ETV Bharat / state

ಹುತಾತ್ಮ ಯೋಧನ ಕುಟುಂಬಕ್ಕೆ ವಂಚನೆ : ಸಿಆರ್‌ಪಿಎಫ್ ತಂಡ ಮಂಗಳೂರಿಗೆ

author img

By

Published : Dec 7, 2020, 12:30 PM IST

ಇದೀಗ ಈ ವಿಚಾರವನ್ನು ಯೋಧನ ಪತ್ನಿ ಸಿಆರ್‌ಪಿಎಫ್‌ನ ಬೆಂಗಳೂರಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕುಟುಂಬದ ಪರವಾಗಿ ನಿಲ್ಲುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಬೆಂಗಳೂರಿನ ಸಿಆರ್‌ಪಿಎಫ್ ಅಧಿಕಾರಿಗಳು ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ನ್ಯಾಯ ಕೊಡುವಂತೆ ವಿನಂತಿಸಿದ್ದಾರೆ..

cheating to warrior family: CRPF team to Mangalore
ಹುತಾತ್ಮ ಯೋಧನ ಕುಟುಂಬಕ್ಕೆ ವಂಚನೆ: ಸಿಆರ್‌ಪಿಎಫ್ ತಂಡ ಮಂಗಳೂರಿಗೆ

ಮಂಗಳೂರು : ಮಂಗಳೂರಿನ ಹುತಾತ್ಮ ಯೋಧರೊಬ್ಬರ ಕುಟುಂಬಕ್ಕೆ ವ್ಯಕ್ತಿಯೊಬ್ಬ ವಂಚನೆಗೈದು ಅವರ ಆಸ್ತಿ ಕಬಳಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆಗಾಗಿ ಸಿಆರ್‌ಪಿಎಫ್ ತಂಡವೊಂದು ಸೋಮವಾರ ಮಂಗಳೂರಿಗೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

51ನೇ ಸಿಆರ್‌ಪಿಎಫ್ ಬೆಟಾಲಿಯನ್ ಯೋಧರಾಗಿದ್ದ ಉದಯಕುಮಾರ್ 2006ರ ಆ.2ರಂದು ಛತ್ತೀಸ್‌ಗಢದಲ್ಲಿ ನಕ್ಸಲರೊಂದಿಗೆ ನಡೆದ ಹೋರಾಟದಲ್ಲಿ ಹುರಾತ್ಮರಾಗಿದ್ದರು. ಆಗ ಅವರಿಗೆ 34 ವರ್ಷ ವಯಸ್ಸಾಗಿದ್ದು, ಅಂದು ಎಲ್‌ಕೆಜಿ ಮತ್ತು ಒಂದನೇ ತರಗತಿಯಲ್ಲಿದ್ದ ಇಬ್ಬರು ಮಕ್ಕಳಿದ್ದರು.

ಹುತಾತ್ಮರಾದ ಪತಿಯ ಪರಿಹಾರ ಧನದಿಂದ ಅವರ ಪತ್ನಿ ಯೆಯ್ಯಾಡಿ ಸಮೀಪ ಮನೆ ನಿರ್ಮಿಸಿದ್ದರು. ಅಲ್ಲದೆ ಮನೆಯ ಮೇಲಿನ ಮಹಡಿಯನ್ನು ಬಾಡಿಗೆಗೆ ನೀಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಆ ಮನೆಗೆ ಬಾಡಿಗೆಗೆ ಆಗಮಿಸಿರುವಾತ ವಾಮ ಮಾರ್ಗದ ಮೂಲಕ ಮನೆಯ ಭಾಗವೊಂದನ್ನು ತನ್ನ ಹೆಸರಿಗೆ ದಾಖಲೆ ಮಾಡಿಸಿಕೊಂಡಿದ್ದಾನೆ.

ಕಳೆದ ಮೂರು ವರ್ಷಗಳಿಂದ ಮನೆ ಬಾಡಿಗೆ ನೀಡದೆ ಯೋಧನ ಪತ್ನಿ ಮತ್ತು ಮಕ್ಕಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ಅಲ್ಲದೆ ದೇವರು ಮತ್ತು ವಾಮಾಚಾರಾದ ಹೆಸರಿನಲ್ಲಿ ಬೆದರಿಸಿ ಕಿರುಕುಳ ನೀಡುತ್ತಿರುವ ಬಗ್ಗೆ ಇದೀಗ ಯೋಧನ ಮಡದಿ ವಸಂತಿ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೆ ಸುನೀಲ್ ಎಂಬಾತ ಇವರ ಮನೆಯ ಆವರಣದೊಳಗೆ ಅತಿಕ್ರಮಣ ಮಾಡಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ.

ಇದೀಗ ಈ ವಿಚಾರವನ್ನು ಯೋಧನ ಪತ್ನಿ ಸಿಆರ್‌ಪಿಎಫ್‌ನ ಬೆಂಗಳೂರಿನ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಕುಟುಂಬದ ಪರವಾಗಿ ನಿಲ್ಲುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ. ಬೆಂಗಳೂರಿನ ಸಿಆರ್‌ಪಿಎಫ್ ಅಧಿಕಾರಿಗಳು ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದು, ನ್ಯಾಯ ಕೊಡುವಂತೆ ವಿನಂತಿಸಿದ್ದಾರೆ.

ಸಿಆರ್‌ಪಿಎಫ್ ಅಧಿಕಾರಿಗಳ ತಂಡವೊಂದು ಸೋಮವಾರ ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಮತ್ತು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.