ಮಂಗಳೂರು: ''ಹಲವು ವರ್ಷಗಳಿಂದ ನನಗೆ ನೀಡಲಾಗುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆಯಲಾಗಿದೆ. ಚುನಾವಣೆಯ ನೆಪವೊಡ್ಡಿ ನನ್ನ ವೈಯಕ್ತಿಕ ರಿವಾಲ್ವರ್ ಅನ್ನು ಪೊಲೀಸ್ ಇಲಾಖೆ ಹಿಂಪಡೆದಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡವಿದೆ. ಆದ್ದರಿಂದ ನನ್ನ ಹತ್ಯೆಯಾದಲ್ಲಿ ಅವರು ಹಾಗೂ ಸಂಘ ಪರಿವಾರದ ಪ್ರಮುಖರೇ ನೇರ ಹೊಣೆ'' ಎಂದು ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು: ಕೋರ್ಟ್ ಆವರಣದಲ್ಲೇ ವಕೀಲನಿಗೆ ಚಾಕುವಿನಿಂದ ಇರಿದ ಮಹಿಳೆ
ನಗರದ ಪ್ರೆಸ್ಕ್ಲಬ್ನಲ್ಲಿಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ನನಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕಳೆದ 16 ವರ್ಷಗಳ ಹಿಂದೆ ಸರಕಾರವೇ ಗನ್ ಮ್ಯಾನ್ ನೀಡಿತ್ತು. ಇದರ ಜೊತೆಗೆ ವೈಯಕ್ತಿಕ ರಿವಾಲ್ವರ್ ಅನ್ನು ಪಡೆದಿದ್ದೆ. ಆದರೆ ಈಗ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ. ರಿವಾಲ್ವರ್ ಅನ್ನು ಚುನಾವಣಾ ನೆಪವೊಡ್ಡಿ ಈ ಬಾರಿ ಹಿಂಪಡೆಯಲಾಗಿದೆ. ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ. ಗೃಹ ಸಚಿವರವರೆಗೆ ಒತ್ತಡ ಹಾಕಿದ್ದರೂ ಪೊಲೀಸ್ ಭದ್ರತೆ ಹಿಂಪಡೆಯಲಾಗಿದೆ ಎಂದರೆ, ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರೇ ನೇರ ಕಾರಣ'' ಎಂದು ಹೇಳಿದರು.
ಇದನ್ನೂ ಓದಿ: ಕೋರ್ಟ್ನಲ್ಲಿ ವಕೀಲರ ಸೋಗಿನಲ್ಲಿದ್ದ ದುಷ್ಕರ್ಮಿಯಿಂದ ಫೈರಿಂಗ್: ಮಹಿಳೆಗೆ ಗುಂಡೇಟು
''ಬೆದರಿಕೆಯಿರುವುದರಿಂದ ಕಾರ್ಯಕರ್ತರು ವಾಹನ ಹಿಡಿದು ಅಲ್ಲಾಡಿಸಿರುವುದ್ದಕ್ಕೆ ಪೊಲೀಸ್ ಭದ್ರತೆ ವ್ಯವಸ್ಥೆ ಹೊಂದಿರುವವರೂ ಇದ್ದಾರೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ರನ್ನು ಟೀಕಿಸಿದ ಅವರು, ಯಾರಿಗೆ ಸಮಾಜ ವಿರೋಧಿ ಶಕ್ತಿಗಳ ಬೆದರಿಕೆಯಿದೆಯೋ ಅವರ ಭದ್ರತಾ ವ್ಯವಸ್ಥೆಯನ್ನು ಹಿಂಪಡೆಯಲಾಗಿದೆ. ಹಿಂದೂ ಸಂಘಟನೆಯಲ್ಲಿರುವವರು ಇವರ ನಿರ್ಣಯದ ವಿರುದ್ಧ ಸ್ವರ ಎತ್ತಬಾರದೆಂಬ ಹಿನ್ನೆಲೆಯಲ್ಲಿ ಪ್ರಮುಖರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತರನ್ನು ಮೌನವಾಗಿಸುವ ಷಡ್ಯಂತ್ರ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ತನ್ನ ಬಾಯಿ ಮುಚ್ಚಿಸುವ ಯತ್ನ ನಡೆದಿದೆ. ಯಾವುದಕ್ಕೂ ಜಗ್ಗದ ಹಿನ್ನೆಲೆಯಲ್ಲಿ ಪ್ರಾಣಭಯವನ್ನು ಒಡ್ಡುವ ಮೂಲಕ ಪರೋಕ್ಷವಾಗಿ ಬಾಯಿ ಮುಚ್ಚಿಸಲಾಗುತ್ತದೆ'' ಎಂದು ಹೇಳಿದರು.
ಇದನ್ನೂ ಓದಿ: 18 ವರ್ಷಗಳಿಂದ ಕಳ್ಳತನವೇ ಕಾಯಕ; ಕದ್ದ ಮಾಲನ್ನೇ ಟಿಪ್ಸ್ ನೀಡುತ್ತಿದ್ದ ಚಾಲಕಿ ಸೆರೆ
''ಬಿಜೆಪಿ ರಾಜ್ಯಾಧ್ಯಕ್ಷರ ಮೂಲಕದ ವ್ಯವಸ್ಥೆ ನನ್ನ ಹತ್ಯೆಗೆ ಪ್ರೇರಣೆ ಕೊಡುವ ಮುಕ್ತ ಅವಕಾಶವನ್ನು ಮಾಡುತ್ತಿದೆ. ಅಕಸ್ಮಾತ್ ಆಗಿ ದುಷ್ಕರ್ಮಿಗಳಿಂದ ನನ್ನ ಬಲಿಯಾದರೆ, ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರೇ ನೇರ ಹೊಣೆ. ನಾನು ಹತ್ಯೆಯಾದಲ್ಲಿ ಯಾವುದೇ ಸಂಘ ಪರಿವಾರದ ನಾಯಕರು ನನ್ನ ಅಂತಿಮ ದರ್ಶನಕ್ಕೆ ಬರಬಾರದು. ಯಾವುದೇ ಕಾರಣಕ್ಕೆ ನನ್ನ ಮೃತದೇಹದ ಮೆರವಣಿಗೆಯನ್ನೂ ನಡೆಸಬಾರದು" ಎಂದು ಅವರು ಆಗ್ರಹಿಸಿದರು.