ETV Bharat / state

ನೆಹರೂ ಕಾಲದಲ್ಲಿ ಪೌರತ್ವ ನೀಡಬೇಕೆಂದಿದ್ದವರು ಈಗ ತಿರುಗಿ ಬಿದ್ದಿದ್ದೇಕೆ?: ನಳಿನ್ ಪ್ರಶ್ನೆ​ - ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲು ಸುದ್ದಿ

ಕಳೆದ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಲು ವಿರೋಧ ಪಕ್ಷಗಳಿಗೆ ಅಸ್ತ್ರಗಳು ದೊರಕಲಿಲ್ಲ. ನೆಹರೂ ಕಾಲದಿಂದಲೂ ಲೋಕಸಭೆಯಲ್ಲಿ ಪೌರತ್ವ ಕೊಡಬೇಕೆಂದು ಹೇಳುತ್ತಿದ್ದ ಕಾಂಗ್ರೆಸ್​​ ಇಂದು ರಾಜಕೀಯ ಮಾಡಲು ವಿರೋಧ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲು ಹೇಳಿದ್ದಾರೆ.

Nalin Kumar kateel
ನಳೀನ್ ಕುಮಾರ್​ ಕಟೀಲು
author img

By

Published : Jan 1, 2020, 9:25 PM IST

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಂಡ ಬಳಿಕ ಸುಳ್ಳು ಹೇಳಿ ದೇಶದಲ್ಲಿ ಗಲಭೆ ಸೃಷ್ಟಿಸುವ ಕಾರ್ಯ ವಿರೋಧ ಪಕ್ಷಗಳಿಂದ ನಡೆಯುತ್ತಿದೆ. ಮೋದಿ ಸರಕಾರದ ಆಡಳಿತಕ್ಕೆ ಕಪ್ಪು ಚುಕ್ಕೆಗಳನ್ನು ಇಡುವ ತಂತ್ರವನ್ನು ಅಪಪ್ರಚಾರಗಳ ಮೂಲಕ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲು ಆರೋಪಿಸಿದರು.

ನಗರದ ಕೊಡಿಯಾಲ್​ ಬೈಲ್​ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಲು ವಿರೋಧ ಪಕ್ಷಗಳಿಗೆ ಅಸ್ತ್ರಗಳು ದೊರಕಲಿಲ್ಲ. ನೆಹರೂ ಕಾಲದಿಂದಲೂ ಲೋಕಸಭೆಯಲ್ಲಿ ಪೌರತ್ವ ಕೊಡಬೇಕೆಂದು ಹೇಳುತ್ತಿದ್ದ ಕಾಂಗ್ರೆಸ್​​​ ಇಂದು ರಾಜಕೀಯ ಮಾಡಲು ವಿರೋಧ ಮಾಡುತ್ತಿದೆ ಎಂದು ಟೀಕಿಸಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್

Intro:ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಂಡ ಬಳಿಕ ಸುಳ್ಳು ಹೇಳಿ ದೇಶದಲ್ಲಿ ಗಲಭೆಯನ್ನು ಸೃಷ್ಟಿಸುವ ಕಾರ್ಯ ವಿರೋಧ ಪಕ್ಷಗಳಿಂದ ನಡೆಯುತ್ತಿದೆ. ಕಳೆದ ಆರು ವರ್ಷಗಳಲ್ಲಿ ಮೋದಿ ಸರಕಾರ ಒಳ್ಳೆಯ ಆಡಳಿತ ನಡೆಸುತ್ತಿದೆ. ಆ ಆಡಳಿತಕ್ಕೆ ಕಪ್ಪು ಚುಕ್ಕೆಗಳನ್ನು ಇಡುವ ತಂತ್ರವನ್ನು ಅಪಪ್ರಚಾರಗಳ ಮೂಲಕ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಳೆದ ಆರು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರದ ವಿರುದ್ಧ ಒಂದೇ ಒಂದು ಹೋರಾಟ ಮಾಡಲು ವಿರೋಧ ಪಕ್ಷಗಳಿಗೆ ಅಸ್ತ್ರಗಳು ದೊರಕಲಿಲ್ಲ. ನೆಹರೂ ಕಾಲದಿಂದಲೂ ಲೋಕಸಭೆಯಲ್ಲಿ ಪೌರತ್ವ ಕೊಡಬೇಕೆಂದು ಹೇಳುತ್ತಿದ್ದ ಕಾಂಗ್ರೆಸೇ ಇಂದು ರಾಜಕೀಯ ಮಾಡಲು ವಿರೋಧ ಮಾಡುತ್ತಿದೆ ಎಂದು ಟೀಕಿಸಿದರು.

Body:ಬ್ರಿಟಿಷರು ಭಾರತವನ್ನು ಬಿಟ್ಟು ಹೊರಟ ಸಂದರ್ಭ ದೇಶ ವಿಭಜನೆ ಮಾಡಿದಂದಿನಿಂದ ಪೌರತ್ವದ ಸಮಸ್ಯೆ ಆರಂಭವಾಗಿದೆ. ಇದರ ಮೂಲ ಕರ್ತೃ ಕಾಂಗ್ರೆಸ್. ಆಗ ಭಾರತ ಪಾಕಿಸ್ತಾನ ಇಬ್ಭಾಗವಾಯಿತು. ಭಾರತೀಯ ಮುಸ್ಲಿಮರು ಇಲ್ಲೇ ನೆಲೆ ನಿಂತರು‌. ಒಂದಷ್ಟು ಜನರು ಪಾಕಿಸ್ತಾನಕ್ಕೆ ಹೋದರು‌. ಪಾಕಿಸ್ತಾನ ದಲ್ಲಿದ್ದ ಹಿಂದೂ, ಜೈನ, ಸಿಖ್ ಮುಂತಾದ ಧರ್ಮೀಯರು ಅಲ್ಲಿ ಅಲ್ಪಸಂಖ್ಯಾತರಾದರು. ಭಾರತವನ್ನು ಜಾತ್ಯಾತೀತ ರಾಷ್ಟ್ರ ಮಾಡಿ ಅಲ್ಪಸಂಖ್ಯಾತ, ಬಹುಸಂಖ್ಯಾತ ವರ್ಗೀಕರಣ ಮಾಡಿದರು. ಸಾಂವಿಧಾನಿಕವಾಗಿ ಅಲ್ಪಸಂಖ್ಯಾತರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಲಾಯಿತು. ಆದರೆ ಪಾಕಿಸ್ತಾನ ಬಾಂಗ್ಲಾಗಳಲ್ಲಿ ಹಿಂದೆ 23% ಇದ್ದ ಹಿಂದೂಗಳ ಸಂಖ್ಯೆ ಇಂದು 1.50 % ಗೆ ಇಳಿದಿದೆ. ಭಾರತದಲ್ಲಿ 3% ಇದ್ದ ಮುಸ್ಲಿಮರ ಸಂಖ್ಯೆ ಇಂದು 19%ಕ್ಕೆ ಏರಿದೆ. ಆದ್ದರಿಂದ ಅಲ್ಪಸಂಖ್ಯಾತರ ತುಷ್ಟೀಕರಣ ಪಾಕಿಸ್ತಾನದಲ್ಲಿ ನಡೆದಿದೆ ಎಂಬುದು ಸ್ಪಷ್ಟ ಎಂದು ನಳಿನ್ ಕುಮಾರ್ ಹೇಳಿದರು.

ಅಂದು ಮತಾಂತರಕ್ಕೆ ಒಪ್ಪದ, ಆಕ್ರಮಣಕ್ಕೆ ಒಳಗಾಗದ ಹಿಂದೂಗಳು ಭಾರತಕ್ಕೆ ಬಂದರು. ಆಗ ಮಹಾತ್ಮಾ ಗಾಂಧೀಜಿಯವರು ಸಮಸ್ಯೆಗೆ ಒಳಗಾದವರಿಗೆ ಪೌರತ್ವ ಕೊಡುವುದು ನಮ್ಮ ಧರ್ಮ ಎಂದಿದ್ದರು. ಅಲ್ಲದೆ ನೆಹರೂ ಅವರಿಗೆ ಕಾನೂನು ಇಲ್ಲದಿದ್ದರೆ ಸಂವಿಧಾನದಲ್ಲಿ ತಿದ್ದುಪಡಿ ಮಾಡಿಯಾದರೂ ಪೌರತ್ವ ನೀಡಲಾಗುವುದು ಎಂದು 1950ರಲ್ಲಿ ಲೋಕಸಭೆಯಲ್ಲಿ ಮಾತನಾಡುವಾಗ ಹೇಳಿದ್ದರು. ಕಾಂಗ್ರೆಸ್ ಸರಕಾರವೇ ಇದನ್ನು ಒಪ್ಪಿಕೊಂಡಿತ್ತು. ಇಂದಿರಾಗಾಂಧಿ ಆಡಳಿತ ಇರುವ ಬಾಂಗ್ಲಾದಿಂದ ಬಂದವರಿಗೆ ಪೌರತ್ವ ನೀಡಲಾಗಿತ್ತು. ಬೇರೆ ದೇಶಗಳಿಂದ ಬಂದು 12 ವರ್ಷಗಳ ಭಾರತದಲ್ಲಿ ವಾಸಿಸುತ್ತಿದ್ದರೆ ಅಂತವರಿಗೆ ಭಾರತದ ಪೌರತ್ವ ಲಭ್ಯವಾಗುತ್ತದೆ. ಅದನ್ನು ನರೇಂದ್ರ ಮೋದಿಯವರು 5ವರ್ಷಕ್ಕೆ ಇಳಿಸಿದ್ದಾರೆ. ಇದರಿಂದ ಯಾವುದೇ ಮತಧರ್ಮದವರಿಗೆ ಅನ್ಯಾಯ ಆಗೋದಿಲ್ಲ. ಅದನ್ನು‌ ಜನರಿಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು‌.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.