ಬೆಳ್ತಂಗಡಿ: ಮಡಂತ್ಯಾರು ಗ್ರಾ.ಪಂ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರುಗಳ ನೇತೃತ್ವದ ಐಸಿವೈಎಂ ಮಡಂತ್ಯಾರು, ಶ್ಯಾಡೋ ರೈಡರ್ಸ್ ಮಡಂತ್ಯಾರು, ಕುಕ್ಕಳ ಗ್ರಾಮದ ಬೆರ್ಕಳ ಯುವ ಸಮುದಾಯದ ಸಹಕಾರದಿಂದ ಮಡಂತ್ಯಾರು ಮತ್ತು ಪುಂಜಾಲಕಟ್ಟೆ ಪೇಟೆಯಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಮಡಂತ್ಯಾರು ಪಿಡಿಒ ನಾಗೇಶ್ ಎಂ. ಕೋವಿಡ್ -19 ಕುರಿತು ಜಾಗೃತಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೆ, ಧರ್ಮಗುರುಗಳಾದ ಪಾ. ಬೇಸಿಲ್ ವಾಸ್, ಗ್ರಾ.ಪಂ. ಸದಸ್ಯ ಕಿಶೋರ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ರಮೇಶ್ ಮೂಲ್ಯ. ರೋಟರಿ ಕ್ಲಬ್ ಸದಸ್ಯರು, ಕ್ಯಾಥೊಲಿಕ್ ಸಭಾದ ಸದಸ್ಯರು ಮತ್ತಿತರರು ಹಾಜರಿದ್ದರು.