ETV Bharat / state

ಕ್ರಿಕೆಟ್ ಕಾಮೆಂಟರಿಗೆ ತೆರಳಿದ್ದ ಬಾಲಕ ನೇತ್ರಾವತಿ ಕಿನಾರೆಯಲ್ಲಿ ಶವವಾಗಿ ಪತ್ತೆ - boy found dead in mangaluru who went to cricket match

ಕ್ರಿಕೆಟ್ ಕಾಮೆಂಟರಿ ಮಾಡಲು ತೆರಳಿದ್ದ ಬಾಲಕ ಏಕಾಏಕಿ ನಾಪತ್ತೆಯಾಗಿದ್ದು, ಬಳಿಕ ನದಿ ಕಿನಾರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

boy-found-dead-in-mangaluru-who-went-to-cricket-match
ಕ್ರಿಕೆಟ್ ಕಾಮೆಂಟರಿ ಮಾಡಲು ತೆರಳಿದ್ದ ಬಾಲಕ ನೇತ್ರಾವತಿ ಕಿನಾರೆಯಲ್ಲಿ ಶವವಾಗಿ ಪತ್ತೆ
author img

By

Published : Feb 28, 2022, 9:57 PM IST

ಮಂಗಳೂರು: ನಿನ್ನೆ ಸಂಜೆಯವರೆಗೆ ಕ್ರಿಕೆಟ್ ಕಾಮೆಂಟರಿ ಮಾಡಲು ತೆರಳಿದ್ದ ಬಾಲಕ ಏಕಾಏಕಿ ನಾಪತ್ತೆಯಾಗಿದ್ದು, ಇಂದು ಸಂಜೆ ಆತನ ಮೃತದೇಹ ನದಿ ಕಿನಾರೆಯಲ್ಲಿ ಸಿಕ್ಕಿದೆ. ನಗರದ ಹೊಯಿಗೆಬಜಾರ್ ಸಮೀಪ ಘಟನೆ ನಡೆದಿದೆ.

ಮಂಗಳೂರಿನ ಮಹಾಕಾಳಿಪಡ್ಪುವಿನ ಚೆನ್ನಪ್ಪ ಎಂಬವರ ಪುತ್ರ ದೃಶ್ಯಂತ್ (16) ಮೃತಪಟ್ಟ ಬಾಲಕ. ಈ ಬಾಲಕ ರೊಸಾರಿಯೋ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ. ಭಾನುವಾರ ರಜೆ ಇದ್ದ ಕಾರಣ ಮಹಾಕಾಳಿಪಡ್ಪುವಿನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯದಲ್ಲಿ ಸಂಜೆ 3.30ರ ತನಕ ಕ್ರಿಕೆಟ್ ಕಾಮೆಂಟರಿ ಮಾಡುತ್ತಿದ್ದ. ಆತನ ಸ್ನೇಹಿತರೆಲ್ಲರೂ ಪಂದ್ಯ ಗೆದ್ದ ಬಳಿಕ ಬಳಿಕ ಹೊರಟು ಹೋಗಿದ್ದರು. ಆದರೆ, ದೃಶ್ಯಂತ್ ಮನೆಗೆ ಹೋಗಿರಲಿಲ್ಲ. ಮನೆಯವರು ಎಲ್ಲ ಕಡೆ ಹುಡುಕಾಡಿ ಪತ್ತೆಯಾಗದ ಕಾರಣ ಇಂದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

boy-found-dead-in-mangaluru-who-went-to-cricket-match
ಬಾಲಕನ ಮೃತದೇಹ

ಇದನ್ನೂ ಓದಿ: ಸಚಿವ ಗಡ್ಕರಿ ಹಾಡಿ ಹೊಗಳಿದ ಖರ್ಗೆ.. ಸಾವಿನ ದಾರಿಗೆ ಮುಕ್ತಿ: ಟೋಲ್ ಫ್ರೀ ಮೂಲಕ ವಿಶೇಷ ಸೇವೆ.. ಸಚಿವ ಜೋಶಿ ವಿಶ್ವಾಸ

ಇಂದು ಸಂಜೆ ದೃಶ್ಯಂತ್ ಮೃತದೇಹ ಹೊಯಿಗೆಬಜಾರ್ ಬಳಿ ನೇತ್ರಾವತಿ ನದಿ ಕಿನಾರೆಯಲ್ಲಿ ಪತ್ತೆಯಾಗಿದೆ. ಕ್ರಿಕೆಟ್ ಕಾಮೆಂಟರಿ ಮುಗಿದ ಬಳಿಕ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.