ETV Bharat / state

ಚಂದ್ರಗ್ರಹಣ.. ಶ್ರೀ ಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯದ ಪೂಜಾ ಸಮಯದಲ್ಲಿ ಬದಲಾವಣೆ - ಭಕ್ತರಿಗೆ ದೇವರ ದರ್ಶನ

ನಾಳೆ ಗ್ರಸ್ತೋದಯ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. ಭಾರತದೆಲ್ಲೆಡೆ ಭಾಗಶಃ ಗ್ರಹಣ ಗೋಚರಿಸಲಿದೆ.

Shree Dharmasthala Temple
ಶ್ರೀ ಧರ್ಮಸ್ಥಳ ಕ್ಷೇತ್ರ
author img

By

Published : Nov 7, 2022, 2:34 PM IST

Updated : Nov 7, 2022, 3:03 PM IST

ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಪುಣ್ಯಕ್ಷೇತ್ರಗಳಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂದ್ರಗ್ರಹಣದ ದಿನವಾದ ನಾಳೆ ನ. 8ರಂದು ಯಾವುದೇ ಸೇವೆಗಳು ಇರುವುದಿಲ್ಲ ಎಂದು ದೇವಸ್ಥಾನಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಮಧ್ಯಾಹ್ನ 01.30ರಿಂದ ರಾತ್ರಿ 7 ಗಂಟೆಯವರೆಗೆ ಭಕ್ತರಿಗೆ ದೇವರ ದರ್ಶನ ಮತ್ತು ಯಾವುದೇ ಪೂಜೆಗೆ ಅವಕಾಶ ಇಲ್ಲ. ಮಧ್ಯಾಹ್ನ 1.30ರವರೆಗೆ ಭೋಜನ ವ್ಯವಸ್ಥೆ ಇರಲಿದ್ದು, ಬಳಿಕ ಸಂಜೆ 7ರ ನಂತರ ಭೋಜನ ಇರಲಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂದ್ರಗ್ರಹಣದಂದು ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ಆದರೆ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ 11.30ರ ತನಕ ಹಾಗೂ ರಾತ್ರಿ 7.30ರಿಂದ 9ರ ತನಕ ದರ್ಶನಕ್ಕೆ ಸಮಯ ನಿಗದಿ ಮಾಡಲಾಗಿದೆ.

ಗ್ರಹಣವು 2.39ರಿಂದ ಸ್ಪರ್ಶವಾಗಿ 6.28ರ ವೇಳೆಗೆ ಮೋಕ್ಷವಾಗುತ್ತದೆ. ಕುಕ್ಕೆಯಲ್ಲಿ ದೇವರ ದರ್ಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸಮಯದಲ್ಲಿ ಇಲ್ಲಿ ಯಾವುದೇ ಸೇವೆ ಇಲ್ಲ. ಮಧ್ಯಾಹ್ನದ ಮಹಾಪೂಜೆ ಬೆಳಗ್ಗೆ 8:00ಕ್ಕೆ ಮತ್ತು ರಾತ್ರಿಯ ಮಹಾಪೂಜೆ, ಬಂಡಿ ಉತ್ಸವವು ಗ್ರಹಣ ಮೋಕ್ಷದ ನಂತರವೇ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Lunar eclipse: ನಾಳೆ ಚಂದ್ರಗ್ರಹಣ.. ಏನ್​ ಮಾಡಬೇಕು, ಏನ್​ ಮಾಡಬಾರದು?

Last Updated : Nov 7, 2022, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.