ಉಳ್ಳಾಲ: ಹಾಡುಹಗಲೇ ಕಣ್ಣಿಗೆ ಮೆಣಸಿನ ಪುಡಿ ಎರಚಿ ರೋಲ್ಡ್ ಗೋಲ್ಡ್ ಸರ ಎಗರಿಸಿರುವ ಘಟನೆ ತಾಲೂಕಿನ ಹರೇಕಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಾವಲಿಗುರಿ ಬಳಿ ಕೆಲಸಕ್ಕೆ ತೆರಳಲು ಬಸ್ಗಾಗಿ ಶಾಂತಾ ಎಂಬುವವರು ಕಾಯುತ್ತಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯ ನಡೆಸಿ ಪರಾರಿಯಾಗಿದ್ದಾರೆ.
ಮಹಿಳೆ ಧರಿಸಿದ ಕರಿಮಣಿ ರೋಲ್ಡ್ ಗೋಲ್ಡ್ ಆಗಿದ್ದು ಕಳ್ಳರಿಗೆ ಹಿಡಿಶಾಪ ಹಾಕುತ್ತಾ ಕೊಣಾಜೆ ಠಾಣೆಗೆ ಬಂದು ಕೇಸು ದಾಖಲಿಸಿದ್ದಾರೆ.