ETV Bharat / state

ಮುಂದಿನ ಸಲ ಅಧಿಕಾರಕ್ಕೆ ಬರಲ್ಲ ಅಂತಾ ಬಿಜೆಪಿಯವರಿಗೂ ಗೊತ್ತಾಗಿದೆ: Khadar - ಮುಂದಿನ ಬಾರಿ ಅಧಿಕಾರಲ್ಲಿ ಬರಲ್ಲ ಅಂತಾ ಬಿಜೆಪಿಯವರಿಗೂ ಗೊತ್ತಾಗಿದೆ

ಬಿಜೆಪಿ ನಮ್ಮ ಮುಖಂಡರನ್ನು ಎಷ್ಟೇ ವಿಭಜನೆ ಮಾಡಲು ಹೊರಟರೂ, ವೈಮನಸ್ಸು ಉಂಟು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ ಎಂದು ಶಾಸಕ ಯು.ಟಿ.ಖಾದರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಾದರ್
ಖಾದರ್
author img

By

Published : Jun 28, 2021, 7:07 PM IST

ಮಂಗಳೂರು: ರಾಜ್ಯ ಸರ್ಕಾರದ ದುರಾಡಳಿತ, ಬೇಜವಾಬ್ದಾರಿ ಆಡಳಿತದಿಂದ ಜನರು ಮತ್ತೆ ಬಿಜೆಪಿಗೆ ಅಧಿಕಾರ ಕೊಡುವುದಿಲ್ಲ ಎಂದು ಬಿಜೆಪಿಯ ಮುಖಂಡರಿಗೂ ಗೊತ್ತಾಗಿದೆ. ಅದಕ್ಕಾಗಿ ಅವರು ಕಾಂಗ್ರೆಸ್​​ನಲ್ಲಿ ಯಾರು ಮುಖ್ಯಮಂತ್ರಿ ಆಗಬಹುದೆಂದು ಚರ್ಚೆ ಮಾಡಿ ಸಲಹೆ ಕೊಡುತ್ತಿದ್ದಾರೆ ಎಂದು ಶಾಸಕ ಯು.ಟಿ.ಖಾದರ್ ವ್ಯಂಗ್ಯವಾಡಿದರು.

ಮುಂದಿನ ಬಾರಿ ಅಧಿಕಾರಕ್ಕೆ ಬರಲ್ಲ ಅಂತಾ ಬಿಜೆಪಿಯವರಿಗೂ ಗೊತ್ತಾಗಿದೆ: ಖಾದರ್

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿರುವ ಅವರು, ಬಿಜೆಪಿಗರ ಸಲಹೆ ಹಾಗೂ ಕಾಳಜಿಗೆ ಕೃತಜ್ಞತೆಗಳು. ಕಾಂಗ್ರೆಸ್​​ನಲ್ಲಿ‌ ನಾವೆಲ್ಲರೂ ಒಗ್ಗಟ್ಟಿನಲ್ಲಿದ್ದೇವೆ. ಬಿಜೆಪಿ ನಮ್ಮ ಮುಖಂಡರನ್ನು ಎಷ್ಟು ವಿಭಜನೆ ಮಾಡಲು ಹೊರಟರೂ, ವೈಮನಸ್ಸು ಉಂಟು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಸ್ಪಷ್ಟವಾಗಿದೆ.

‘ಕೈಗಾರಿಕೆ ಉಳಿಸಿ, ಪ್ರೋತ್ಸಾಹಿಸಿ’

ದ.ಕ.ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಉಳಿಸಿದರೆ, ಪ್ರೋತ್ಸಾಹಿಸಿದರೆ ಮಾತ್ರ ಜನಸಾಮಾನ್ಯರಿಗೆ, ಯುವಕರಿಗೆ ಉದ್ಯೋಗ ಸೃಷ್ಟಿಯಾಗಲು ಸಾಧ್ಯ. ಇದನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಬಹಳ ಗಂಭೀರವಾಗಿ ಆಲೋಚನೆ ಮಾಡಬೇಕು. ಅನ್ಲಾಕ್ ಆದ ಬಳಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತೆ ಅತ್ಯಂತ ವೇಗದಲ್ಲಿ ಮರು ಉತ್ಪಾದನೆಯಲ್ಲಿ ತೊಡಗಿಸಲು ಅನುವು ಮಾಡಿಕೊಡಬೇಕು. ಈ ಮೂಲಕ‌ ಹೆಚ್ಚು ಉತ್ಪಾದನೆ ಹಾಗೂ ಹೆಚ್ಚು ಉದ್ಯೋಗ ಸೃಷ್ಟಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಆದರೆ, ಇದಕ್ಕೆಲ್ಲ ಸರ್ಕಾರವು ಬ್ಯಾಂಕ್​​ನ ಮೂಲಕ ಸಹಕಾರ ನೀಡಬೇಕೆಂದು ಖಾದರ್ ಒತ್ತಾಯಿಸಿದ್ದಾರೆ.

‘ದೇಶವನ್ನು ಪರಸ್ಪರ ಬೆಸೆಯುವ ಕೊಂಡಿ’

ಗಡಿನಾಡು ಪ್ರದೇಶದಲ್ಲಿ ಕನ್ನಡಕ್ಕೆ ಧಕ್ಕೆಯಾಗುವಂತಹ ಯಾವುದೇ ಕೆಲಸವನ್ನು‌ ಕೇರಳ ಸರ್ಕಾರ ಮಾಡಬಾರದು, ಮಾಡುವುದಿಲ್ಲ ಎಂಬ ವಿಶ್ವಾಸವಿದೆ. ಕೇರಳ ಗಡಿಭಾಗದಲ್ಲಿ ಸರ್ವೆ ಹಾಗೂ ರೆವೆನ್ಯೂ ಮೂಲಕ‌ ಬೇರೆ ಬೇರೆ ಇರಬಹುದು. ಆದರೆ, ಇದು ದೇಶವನ್ನು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಏನಿದ್ದರೂ, ಅಲ್ಲಿಯ ಕನ್ನಡ ಸಂಬಂಧಿ‌ ಊರಿನ ಹೆಸರು ಬದಲಾವಣೆ ಮಾಡಲು ಅಲ್ಲಿನ ಶಾಸಕರು ಬಿಡಬಾರದು ಎಂದು ಶಾಸಕ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.