ETV Bharat / state

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಾದರ್ಶ ಇಂದಿಗೂ ಅನುಸರಣೀಯ: ಯು.ಟಿ.ಖಾದರ್

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಾದರ್ಶ ಹಾಗೂ ವ್ಯಕ್ತಿತ್ವ ಇಂದಿಗೂ ಎಲ್ಲರಿಗೂ ಅನುಸರಣೀಯ. ಮಾನವ ಧರ್ಮವೇ ಎಲ್ಲ ಧರ್ಮಕ್ಕಿಂತ ಶ್ರೇಷ್ಠ. ಕಷ್ಟದಲ್ಲಿರುವವರಿಗೆ ನಮ್ಮಿಂದಾದ ಸಹಾಯ ಮಾಡುವುದೇ ಮಾನವ ಧರ್ಮ. ಈ ರೀತಿಯಲ್ಲಿ ಜೀವನ ಸಾಗಿಸುವ ವ್ಯಕ್ತಿತ್ವ ಭವಿಷ್ಯದಲ್ಲಿ ಅಗತ್ಯವಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಾದರ್ಶ ಇಂದಿಗೂ ಅನುಸರಣೀಯ: ಶಾಸಕ ಯು.ಟಿ.ಖಾದರ್
author img

By

Published : Sep 14, 2019, 9:17 AM IST

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ಬಾದರ್ಶ ಹಾಗೂ ವ್ಯಕ್ತಿತ್ವ ಇಂದಿಗೂ ಎಲ್ಲರಿಗೂ ಅನುಸರಣೀಯ. ಮಾನವ ಧರ್ಮವೇ ಎಲ್ಲ ಧರ್ಮಕ್ಕಿಂತ ಶ್ರೇಷ್ಠ. ಕಷ್ಟದಲ್ಲಿರುವವರಿಗೆ ನಮ್ಮಿಂದಾದ ಸಹಾಯ ಮಾಡುವುದೇ ಮಾನವ ಧರ್ಮ. ಈ ರೀತಿಯಲ್ಲಿ ಜೀವನ ಸಾಗಿಸುವ ವ್ಯಕ್ತಿತ್ವ ಭವಿಷ್ಯದಲ್ಲಿ ಅಗತ್ಯವಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಇದರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ಮೈಗೂಡಿಸಿಕೊಂಡು, ಈಗಿನ ನಮ್ಮ ಉತ್ತಮ ವಿಚಾರಗಳನ್ನು ಸೇರಿಸಿ ಭವಿಷ್ಯದಲ್ಲಿ 50 ವರ್ಷಗಳ ಕಾಲಗಳ ಸಮಾಜದಲ್ಲಿ ನಮ್ಮ ಜೀವನ ಶೈಲಿ ಆದರ್ಶವಾಗಬೇಕು ಎಂದು ಹೇಳಿದರು‌.

ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ‌ ಕಾಲದಲ್ಲಿಯೇ ಸಮಾನತೆ ಮತ್ತು ಏಕತೆ ಸಾರುವ ಸಂದೇಶವನ್ನು ನೀಡಿದವರು. ಅಮೆರಿಕದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನಕ್ಕಿಂತಲೂ ಮೊದಲೇ ಕೇರಳದಲ್ಲಿ ವಿಶ್ವ ಧರ್ಮ ಸಮ್ಮೇಳನವನ್ನು ಅವರು ಆಯೋಜಿಸಿದ್ದರು. ಅಲ್ಲಿ ಎಲ್ಲ ಧರ್ಮದ ಧರ್ಮಗುರುಗಳು, ಸ್ವಾಮೀಜಿಗಳನ್ನು ಕರೆಸಿ ಅಲ್ಲಿ ನಮ್ಮ ಧರ್ಮವನ್ನು ನೀವು ಅರ್ಥಮಾಡಿಕೊಂಡು ನಿಮ್ಮ ಧರ್ಮವನ್ನು ನಾವು ಅರ್ಥಮಾಡಿಕೊಂಡು ಪರಸ್ಪರ ಸಂಸ್ಕೃತಿ ಹಂಚುವ ಮೂಲಕ ವಿಶ್ವಾಸಬದ್ಧ ಸಮಾಜ ಹಾಗೂ ಬಲಿಷ್ಠವಾದ ಭಾರತ ಕಟ್ಟುವ ಮೂಲಕ ಪೂರಕವಾಗಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದರು.‌ ಈ ಮಾತುಗಳು ಇಂದಿಗೂ ಹೆಚ್ಚು ಅಗತ್ಯವಾಗಿದೆ ಎಂದರು.

ಈ ವೇಳೆ, ‌ಶ್ರೀಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಸಾಯಿರಾಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಉಪಸ್ಥಿತರಿದ್ದರು.

Intro:ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವ ಆದರ್ಶ ಹಾಗೂ ವ್ಯಕ್ತಿತ್ವ ಇಂದಿಗೂ ಎಲ್ಲರಿಗೂ ಅನುಸರಣೀಯ. ಆದ್ದರಿಂದ ಮಾನವ ಧರ್ಮವೇ ಎಲ್ಲಾ ಧರ್ಮಕ್ಕಿಂತ ಶ್ರೇಷ್ಠ. ಆದರೆ ಎಲ್ಲಕ್ಕಿಂತಲೂ ಮಿಗಿಲಾದುದು ಮಾನವ ಧರ್ಮ. ಕಷ್ಟದಲ್ಲಿರುವವರಿಗೆ ನಮ್ಮಿಂದಾದ ಸಹಾಯ ಮಾಡುವುದೇ ಮಾನವ ಧರ್ಮ. ಈ ರೀತಿಯಲ್ಲಿ ಜೀವನ ಸಾಗಿಸುವ ವ್ಯಕ್ತಿತ್ವ ಭವಿಷ್ಯದಲ್ಲಿ ಅಗತ್ಯವಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದ.ಕ.ಜಿಲ್ಲಾಡಳಿತ ಇದರ ಸಂಯುಕ್ತ ಆಶ್ರಯದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರಗಳನ್ನು ಮೈಗೂಡಿಸಿಕೊಂಡು ಈಗಿನ ನಮ್ಮ ಉತ್ತಮ ವಿಚಾರಗಳನ್ನು ಸೇರಿಸಿ ಭವಿಷ್ಯದಲ್ಲಿ 50 ವರ್ಷಗಳ ಕಾಲಗಳ ಸಮಾಜದಲ್ಲಿ ನಮ್ಮ ಜೀವನ ಶೈಲಿ ಆದರ್ಶವಾಗಬೇಕು ಎಂದು ಹೇಳಿದರು‌.

Body:ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ‌ ಕಾಲದಲ್ಲಿಯೇ ಸಮಾನತೆ ಮತ್ತು ಏಕತೆಯನ್ನು ಸಾರುವ ಸಂದೇಶವನ್ನು ನೀಡಿದವರು. ಅಮೇರಿಕಾದ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳಕ್ಕಿಂತಲೂ ಮೊದಲೇ ಕೇರಳದಲ್ಲಿ ವಿಶ್ವ ಧರ್ಮ ಸಮ್ಮೇಳನವನ್ನು ಅವರು ಆಯೋಜಿಸಿದ್ದರು. ಅಲ್ಲಿ ಎಲ್ಲಾ ಧರ್ಮದ ಧರ್ಮಗುರುಗಳು, ಸ್ವಾಮೀಜಿಗಳನ್ನು ಕರೆಸಿ ಅಲ್ಲಿ ನಮ್ಮ ಧರ್ಮವನ್ನು ನೀವು ಅರ್ಥಮಾಡಿಕೊಂಡು ನಿಮ್ಮ ಧರ್ಮವನ್ನು ನಾವು ಅರ್ಥಮಾಡಿಕೊಂಡು ಪರಸ್ಪರ ಸಂಸ್ಕೃತಿಯನ್ನು ಹಂಚುವ ಮೂಲಕ ವಿಶ್ವಾಸಬದ್ಧ ಸಮಾಜ ಹಾಗೂ ಬಲಿಷ್ಠವಾದ ಭಾರತ ಕಟ್ಟುವ ಮೂಲಕ ಪೂರಕವಾಗಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದರು.‌ ಈ ಮಾತುಗಳು ಇಂದಿಗೂ ಅತೀ ಅಗತ್ಯವಾಗಿದೆ ಎಂದು ಶಾಸಕ ಖಾದರ್ ಹೇಳಿದರು.

ಈ ಸಂದರ್ಭ ‌ಶ್ರೀಕ್ಷೇತ್ರ ಕುದ್ರೋಳಿಯ ಅಧ್ಯಕ್ಷ ಸಾಯಿರಾಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ಕಸಪಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.