ದಕ್ಷಿಣ ಕನ್ನಡ: ಸಮಾಜದಲ್ಲಿ ಕ್ರೈಸ್ತರು ಎಂದರೆ ಶಾಂತಿ ಪ್ರಿಯರು ಎಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಅಭಿಪ್ರಾಯಪಟ್ಟಿದ್ದಾರೆ.
ಬೆಳ್ತಂಗಡಿಯ ಉಜಿರೆ ಕರ್ನಾಟಕ ಸಿರೋ ಮಲಬಾರ್ ಅಸೋಸಿಯೇಶನ್ ವತಿಯಿಂದ "ಐಕ್ಯದಿ ಬಾಳುವೆವು, ಐಕ್ಯದಿ ಸಾಧಿಸುವೆವು" ಎಂಬ ಧ್ಯೇಯ ವಾಕ್ಯದಡಿಯಲ್ಲಿ ಶ್ರೀ ಸಾಮಾನ್ಯರ ಬೃಹತ್ ಸಮಾವೇಶ ನಡೆಯಿತು.
ಸೆಬಾಸ್ಟಿಯನ್ ಕೆ.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಲಾರೆನ್ಸ್ ಮುಕ್ಕುಯಿ ಸಮಾವೇಶದ ಉದ್ಘಾಟಿಸಿದರು. ಭದ್ರಾವತಿ ಧರ್ಮಪ್ರಾಂತ್ಯದ ಬಿಷಪ್ ಮಾರ್ ಜೋಸೆಫ್ ಅರುಮಚ್ಚಾಡತ್ತ್ ಧ್ವಜಾರೋಹಣ ನೆರವೇರಿಸಿದರು.
ಥೋಮಸ್ ಕುಮಳಿ, ಭಾರತ ಕ್ಯಾಥೋಲಿಕ್ ಯೂನಿಯನ್ ಅಧ್ಯಕ್ಷ ಲ್ಯಾನ್ಸಿ ಸೇರಿದಂತೆ ಅನೇಕ ಪ್ರಮುಖರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.