ್ಲ. ಎಲ್ಲಾ ಮಾಧ್ಯಮದವರು ನನ್ನ ವಿರುದ್ಧವಾಗಿ ನಿಂತಿದ್ದಾರೆ. ಇದೊಂದು ಪ್ರಚಾರ ಎಂದು ಹೇಳಲಾಗುತ್ತಾ, ಮಾಧ್ಯಮಗಳಿಗೆ ನೀತಿ ಎಂಬುದಿಲ್ಲವೆ ಎಂದು ಪ್ರಶ್ನಿಸಿದರು.

ಇಂದು ಮಂಗಳೂರಿನಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಅವರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದರು. ನಿಮ್ಮ ಇಡೀ ಸರ್ಕಾರವೇ ಮಂಡ್ಯದಲ್ಲಿ ಹೋಗಿ ಕುಳಿತಿದೆಯಲ್ಲಾ ಎಂಬ ಪ್ರಶ್ನೆಗೆ ಕೆಂಡಾಮಂಡಲವಾದ ಸಿಎಂ, ನಮ್ಮ ಶಾಸಕರೆಲ್ಲ ಇರೋದು ಅಲ್ಲದೆ ಅವರಿನ್ನು ಬೇರೆಡೆ ಹೋಗೋಕಾಗುತ್ತಾ ಅಂತಾ ಮರು ಪ್ರಶ್ನೆ ಹಾಕಿದರು.

ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಈ ಮೂರೂ ಕ್ಷೇತ್ರಗಳನ್ನು‌ ಗೆಲ್ಲುವ ಗುರಿಯೊಂದಿಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸೇರಿದಂತೆ ನಮ್ಮ ಮುಖಂಡರುಗಳೊಂದಿಗೆ ಯಾವ ರೀತಿ ಚುನಾವಣೆಯನ್ನು‌ ಎದುರಿಸಬೇಕೆಂದು ಚರ್ಚೆ ಮಾಡಿದ್ದೇವೆ‌. ಈಗಾಗಾಲೇ ಉತ್ತರ ಕರ್ನಾಟಕ ಭಾಗಗಳಲ್ಲಿ ಹಾಗೂ ಉಡುಪಿ ಚಿಕ್ಕಮಗಳೂರು ಎಲ್ಲಾ ಕಡೆಗಳಲ್ಲಿ ಸಭೆ ನಡೆಸಿದ್ದೇನೆ. ಅಲ್ಲಿ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಿಎಂ ಹೇಳಿದರು.

ನರೇಂದ್ರ ಮೋದಿ ಎ.13 ರಂದು ರಾಜ್ಯದಲ್ಲಿ ಪ್ರಚಾರ ನಡೆಸಲಿದ್ದಾರೆ ಎಂಬುದರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಲಾಗಿದೆ. ಅವರದ್ದು 13 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ತೊಂದರೆ ಆಗುತ್ತೆ ಅನ್ನೋ ಕಾರಣಕ್ಕೆ ಒಂದೆರಡು ದಿನ ಹೆಚ್ಚು ಕಡಿಮೆ ಆಗಬಹುದು ಎಂದು ತಿಳಿಸಿದರು.

ಮೋದಿ ಬಂದು ಏನು ಸಂದೇಶ ನೀಡಲಿದ್ದಾರೆ. ಈ ಜಿಲ್ಲೆಗೆ ಪೂರಕವಾಗಿರುವಂತಹ ಒಂದೊಂದೇ ಸಂಸ್ಥೆಗಳನ್ನು ಮುಚ್ಚಿಕೊಂಡು ಬಂದಿದ್ದಾರೆ. ನರೇಂದ್ರ ಮೋದಿಯವರ ಮುಖ ನೋಡಿ ವೋಟು ಹಾಕಲು ಹೇಳುತ್ತಿದ್ದಾರೆ. ಏನು ಕೊಟ್ಟಿದ್ದಾರೆ ಎಂದು ಅನ್ನೋದು ಬೇಕಲ್ವಾ. ಈ ದೇಶದಲ್ಲೇ ದ.ಕ.ಜಿಲ್ಲೆ ಅತ್ಯಂತ ತಿಳುವಳಿಕೆ ಉಳ್ಳವರ ಕ್ಷೇತ್ರ. ನರೇಂದ್ರ ಮೋದಿ ಮಂಗಳೂರಿಗೆ ಕೊಟ್ಟಂತಹ ಕೊಡುಗೆ ಏನು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣವನ್ನು‌ ನಷ್ಟದಲ್ಲಿಲ್ಲದಿದ್ದರೂ ಖಾಸಗಿಯವರಿಗೆ ಕೊಟ್ಟರು. ವಿಜಯಾ ಬ್ಯಾಂಕನ್ನು ಬರೋಡಾ ಬ್ಯಾಂಕ್​ನೊಂದಿಗೆ ವಿಲೀನ ಮಾಡಿದ್ದಾರೆ. ಇದಕ್ಕೆ ಜನ ಮೋದಿಗೆ ವೋಟ್ ಹಾಕಬೇಕಾ. ಇದು‌ ಮಂಗಳೂರಿನ ಜನತೆಯ ಸ್ವಾಭಿಮಾನದ ಪ್ರಶ್ನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

Intro:ಮಂಗಳೂರು: ಮಂಡ್ಯ ಚುನಾವಣೆಯ ಬಗ್ಗೆ ಮೇ23 ರಂದು ಮಾತನಾಡುತ್ತೇನೆ. ಮಂಡ್ಯದಲ್ಲಿ ಮಾಧ್ಯಮದ ವ್ಯವಸ್ಥಾಪಕರು ಪಕ್ಷಗಳಿಗಿಂತ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ. ನನ್ನನ್ನು ಯಾವ ರೀತಿ ಮುಗಿಸಬೇಕೆಂದು ಕಾಯುತ್ತಿದ್ದಾರೆ. ನನಗೆ ಮಾಧ್ಯಮದ ಮೇಲೆ ಯಾವುದೇ ಕೋಪ ಇಲ್ಲ. ಆದರೆ ಅವರಿಗೆ ಏಕೆ ಕೋಪ ಎಂದು ಗೊತ್ತಿಲ್ಲ‌. ಎಲ್ಲಾ ಮಾಧ್ಯಮದವರು ನನ್ನ ವಿರುದ್ಧವಾಗಿ ನಿಂತಿದ್ದಾರೆ. ಇದೊಂದು ಪ್ರಚಾರ ಎಂದು ಹೇಳಲಾಗುತ್ತಾ ಮಾಧ್ಯಮಗಳಿಗೆ ನೀತಿ ಎಂಬುದಿಲ್ಲವೆ. ಮಾಧ್ಯಮದವರು ಇಡೀ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಅಲ್ಲ ಕೇವಲ ಮಂಡ್ಯ ಕ್ಷೇತ್ರದಲ್ಲಿ ಮಾತ್ರ ಒಂದೇ ಕಡೆ ಚುನಾವಣೆ ನಡೆಯುವ ಹಾಗೆ ಬಿಂಬಿಸಲು ಹೊರಟಿದ್ದಾರೆ. ನಿಖಿಲ್ ಗೆ ಮಾಧ್ಯಮಗಳಲ್ಲಿ ನೀಡಿದ ಪ್ರಚಾರ ಸಮಾಧಾನಕರ ವಾಗಿದೆಯಾ ಎಂದು ಕುಮಾರಸ್ವಾಮಿ ಹೇಳಿದರು.

ಇಂದು ಮಂಗಳೂರಿನಲ್ಲಿ ನಡೆಯುವ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಅವರು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿಮ್ಮ ಇಡೀ ಸರಕಾರವೇ ಮಂಡ್ಯದಲ್ಲಿ ಹೋಗಿ ಕುಳಿತಿದೆಯಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ಕೆಂಡಾಮಂಡಲವಾದ ಸಿಎಂ ಕುಮಾರಸ್ವಾಮಿ ಯಾರು ಹೇಳಿದ್ದು ನಿಮಗೆ, ಈ ಪ್ರಶ್ನೆಯನ್ನು ನಿಮ್ಮ ಆತ್ಮಕ್ಕೆ ಕೇಳಿಕೊಳ್ಳಿ. ನಮ್ಮ ಶಾಸಕರು ಅಲ್ಲೇ ಇದ್ದರೆ ಬೇರೆ ಕಡೆ ಹೋಗೋಕ್ಕೆ ಆಗುತ್ತಾ. ಅವರ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಬೇಡವಾ. ನೀವು ಕೇಳುವ ಪ್ರಶ್ನೆಗೆ ಅರ್ಥ ಇದೆಯಾ. ನನ್ನ ಸರಕಾರ ರಚನೆಯಾದಂದಿನಿಂದ ಕೆಲಸ ಮಾಡದ ಹಾಗೆ ಯಾವ ರೀತಿ
ಹಿಂಸೆ ಕೊಟ್ಟಿದ್ದೀರಿ ಎಂದು ಕಳೆದ ಒಂಬತ್ತು ತಿಂಗಳಿನಿಂದ ತೋರಿಸಿದ ಘಟನೆಗಳನ್ನು ಒಂದು ಸಲ ರೀವೈಂಡ್ ಮಾಡಿ ನೋಡಿಕೊಳ್ಳಿ ಎಂದು ಮಾಧ್ಯಮದ ಮೇಲೆ ಹರಿಹಾಯ್ದರು.

Body:ಮಂಗಳೂರು ಮತ್ತು ಉಡುಪಿ, ಚಿಕ್ಕಮಗಳೂರು ಮೂರೂ ಕ್ಷೇತ್ರಗಳನ್ನು‌ ಗೆಲ್ಲಬೇಕೆಂಬ ನಾನು, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ನಮ್ಮ ಮುಖಂಡರುಗಳೊಂದಿಗೆ ಯಾವ ರೀತಿ ಚುನಾವಣೆಯನ್ನು‌ ಎದುರಿಸಬೇಕೆಂದು ನಾವು ಚರ್ಚೆ ಮಾಡಿದ್ದೇವೆ‌. ಈಗಾಗಾಲೇ ಉತ್ತರ ಕರ್ನಾಟಕ ಭಾಗಗಳಲ್ಲಿ ಹಾಗೂ ಉಡುಪಿ ಚಿಕ್ಕಮಗಳೂರು ಕಡೆಗಳಲ್ಲಿ ಎಲ್ಲಾ ಕಡೆಗಳಲ್ಲಿ ಸಭೆ ನಡೆಸಿದ್ದೇನೆ. ಅಲ್ಲಿ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

Conclusion:ನರೇಂದ್ರ ಮೋದಿಯವರ ಎ.13 ರಂದು ಮತ ಪ್ರಚಾರ ನಡೆಸಲಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಹುಲ್ ಗಾಂಧಿ, ಸಿದ್ದರಾಮಯ್ಯರವರ ಕಾರ್ಯಕ್ರಮವೂ ಇಲ್ಲಿ ಆಯೋಜನೆ ಮಾಡಲಾಗಿದೆ. ಅವರದ್ದೂ 13ರಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಆದರೆ ಕ್ಲ್ಯಾಷ್ ಆಗುತ್ತೆ ಅನ್ನೋ ಕಾರಣಕ್ಕೆ ಒಂದೆರಡು ದಿನ ಹೆಚ್ಚುಕಡಿಮೆ ಆಗಬಹುದು. ಮೋದಿ ಬಂದು ಏನು ಸಂದೇಶ ನೀಡಲಿದ್ದಾರೆ. ಈ ಜಿಲ್ಲೆಗೆ ಪೂರಕವಾಗಿರುವಂತಹ ಒಂದೊಂದೇ ಸಂಸ್ಥೆಗಳನ್ನು ಮುಚ್ಚಿಕೊಂಡು ಬಂದಿದ್ದಾರೆ. ನರೇಂದ್ರ ಮೋದಿಯವರ ಮುಖ ನೋಡಿ ಓಟು ಹಾಕಲು ಹೇಳುತ್ತಿದ್ದಾರೆ. ಏನು ಕೊಟ್ಟಿದ್ದಾರೆ ಎಂದು ಬೇಕಲ್ವಾ. ಈ ದೇಶದಲ್ಲೇ ದ.ಕ.ಜಿಲ್ಲೆ ಅತ್ಯಂತ ತಿಳುವಳಿಕೆ ಉಳ್ಳವರ ಕ್ಷೇತ್ರ. ನರೇಂದ್ರ ಮೋದಿ ಮಂಗಳೂರಿಗೆ ಕೊಟ್ಟಂತಹ ಕೊಡುಗೆ ಏನು. ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣವನ್ನು‌ ನಷ್ಟದಲ್ಲಿಲ್ಲದಿದ್ದರೂ ಖಾಸಗಿಯವರಿಗೆ ಕೊಟ್ಟರು. ವಿಜಯಾ ಬ್ಯಾಂಕನ್ನು ಬರೋಡಾ ಬ್ಯಾಂಕ್ ನೊಂದಿಗೆ ವಿಲೀನ ಮಾಡಿದ್ದಾರೆ. ಇದಕ್ಕೆ ಜನ ಮೋದಿಗೆ ಓಟ್ ಹಾಕಬೇಕಾ. ಇದು‌ ಮಂಗಳೂರಿನ ಜನತೆಯ ಸ್ವಾಭಿಮಾನ ದ ಪ್ರಶ್ನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.