ಪುತ್ತೂರು(ದಕ್ಷಿಣ ಕನ್ನಡ): ಜೂನ್ 4 ರಂದು ಪುತ್ತೂರು ತಾಲೂಕಿನ ಪೆರ್ಲಂಪಾಡಿಯಲ್ಲಿ ನಡೆದ ಚರಣ್ ರಾಜ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣಕನ್ನಡ ಜಿಲ್ಲಾ ಪೊಲೀಸರು ಮತ್ತೆ ಮೂರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ವಶದಲ್ಲಿರುವ ಆರೋಪಿಗಳ ಸಂಖ್ಯೆ ಇದೀಗ ಆರಕ್ಕೆ ಏರಿಕೆಯಾಗಿದೆ. 2019 ರಲ್ಲಿ ಪುತ್ತೂರಿನಲ್ಲಿ ನಡೆದ ಕಾರ್ತಿಕ್ ಮೇರ್ಲ್ ಕೊಲೆ ಆರೋಪಿಯಾಗಿದ್ದ ಚರಣ್ ರಾಜ್ನನ್ನು ಎರಡು ಬೈಕ್‌ಗಳಲ್ಲಿ ಬಂದ ಮೂವರು ಆರೋಪಿಗಳು ತಲ್ವಾರ್ ಮತ್ತೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಬೆಳ್ಳಾರೆ ಪೊಲೀಸರು ಇದೀಗ ಒಟ್ಟು ಆರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಕಿಶೋರ್ ಪೂಜಾರಿ, ರೇವಂತ್, ರಾಕೇಶ್ ಪಂಚೋಡಿ, ನರ್ಮೇಶ್, ನಿತಿಲ್ ಶೆಟ್ಟಿ ಮತ್ತು ವಿಜೇಶ್ ಪೊಲೀಸ್ ವಶದಲ್ಲಿರುವ ಆರೋಪಿಗಳಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುಷಿಕೇಶ್ ಸೊನಾವಣೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಎರಡು ತಂಡಗಳನ್ನು ರಚಿಸಿದ್ದರು. ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸೈ ಉದಯರವಿ ಮತ್ತು ಬೆಳ್ಳಾರೆ ಠಾಣೆಯ ರುಕ್ಮಾ ನಾಯ್ಕ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕಾರ್ತಿಕ್ ಮೇರ್ಲ ಕೊಲೆ ಆರೋಪಿ ಚರಣ್ ಹತ್ಯೆ ಪ್ರಕರಣ: ಮೂವರು ಪೊಲೀಸ್ ವಶಕ್ಕೆ?