ETV Bharat / state

ಮೆರಿ ಕ್ರಿಸ್ಮಸ್‌! ಇಂದು ಯೇಸುಕ್ರಿಸ್ತನ ಜನ್ಮದಿನ: ನಾಡಿನೆಲ್ಲೆಡೆ ಕ್ರಿಸ್ಮಸ್ ಖುಷಿ!

ಭಾರತದಲ್ಲೂ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಕ್ರಿಶ್ಚಿಯನ್‌ ಧರ್ಮೀಯರು ಚರ್ಚ್​ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರಿಸ್ಮಸ್ ಟ್ರೀ ಅಲಂಕಾರ, ಸ್ನೇಹಿತರು-ಬಂಧುಗಳಿಗೆ ವಿಶೇಷ ಊಟೋಪಚಾರ, ಉಡುಗೊರೆಗಳನ್ನು ನೀಡುವುದು ಹೀಗೆ ಖುಷಿಯೋ ಖುಷಿ.

Christmas celebration
ಕ್ರಿಸ್ಮಸ್ ಹಬ್ಬ ಆಚರಣೆ
author img

By

Published : Dec 25, 2022, 8:57 AM IST

Updated : Dec 25, 2022, 12:46 PM IST

ನಾಡಿನೆಲ್ಲೆಡೆ ಕ್ರಿಸ್ಮಸ್ ಖುಷಿ!

ಇಂದು ಡಿಸೆಂಬರ್ 25. ವಿಶೇಷತೆ ಏನು ಅಂತ ಬಿಡಿಸಿ ಹೇಳಬೇಕಿಲ್ಲ, ಯಾಕೆಂದರೆ ಕ್ರಿಸ್ಮಸ್‌ ಹಬ್ಬ. ಈ ದಿನವನ್ನು ಜಗತ್ತಿನಾದ್ಯಂತ ಅದ್ಧೂರಿಯಿಂದ ಆಚರಿಸಲಾಗುತ್ತದೆ. ಯೇಸುಕ್ರಿಸ್ತನ ಜನ್ಮದಿನದ ಆಚರಣೆಯೇ ಈ ಕ್ರಿಸ್ಮಸ್. ಪ್ರಪಂಚದಾದ್ಯಂತ ಹೆಚ್ಚು ಜನರು ಸಂತೋಷದಿಂದ ಆಚರಿಸುವ ಹಬ್ಬಗಳಲ್ಲಿ ಇದೂ ಒಂದು.

ಯೇಸುಕ್ರಿಸ್ತರ ಜನನ: ಕ್ರಿಸ್‌ಮಸ್ ಟ್ರೀ ಅಲಂಕಾರ, ಸ್ನೇಹಿತರು-ಬಂಧುಗಳಿಗೆ ಉಡುಗೊರೆ ನೀಡುವುದು, ಅತಿಥಿಗಳನ್ನು ಔತಣಕೂಟಗಳಿಗೆ ಆಹ್ವಾನಿಸುವುದು.. ಹೀಗೆ ಹಬ್ಬವನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಡಿ.25 ರಂದು ಗೋದಲಿಯೊಂದರಲ್ಲಿ ಯೇಸುಕ್ರಿಸ್ತನು ಬಡಗಿಯಾದ ತಂದೆ ಜೋಸೆಫ್ ಮತ್ತು ತಾಯಿ ಮೇರಿ ದಂಪತಿಯ ಸುಪುತ್ರನಾಗಿ ಬೆಥ್ಲೆಹೆಮ್ ಎಂಬಲ್ಲಿ ಜನಿಸಿದರು ಎಂಬುದು ಐತಿಹ್ಯ.

ಕ್ರಿಸ್‌ಮಸ್ ಇತಿಹಾಸ ತಿಳಿಯೋಣ: ಯೇಸುಕ್ರಿಸ್ತರ ಜನನದ ನಂತರ ಕ್ರಿಸ್ಮಸ್ ಆಚರಣೆ ಹುಟ್ಟಿಕೊಂಡಿತು. ಮೊದಲ ಕ್ರಿಸ್‌ಮಸ್ ಹಬ್ಬವನ್ನು ರೋಮ್‌ನಲ್ಲಿ ಕ್ರಿ.ಶ 336 ನಲ್ಲಿ ಆಚರಿಸಲಾಯಿತು. ಸುಮಾರು 300ರ ದಶಕದಲ್ಲಿ ಏರಿಯನ್ ವಿವಾದದಿಂದಾಗಿ ಕ್ರಿಸ್‌ಮಸ್ ಹಬ್ಬಾಚರಣೆಯನ್ನು ಬಹಳ ಸಮಯದವರೆಗೆ ನಿಲ್ಲಿಸಲಾಗಿತ್ತಂತೆ. ನಂತರದಲ್ಲಿ ಕ್ರಿ.ಶ.800ರ ಸುಮಾರಿಗೆ ಕ್ರಿಸ್‌ಮಸ್ ಇನ್ನಷ್ಟು ಜನರ ಗಮನ ಸೆಳೆಯಿತು. 1660 ಡಿಸೆಂಬರ್ 25 ಅನ್ನು ಕ್ರಿಸ್ಮಸ್ ರಜಾದಿನವನ್ನಾಗಿ ಪರಿಗಣಿಸಲಾಯಿತು. ಮತ್ತೆ 1900ರ ದಶಕದ ಆರಂಭದಲ್ಲಿ ಆಂಗ್ಲಿಕನ್ ಕಮ್ಯುನಿಯನ್ ಚರ್ಚ್‌ನ ಆಕ್ಸ್‌ಫರ್ಡ್ ಚಳವಳಿಯು ಕ್ರಿಸ್‌ಮಸ್‌ನ ಪುನರುಜ್ಜೀವನಕ್ಕೆ ಕಾರಣವಾಯಿತು.

ಕ್ರಿಸ್‌ಮಸ್ ಆಚರಣೆ ಹೇಗೆ?: ಹಲವು ಕಡೆಗಳಲ್ಲಿ ಕ್ರಿಸ್‌ಮಸ್ ಆಚರಣೆ ಸಿದ್ಧತೆಗಳು ಬಹಳ ವಿಭಿನ್ನವಾಗಿರುತ್ತವೆ. ಮನೆಗಳಲ್ಲಿ ಸ್ಟಾರ್, ಗೋದಲಿ ಮಾದರಿಗಳು ಮತ್ತು ಕ್ರಿಸ್ಮಸ್ ಟ್ರೀ ಇಟ್ಟು ಅಲಂಕರಿಸಲಾಗುತ್ತದೆ. ಹಲವು ಉಡುಗೊರೆಗಳನ್ನು ಕ್ರಿಸ್ಮಸ್ ಮರದ ಕೆಳಗೆ ಇರಿಸಲಾಗುತ್ತದೆ. ಈ ದಿನದಂದು ಅವುಗಳನ್ನು ತೆರೆಯಲಾಗುತ್ತದೆ ಮತ್ತು ಹಂಚುವ ದೃಶ್ಯಗಳು ಸಾಮಾನ್ಯ.

ಈ ದಿನದ ದಾನಕ್ಕಿದೆ ವಿಶೇಷ ಮಹತ್ವ: ಕ್ರಿಸ್ಮಸ್ ಸಂದರ್ಭದಲ್ಲಿ ದಾನ ಮಾಡುವುದಕ್ಕೂ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ದಾನಗಳನ್ನು ಮಾಡಬೇಕು. ಇಂಥ ಕಾರ್ಯಕ್ಕೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂಬುದು ಕ್ರಿಶ್ಚಿಯನ್ನರ ಅಚಲ ನಂಬಿಕೆ.

ಪರಸ್ಪರ ಶುಭಾಶಯ ವಿನಿಮಯ: ವಿವಿಧ ತಂಡಗಳು ಕ್ರಿಸ್ಮಸ್ ಸಂದೇಶ ಸಾರುವ ಕ್ಯಾರೋಲ್ ಪದ್ಯಗಳನ್ನು ಹೇಳುತ್ತಾ ಸಾಂತಾಕ್ಲಾಸ್ ವೇಷಧಾರಿಯ ಜೊತೆಗೆ ಮನೆ ಮನೆಗೆ ಭೇಟಿ ನೀಡುತ್ತಾರೆ. ಈ ದಿನದಂದು ಕುಟುಂಬ ಸದಸ್ಯರು ಪರಸ್ಪರ ಶುಭಾಶಯ ಕೋರುತ್ತಾರೆ ಮತ್ತು ಕೇಕ್, ಚಾಕ್ಲೆಟ್ ವಿತರಿಸಿ, ಹೊಸ ಬಟ್ಟೆಗಳನ್ನು ತೊಟ್ಟು, ವಿವಿಧ ತಿನಿಸುಗಳನ್ನು ಮಾಡಿ ಮತ್ತು ವಿಶೇಷವಾಗಿ ದಾನಧರ್ಮಗಳ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ: ಕ್ರಿಸ್‌ಮಸ್ ಆಚರಣೆಯನ್ನು ವಿಶೇಷವಾಗಿ ಚರ್ಚ್‌ಗಳಲ್ಲಿ ಪ್ರತ್ಯೇಕ ಪ್ರಾರ್ಥನೆಗಳು, ಮೆರವಣಿಗೆ ಮತ್ತು ಗೋದಲಿ, ಕ್ರಿಸ್ಮಸ್ ಟ್ರೀ, ಸ್ಟಾರ್‌ಗಳ ಪ್ರದರ್ಶನಗಳೊಂದಿಗೆ ಆಚರಣೆ ಮಾಡಲಾಗುತ್ತದೆ. ಸಾಂತಾಕ್ಲಾಸ್ ವೇಷಧಾರಿ, ಹಿರಿಯರು, ಪೋಷಕರು, ನೆರೆಹೊರೆಯವರು, ಸ್ನೇಹಿತರು ಮತ್ತು ಹಿತೈಷಿಗಳು ಮಕ್ಕಳಿಗೆ ಉಡುಗೊರೆಗಳನ್ನು ಕೊಡುತ್ತಾರೆ. ಈ ದಿನ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಕೇಕ್ ಮತ್ತು ಮಫಿನ್‌, ಬಗೆಬಗೆಯ ತಿಂಡಿಗಳು, ಭೋಜನ ಸವಿಯಲು ಮಕ್ಕಳಿಗೆ ಅವಕಾಶ ಸಿಗುತ್ತದೆ.

ಕ್ರಿಸ್ಮಸ್ ಟ್ರೀ ಸಂತಸ ಸಂಪತ್ತಿನ ಪ್ರತೀಕ: ತ್ರಿಕೋನಾಕಾರದ ಈ ಕ್ರಿಸ್ಮಸ್ ಟ್ರೀ ಮನೆಯ ದುಃಖವನ್ನು ಓಡಿಸಿ ಸಂತೋಷ, ನೆಮ್ಮದಿ ಮತ್ತು ಸಂಪತ್ತನ್ನು ಹೆಚ್ಚು ಮಾಡುತ್ತದೆ ಅನ್ನೋದು ಜನರ ನಂಬಿಕೆ. ಕ್ರಿಸ್ಮಸ್ ಮರಗಳ ಜಾಗದಲ್ಲಿ ಉತ್ತರ ಯುರೋಪಿನ ಅನೇಕ ಭಾಗಗಳಲ್ಲಿ ಜರ್ರಿ ಅಥವಾ ಹಾಥಾನ್ರ್ ಎಂಬ ಟ್ರೀ ಬಳಸುತ್ತಾರೆ.

ಕೆಲವೆಡೆ ವಿಭಿನ್ನ ಆಚರಣೆ: ಅದಾಗ್ಯೂ ಕ್ರಿಸ್‌ಮಸ್ ಆಚರಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಈಶಾನ್ಯದಲ್ಲಿ ಕ್ರಿಸ್‌ಮಸ್ ಆಚರಣೆಯೂ ದಕ್ಷಿಣದ ರಾಜ್ಯಗಳಾದ ಕೇರಳ ಹಾಗೂ ಗೋವಾದಲ್ಲಿ ಆಚರಿಸುವುದಕ್ಕಿಂತ ವಿಶೇಷವಾಗಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರದ ಕ್ರಿಶ್ಚಿಯನ್ನರಲ್ಲಿ ಸಹ ಕ್ರಿಸ್ಮಸ್ ಹಬ್ಬವನ್ನು ಆಚರಿಸುವ ವಿಶಿಷ್ಟ ವಿಧಾನಗಳಿವೆ.

ಇದನ್ನೂಓದಿ: ವಾರದ ರಾಶಿ ಭವಿಷ್ಯ: ವರ್ಷದ ಕೊನೆಯ ವಾರ ಯಾರ ಪಾಲಿಗೆ ಉತ್ತಮ?

Last Updated : Dec 25, 2022, 12:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.