ETV Bharat / state

ಪುತ್ತೂರು ಸಹಕಾರಿ ರಂಗದ ಕಾಶಿ: ಎಸ್. ಆರ್. ಸತೀಶ್ಚಂದ್ರ ಅಭಿಪ್ರಾಯ

author img

By

Published : Oct 10, 2019, 12:54 PM IST

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಕೃಷಿಕರು ತಮ್ಮ ಹಾದಿಯಲ್ಲಿ ಕ್ರೀಯಾತ್ಮಕತೆ ಬೆಳೆಸಿಕೊಳ್ಳುವುದು ಅಗತ್ಯವಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ಯಶಸ್ಸಿನ ಹಾದಿಯಿಡಿಯಬೇಕು ಎಂದರು.

ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಳನ

ಪುತ್ತೂರು: ಸಹಕಾರಿ ಸಂಘಗಳು ಆರ್ಥಿಕ ಮತ್ತು ಸಾಮಾಜಿಕ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಶ್ವೇತ ಕ್ರಾಂತಿ ಮತ್ತು ಹಸಿರು ಕ್ರಾಂತಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅಪಾರವಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅಭಿಪ್ರಾಯ ಪಟ್ಟರು. ಪುತ್ತೂರಿನ ಒಕ್ಕಲಿಗಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ನಡೆದ ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರಿ ಸಂಘಗಳು ಪ್ರಜಾಪ್ರಭುತ್ವದ ತೊಟ್ಟಿಲುಗಳಂತೆ ಕಾರ್ಯನಿರ್ವಹಿಸುತ್ತಿದ್ದು, ಸಾಮಾಜಿಕ ಬದ್ಧತೆಯುಳ್ಳ ವ್ಯವಹಾರಿಕ ಸಂಸ್ಥೆಗಳು ಎಂಬ ಕೀರ್ತಿಗೆ ಪಾತ್ರವಾಗಿವೆ ಎಂದರು. ಅಡಕೆ ಬೆಳೆಗಾರರೂ ಸೇರಿದಂತೆ ಎಲ್ಲ ರೈತರ ಉನ್ನತಿಯಲ್ಲಿ ಸಹಕಾರಿ ಸಂಘಗಳ ಪಾತ್ರವಿದೆ. ಹಾಗೆಯೇ ಕರಾವಳಿ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ಸಹಕಾರಿ ಸಂಘಗಳು ರೈತರಿಗೆ ಶೀಘ್ರವೇ ಸ್ಪಂದಿಸುತ್ತಿರುವುದೇ ಕಾರಣ ಎಂದು ಹೇಳಿದರು.

ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಳನ

ಪುತ್ತೂರಿನಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಕ್ಯಾಂಪ್ಕೋ ಏಷ್ಯಾದ ಅತಿದೊಡ್ಡ ಚಾಕಲೇಟ್ ಫ್ಯಾಕ್ಟರಿ ಸ್ಥಾಪಿಸಿತ್ತು. ಈಗ ಅದನ್ನೇ ದೇಶದ ಇತರ ಕಡೆ ಮಾದರಿಯಾಗಿ ಬಳಸಬಹುದು ಎಂದು ಕೇಂದ್ರ ಸರಕಾರ ಹೇಳುತ್ತಿದೆ ಎಂದು ಹೇಳಿದ ಅವರು, ಪುತ್ತೂರು ಸಹಕಾರಿ ರಂಗದ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ ಎಂದರು.

ಇನ್ನು ಕಾರ್ಯಕ್ರಮವನ್ನು ಉದ್ಘಾಟಿಸಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಕೃಷಿಕರು ತಮ್ಮ ಹಾದಿಯಲ್ಲಿ ಕ್ರೀಯಾತ್ಮಕತೆ ಬೆಳೆಸಿಕೊಳ್ಳುವುದು ಅಗತ್ಯವಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ಯಶಸ್ಸಿನ ಹಾದಿಯಿಡಿಯಬೇಕು ಎಂದರು.

ಇನ್ನು ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ, ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಸೇರಿದಂತೆ ಇತರ ಗಣ್ಯರು ಇದ್ದರು.

Intro:Body:ಕರಾವಳಿ ಕರ್ನಾಟಕದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ನಡೆಯದಿರಲು ಸಹಕಾರ ಸಂಘದ ಮಹತ್ವದ ಪಾತ್ರ; ಕ್ಯಾಂಪ್ಕೋ ಅಧ್ಯಕ್ಷ. ಶ್ವೇತ-ಹಸಿರು ಕ್ರಾಂತಿಯಲ್ಲಿ ಸಹಕಾರಿ ಸಂಘಗಳ ಮಹತ್ವದ ಪಾತ್ರ
ಪುತ್ತೂರು: ದೇಶದ 8.5 ಲಕ್ಷ ಸಹಕಾರಿ ಸಂಘಗಳಲ್ಲಿ 21 ಕೋಟಿ ಸದಸ್ಯರನ್ನು ಹೊಂದಿರುವ ಸಹಕಾರಿ ಸಂಘಗಳು ಆರ್ಥಿಕ ಮತ್ತು ಸಾಮಾಜಿಕ ಉನ್ನತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಶ್ವೇತ ಕ್ರಾಂತಿ ಮತ್ತು ಹಸಿರು ಕ್ರಾಂತಿಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಅಪಾರವಾಗಿದೆ. ಸಹಕಾರಿ ಸಂಘಗಳು ಪ್ರಜಾಪ್ರಭುತ್ವದ ತೊಟ್ಟಿಲುಗಳಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಹೇಳಿದರು.
ಅರೇಕಾನಟ್ ಗ್ರೋವರ್ಸ್ ವಾಟ್ಸಪ್ ಗ್ರೂಪ್ ಆಶ್ರಯ ಮತ್ತು ಕ್ಯಾಂಪ್ಕೋ ಸಂಸ್ಥೆಯ ಸಹಯೋಗದಲ್ಲಿ ಪುತ್ತೂರಿನ ಒಕ್ಕಲಿಗ ಗೌಡ ಸಮುದಾಯ ಭವನದ ಚುಂಚಶ್ರೀ ಸಭಾಭವನದಲ್ಲಿ ಬುಧವಾರ ನಡೆದ ಅಡಕೆ ಬೆಳೆಗಾರರ ವೈಚಾರಿಕ ಸಮ್ಮಿಲನದ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಬದ್ಧತೆಯುಳ್ಳ ವ್ಯವಹಾರಿಕ ಸಂಸ್ಥೆಗಳು ಎಂಬ ಕೀರ್ತಿ ಸಹಕಾರಿ ಸಂಘಗಳಿಗಿದೆ. ಅಡಕೆ ಬೆಳೆಗಾರರೂ ಸೇರಿದಂತೆ ಎಲ್ಲ ರೈತರ ಉನ್ನತಿಯಲ್ಲಿ ಸಹಕಾರಿ ಸಂಘಗಳ ಪಾತ್ರವಿದೆ. ಅದರಲ್ಲೂ ಕರಾವಳಿ ಕರ್ನಾಟಕದಲ್ಲಿ ಒಬ್ಬನೇ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರೆ ಅದಕ್ಕೆ ಸಹಕಾರಿ ಸಂಘಗಳು ರೈತರ ಬೇಕು ಬೇಡಗಳಿಗೆ ಶೀಘ್ರ ಸ್ಪಂದಿಸುತ್ತಿರುವುದೇ ಕಾರಣ. ಮೀಟರ್ ದಂಧೆಗೆ ತಡೆಹಾಕಿರುವ ಖ್ಯಾತಿ ಸಹಕಾರಸಂಘಗಳದ್ದಾಗಿದೆ. ಸಾರ್ವಜನಿಕ ಪಡಿತರ ವಿತರಣೆಯ ಯಶಸ್ವಿನ ಹಿಂದೆ ಶೇ.95 ಸಹಕಾರಿ ಸಂಸ್ಥೆಗಳ ಪಾತ್ರವಿದೆ. ಕ್ಯಾಂಪ್ಕೋ ಸೇರಿದಂತೆ ದೇಶದ ಪ್ರಮುಖ ಐದು ಸಹಕಾರಿ ಕಂಪನಿಗಳನ್ನು ಆರಿಸಿಕೊಂಡ ಕೇಂದ್ರ ಸರಕಾರದ ನೀತಿ ಆಯೋಗವು ನಮ್ಮ ಸಾಧನೆಯ ಯಶೋಗಾಥೆಯನ್ನು ಖುದ್ದು ನಮ್ಮಿಂದ ಪಡೆದುಕೊಂಡಿದೆ. ದಶಕಗಳ ಹಿಂದೆ ಪುತ್ತೂರಿನಲ್ಲಿ ಸಹಕಾರಿ ತತ್ವದ ಅಡಿಯಲ್ಲಿ ಕ್ಯಾಂಪ್ಕೋ ಏಷ್ಯಾದ ಅತಿದೊಡ್ಡ ಚಾಕಲೇಟ್ ಫ್ಯಾಕ್ಟರಿ ಸ್ಥಾಪಿಸಿತ್ತು. ಈಗ ಅದನ್ನೇ ದೇಶದ ಇತರ ಕಡೆ ಮಾದರಿಯಾಗಿ ಬಳಸಬಹುದು ಎಂದು ಕೇಂದ್ರ ಸರಕಾರ ಹೇಳುತ್ತಿದೆ. ಪುತ್ತೂರು ಸಹಕಾರಿ ರಂಗದ ಕಾಶಿ ಎಂದೇ ಪ್ರಸಿದ್ಧಿ ಪಡೆದಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಮಾತನಾಡಿ, ಕೃಷಿಕರು ತಮ್ಮ ಹಾದಿಯಲ್ಲಿ ಕ್ರೀಯಾತ್ಮಕತೆ ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ಆದರೆ ಅದು ಸುಲಭ ಸಾಧ್ಯವಲ್ಲ. ತಂತ್ರಜ್ಞಾನ ಬಳಸಿಕೊಂಡು ಗೆಲ್ಲುವುದು ಅಗತ್ಯ. ಹಾಗೆಂದು ತಂತ್ರಜ್ಞಾನ ಎಂಬುವುದೇ ಶ್ರೇಷ್ಟವಲ್ಲ. ಅದನ್ನು ಬಳಸುವವನ ನಿರ್ಧಾರವೇ ಶ್ರೇಷ್ಟ. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನ ನಮ್ಮ ಬದುಕನ್ನು ಸುಗಮ ಗೊಳಿಸದೇ ಹೋದರೆ ಬದುಕು ಪ್ರಶ್ನೆಯಾಗುತ್ತದೆ. ಋಣಾತ್ಮಕ ಚಿಂತನೆ ಭಾರತೀಯ ಮನಸ್ಸುಗಳು ಧನಾತ್ಮಕ ಚಿಂತನೆ ಬೆಳೆಸಿಕೊಂಡರೆ ಮಾತ್ರ ಉತ್ತಮ ಭವಿಷ್ಯ ಲಭಿಸುತ್ತದೆ. ದೇಶದ ಪ್ರಗತಿ ಅಳೆಯಲು ಜಿಡಿಪಿ ಇರುವಂತೆ ವ್ಯಕ್ತಿಯ ಪ್ರಗತಿಯನ್ನು ಯಾವ ರೀತಿ ಅಳೆಯಬಹುದು. ಸಂಪತ್ತು ಅಥವಾ ಮಾನಸಿಕ ನೆಮ್ಮದಿಯಿಂದಲೇ ಎಂಬ ಬಗ್ಗೆ ಚರ್ಚೆ ನಡೆಯಬೇಕು. ತಂತ್ರಜ್ಞಾನದಿಂದ ನಮಗೆ ಇವೆರಡರಲ್ಲಿ ಯಾವುದನ್ನು ನೀಡಿದೆ ಎಂಬ ವಿಮರ್ಶೆ ನಡೆಯಬೇಕು ಎಂದರು.
ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಮಾತನಾಡಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ಚಂದ್ರ ಕಲ್ಮಡ್ಕ ವಂದಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.