ETV Bharat / state

ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಭಕ್ತರಿಂದ ಎಡೆಸ್ನಾನ ಸೇವೆ: ಅದ್ದೂರಿ ಹೂವಿನ ತೇರು ಉತ್ಸವ

ನವೆಂಬರ್ 21 ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಈ ವೇಳೆ ಮಡೆಸ್ನಾನ ನಡೆಸದಂತೆ ಸುಪ್ರೀಂಕೋರ್ಟ್ ‌ತಡೆಯಾಜ್ಞೆ ನೀಡಿದೆ.

author img

By

Published : Nov 28, 2022, 8:34 AM IST

Updated : Nov 28, 2022, 10:50 AM IST

Edesnana in Kukke Subrahmanya
ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಭಕ್ತರಿಂದ ಎಡೆಸ್ನಾನ ಸೇವೆ

ಸುಬ್ರಹ್ಮಣ್ಯ: ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಿದ್ಧ ಎಡೆಸ್ನಾನ ಸೇವೆಯಲ್ಲಿ ನಿನ್ನೆ ಒಟ್ಟು 116 ಭಕ್ತರು ಎಡೆಸ್ನಾನ ಸೇವೆಯನ್ನು ಸ್ವಯಂ ಪ್ರೇರಿತವಾಗಿ ನೆರವೇರಿಸಿದರು. ಚಂಪಾಷಷ್ಠಿ ಹಿನ್ನೆಲೆ ನಿನ್ನೆ ರಾತ್ರಿ ದೇವರ ಹೂವಿನ ತೇರು ಉತ್ಸವ ನಡೆಯಿತು. ನೂರಾರು ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕುಕ್ಕೆಯ ದೇವರ ನೈವೇದ್ಯವನ್ನು ದೇವಸ್ಥಾನದ ಹೊರಾಂಗಣದಲ್ಲಿ ಗೋವಿಗೆ ತಿನ್ನಿಸಲಾಗುತ್ತದೆ. ಗೋವುಗಳು ತಿಂದು ಉಳಿಸಿದ ಎಲೆಗಳ ಮೇಲೆ ಭಕ್ತಾದಿಗಳು ಉರುಳು ಸೇವೆ ಮಾಡುವುದೇ ಎಡೆಸ್ನಾನ ಸೇವೆ. ಇದರಿಂದಾಗಿ ಚರ್ಮ ವ್ಯಾಧಿಗಳು ಮತ್ತು ಇತರ ರೋಗಗಳಿದ್ದವರು ಈ ಸೇವೆ ನೆರವೇರಿಸಿದರೆ ರೋಗ ಉಪಶಮನವಾಗುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ.

ನವೆಂಬರ್ 21ರಂದು ಕೊಪ್ಪರಿಗೆ ಏರುವ ಮೂಲಕ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭಗೊಂಡಿದ್ದು, ಈ ವೇಳೆ ಮಡೆಸ್ನಾನ ನಡೆಸದಂತೆ ಸುಪ್ರೀಂಕೋರ್ಟ್ ‌ತಡೆಯಾಜ್ಞೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ಮಡೆಸ್ನಾನಕ್ಕೆ ಅವಕಾಶ ಮಾಡಿಕೊಡದೇ ಎಡೆಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

Hoovina Theru in Subrahmanya
ಅದ್ದೂರಿ ಹೂವಿನ ತೇರು ಉತ್ಸವ

ಕಳೆದ ಕೆಲವು ವರ್ಷಗಳಿಂದ ಕುಕ್ಕೆಯಲ್ಲಿ ಎಡೆಸ್ನಾನದ ಆಚರಣೆ ಮಾಡಲಾಗುತ್ತಿದ್ದು, ಕೋವಿಡ್‌ ಕಾರಣದಿಂದ ಸ್ಥಗಿತವಾಗಿದ್ದ ಆಚರಣೆ ಮುಂದುವರೆಸಲಾಗುತ್ತಿದೆ. ಇಂದು ರಾತ್ರಿ ಪಂಚಮಿ ತೇರು ಉತ್ಸವ ಮತ್ತು ನಾಳೆ ಚಂಪಾಷಷ್ಠಿ ಮಹಾತೇರು ಉತ್ಸವಗಳು ನಡೆಯಲಿವೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಠಿ ಪೂರ್ವಭಾವಿ ಸಭೆ: ಎಡೆಸ್ನಾನಕ್ಕೆ ಅವಕಾಶ

Last Updated : Nov 28, 2022, 10:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.