ETV Bharat / state

ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು, ಒಳಚರಂಡಿ ಯೋಜನೆ ತರಲು ಆದ್ಯತೆ: ಅಶೋಕ್ ರೈ

author img

By

Published : May 16, 2023, 7:30 PM IST

ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ, ಶಾಸಕನಾಗಿ ಗೆಲ್ಲುವವರೆಗೆ ಮಾತ್ರ ರಾಜಕೀಯ. ಈಗ ನಾನು ಕ್ಷೇತ್ರದ ಎಲ್ಲ ಜನರ ಶಾಸಕ ಎಂದು ನೂತನ ಅಶೋಕ್​​ ರೈ ಹೇಳಿದರು.

bringing-government-medical-college-to-puttur-is-a-priority-ashok-rai
ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು, ಒಳಚರಂಡಿ ಯೋಜನೆ ತರಲು ಆದ್ಯತೆ: ಅಶೋಕ್ ರೈ
ಪುತ್ತೂರು ನೂತನ ಶಾಸಕ ಅಶೋಕ್​ ರೈ

ಪುತ್ತೂರು (ದಕ್ಷಿಣ ಕನ್ನಡ): ಹಿಂದಿನ ಶಾಸಕರ ಅವಧಿಯಲ್ಲಿ ಪುತ್ತೂರಿನ ಇಲಾಖಾ ಕಚೇರಿಗಳು ಕಲೆಕ್ಷನ್ ಸೆಂಟರ್‌ಗಳಾಗಿದ್ದವು. ನನ್ನ ಶಾಸಕತ್ವ ಅವಧಿಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ಮಂಗಳವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ನಯಾ ಪೈಸೆ ಭ್ರಷ್ಟಾಚಾರ ಮಾಡೋದಿಲ್ಲ. ಅದೇ ರೀತಿ ನನ್ನ ಕ್ಷೇತ್ರದ ವ್ಯಾಪ್ತಿಯ ಇಲಾಖೆಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಡಿಯುವ ನೀರಿನ ಸಮಸ್ಯೆ, 94ಸಿ, ಅಕ್ರಮ ಸಕ್ರಮ ಸಮಸ್ಯೆ, ಕಟ್ ಕನ್ವರ್ಶನ್ ಸಮಸ್ಯೆ ನಿವಾರಣೆಗೆ ಆದ್ಯತೆ, ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜು, ಒಳಚರಂಡಿ ಯೋಜನೆ ತರಲು ಆದ್ಯತೆ, ಉದ್ಯೋಗ ಸೃಷ್ಟಿಗೆ ಗಮನ ಹರಿಸಲಿದ್ದೇನೆ. ನಾನು ಮಾಡುವ ಕೆಲಸಗಳು ಪುತ್ತೂರಿನ ಬೆಂಚ್ ಮಾರ್ಕ್​ಗಳಾಗಬೇಕು, ಕುಮಾರಧಾರೆಯಿಂದ ನೀರೆತ್ತಿ ಪ್ರತೀ ಗ್ರಾ.ಪಂ ಗಳಿಗೂ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಏಕಮುಖ ನಿರ್ಧಾರ ಕೈಗೊಳ್ಳುವುದಿಲ್ಲ: ಸರ್ಕಾರ ಅನುದಾನ ಬರಲು ಒಂದಷ್ಟು ದಿನಗಳು ಬೇಕು. ಅದಕ್ಕೆ ಮೊದಲು ಪ್ರತಿ ಬೂತ್ ಮಟ್ಟಕ್ಕೆ ಪ್ರವಾಸ ಮಾಡುವೆ. ಜನರ ಸಮಸ್ಯೆ ಅಧ್ಯಯನ ಮಾಡುವೆ. ಪುತ್ತೂರು ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿಗೆ ಆದ್ಯತೆ ನೀಡುವೆ. ಕಾಂಗ್ರೆಸ್ ಪಕ್ಷ ಬಲವರ್ಧನೆಗೆ ಕ್ರಮ ಕೈಗೊಳ್ಳುತ್ತೇನೆ. ಬೂತ್ ಮಟ್ಟದಲ್ಲಿ ಸಶಕ್ತೀಕರಣ ನಡೆಸಲಾಗುವುದು. ಪಕ್ಷದ ನಾಯಕರನ್ನು ಪ್ರತಿ ಹಂತದಲ್ಲೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವೆ. ಏಕಮುಖ ನಿರ್ಧಾರ ಕೈಗೊಳ್ಳುವುದಿಲ್ಲ ಎಂದರು.

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪುತ್ತೂರಿನಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು. ಅಧಿಕಾರಿಗಳಿಂದ ಸಲಹೆ ಪಡೆದುಕೊಳ್ಳುವೆ. ನನ್ನ ಅಭಿಪ್ರಾಯ, ಧೋರಣೆಗಳನ್ನು ಅವರಿಗೆ ತಿಳಿಸುವೆ ಎಂದರು. ಕೆಲವೇ ದಿನಗಳಲ್ಲಿ ಪಕ್ಷದ ವಿಜಯೋತ್ಸವ ಸಭೆ ನಡೆಯಲಿದೆ. ಬಹಿರಂಗ ಮೆರವಣಿಗೆ, ರ‍್ಯಾಲಿ ಮಾಡುವುದಿಲ್ಲ. ಒಳಾಂಗಣ ಸಭೆ ಮಾಡಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದರು.

ಅಭಿವೃದ್ಧಿಯಲ್ಲಿ ರಾಜಕೀಯವಿಲ್ಲ: ಶಾಸಕನಾಗಿ ಗೆಲ್ಲುವವರೆಗೆ ಮಾತ್ರ ರಾಜಕೀಯ. ಈಗ ನಾನು ಕ್ಷೇತ್ರದ ಎಲ್ಲ ಜನರ ಶಾಸಕ. ಸರ್ಕಾರದ ಅಭಿವೃದ್ಧಿ ಕೆಲಸಗಳು ಎಲ್ಲ ಜನರಿಗೂ ತಲುಪಬೇಕು. ಪಕ್ಷ ಯಾವುದೇ ಇರಲಿ, ಅದನ್ನು ನೋಡದೆ ಎಲ್ಲರಿಗೂ ಸವಲತ್ತುಗಳನ್ನು ತಲುಪಿಸುತ್ತೇನೆ. ಈ ಮೂಲಕ ನಾನು ಪ್ರೀತಿ-ವಿಶ್ವಾಸದ ರಾಜಕಾರಣ ಮಾಡಲು ಬದ್ಧನಿದ್ದೇನೆ ಎಂದು ಅಶೋಕ್ ರೈ ಹೇಳಿದರು.

ಅಪರಾಧಕ್ಕೆ ಬೆಂಬಲವಿಲ್ಲ: ಪುತ್ತೂರಿನ ರಾಜಕೀಯ ಸ್ಥಿತಿ ಒಂದಷ್ಟು ಸೂಕ್ಷ್ಮವಾಗಿದೆ. ಯಾರನ್ನೂ ದ್ವೇಷಿಸಲು ನಾನು ಹೋಗಲಾರೆ. ಎಲ್ಲರನ್ನೂ ಜತೆಯಲ್ಲಿ ಕೊಂಡೊಯ್ಯುವೆ. ಹಾಗೆಂದು ಅಪರಾಧ, ಕ್ರಿಮಿನಲ್ ಚಟುವಟಿಕೆ ಮಾಡುವವರಿಗೆ ಬೆಂಬಲ ನೀಡಲಾರೆ. ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗಲೂ ಪ್ರತಿಭಟನೆ ಮಾಡಿದ್ದರು. ಈಗ ಮತ್ತೆ ಶುರುವಿಟ್ಟುಕೊಂಡಿದ್ದಾರೆ. ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತರನ್ನೇ ಬಂಧಿಸಲಾಗಿದೆ. ಹೀಗಿದ್ದರೂ ಇವರು ಯಾರ ವಿರುದ್ಧ ಪ್ರತಿಭಟನೆ ಮಾಡುವುದು. ಇದೆಲ್ಲ ಜನರಿಗೆ ಅರ್ಥವಾಗುತ್ತದೆ ಎಂದು ಶಾಸಕರು ನುಡಿದರು.

ಇದನ್ನೂ ಓದಿ: ಗ್ಯಾರಂಟಿ ಕೊಡುಗೆಗೆ ಕಂಡೀಷನ್ಸ್ ಅಪ್ಲೈ ಮಾಡಬೇಡಿ: ಮಾಜಿ ಸಚಿವ ಅಶ್ವತ್ಥನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.