ETV Bharat / state

ಗೋವು ಸಾಗಾಟ ವಿಚಾರದಲ್ಲಿ ಹಲ್ಲೆ ಅರೋಪ: ಎರಡು ತಂಡಗಳ ವಿರುದ್ಧ ದೂರು ದಾಖಲು - ಗೋವು ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ

ಎರಡು ತಂಡಗಳ ಮಧ್ಯೆ ಗೋವು ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Cow
Cow
author img

By

Published : Jul 30, 2020, 1:38 PM IST

ಬೆಳ್ತಂಗಡಿ: ಗೋಮಾಂಸ ಹಾಗೂ ಗೋವು ಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಬಂಗಾಡಿ ಸಮೀಪದ ಕಿಲ್ಲೂರಿನಲ್ಲಿ ಎರಡು ತಂಡಗಳ ಮಧ್ಯೆ ಹಲ್ಲೆ ನಡೆದಿದ್ದು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎರಡೂ ತಂಡಗಳ ಮೇಲೆ ಪ್ರಕರಣ ದಾಖಲಾಗಿದೆ.

ಮಲವಂತಿಗೆಯ ರಂಜಿತ್ ಎಂಬವರು ನೀಡಿದ ದೂರಿನಂತೆ ಮಂಗಳವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸಂಘಟನೆಯೊಂದರ ಕಾರ್ಯಕರ್ತರಾದ ಮಹಮ್ಮದ್ ಹನೀಫ್, ಹಂಝತ್ ಮತ್ತು ಇತರೆ 4-5 ಜನರು ಸೇರಿಕೊಂಡು ನನ್ನ ಹಾಗೂ ಸ್ನೇಹಿತರಾದ ಅಕ್ಷಯ, ಪ್ರದೀಪ್ ಮತ್ತು ನವೀನ್ ಅವರನ್ನು ತಡೆದು ನಿಲ್ಲಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಲ್ಲೂರು ಮಲ್ಲಿಗೆ ಮನೆ ನಿವಾಸಿ ಮಹಮ್ಮದ್ ಹನೀಫ್ ಸಹ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಲ್ಲಿ ರಕ್ಷಿತ್, ರಂಜಿತ್ ಹಾಗೂ ಇತರ ನಾಲ್ಕು ಜನರ ತಂಡ ನಮ್ಮನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ನನ್ನ ಸಹೋದರನನ್ನು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.