ETV Bharat / state

ಉಳ್ಳಾಲ: ತೋಟಕ್ಕೆ ಬೇರೆಯವರ ಕೋಣ ಬಂದಿತೆಂದು ಕತ್ತು ಕೊಯ್ದು ಹತ್ಯೆ - buffalo in ullal

ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೋಣವನ್ನು ಹತ್ಯೆ ಮಾಡಲಾಗಿದೆ. ಕೋಣ ತೋಟಕ್ಕೆ ನುಗ್ಗಿದ ಕಾರಣಕ್ಕೆ ಈ ರೀತಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.

killed-buffalo-in-ullal
ತೋಟಕ್ಕೆ ಬೇರೆಯವರ ಕೋಣ ಬಂದಿತೆಂದು ಕತ್ತು ಕೊಯ್ದು ಹತ್ಯೆ
author img

By

Published : Aug 30, 2021, 9:18 AM IST

ಉಳ್ಳಾಲ: ಬೇರೆಯವರ ತೋಟಕ್ಕೆ ಜಾನುವಾರುಗಳೇನಾದರೂ ಹೋದರೆ ಹೊಡೆದು ಕಳಿಸುವುದು ಸಾಮಾನ್ಯ. ಆದರೆ, ಇಲ್ಲಿ ತೋಟಕ್ಕೆ ಬೇರೆಯವರ ಕೋಣ ಬಂದಿತೆಂದು ಕತ್ತು ಕೊಯ್ದು ಕ್ರೂರವಾಗಿ ಹತ್ಯೆ ಮಾಡಲಾಗಿದೆ.

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ಘಟನೆ ಜರುಗಿದೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಜನರು ಅಲ್ಲಿಗೆ ಧಾವಿಸಿ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿದ ವೇಳೆ ಕೃತ್ಯ ನಡೆದ ಸ್ಥಳದ ಬಳಿ ಸ್ಕೂಟರ್ ಪತ್ತೆಯಾಗಿದೆ. ಕೃತ್ಯ ನಡೆಸಿ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆ ಸಂಬಂಧ ಜಯರಾಮ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.