ಮಂಗಳೂರು: ದಾರಿ ಕೇಳುವ ನೆಪದಲ್ಲಿ ಬಂದ ಯುವಕ ಮಹಿಳೆಯೊಬ್ಬರ ಕಿವಿಯೋಲೆ ಮತ್ತು ಚಿನ್ನದ ಸರ ಕಿತ್ತು ಪರಾರಿಯಾದ ಘಟನೆ ನಗರದ ದೇರೆಬೈಲ್ ಸಮೀಪದ ಕೊಂಚಾಡಿಯಲ್ಲಿ ನಡೆದಿದೆ.
ಕೊಂಚಾಡಿಯ ಕಮಲಾ (63) ಚಿನ್ನಾಭರಣ ಕಳೆದುಕೊಂಡ ಮಹಿಳೆ. ಈಕೆ ದಿನಸಿ ಸಾಮಾನು ಖರೀದಿಸಿ ಮನೆಗೆ ಹೋಗುತ್ತಿದ್ದ ವೇಳೆ ದಾರಿ ಕೇಳುವ ನೆಪದಲ್ಲಿ ಬಂದ ಯುವಕ ಕತ್ತಿನಲ್ಲಿದ್ದ ಚಿನ್ನಾದ ಸರ ಹಾಗೂ ಕಿವಿಯೋಲೆಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಮಹಿಳೆಯ ಕಿವಿಗೆ ಕೆಲ ಗಾಯಗಳಾಗಿವೆ.
ಸುಮಾರು 45,000 ರೂ. ಮೌಲ್ಯದ ಚಿನ್ನಾಭರಣವನ್ನು ಖದೀಮ ಎಗರಿಸಿದ್ದಾನೆ ಎನ್ನಲಾಗುತ್ತಿದ್ದು, ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.