ETV Bharat / state

ಬಯೋ ವೇಸ್ಟ್​​ನಿಂದ ಬಯೋಗ್ಯಾಸ್ ಉತ್ಪಾದನೆ: ಹೊಸ ಘಟಕದೊಂದಿಗೆ ಸ್ವಾವಲಂಬಿಯಾಗಲಿದೆ ಎನ್​ಐಟಿಕೆ - N ITK to be self-reliant with new plant

ಮಂಗಳೂರಿನ ಸುರತ್ಕಲ್​ನಲ್ಲಿರುವ ಎನ್​ಐಟಿಕೆಯಲ್ಲಿ ಬಯೋ ವೇಸ್ಟ್‌ ರೀಸೈಕ್ಲಿಂಗ್ ಪೈಲಟ್ ಘಟಕ ಆರಂಭಿಸಲಾಗಿದೆ. ಬಯೋ ವೇಸ್ಟ್​​ನಿಂದ ಈ ಘಟಕದ ಮೂಲಕ ಬಯೋ ಗ್ಯಾಸ್​ನನ್ನು ಉತ್ಪಾದನೆ ಮಾಡಲಾಗುತ್ತದೆ.

N ITK
ಬಯೋ ವೇಸ್ಟ್​​ನಿಂದ ಬಯೋಗ್ಯಾಸ್ ಉತ್ಪಾದನೆ
author img

By

Published : Mar 25, 2021, 9:32 PM IST

Updated : Mar 25, 2021, 10:47 PM IST

ಮಂಗಳೂರು: ಇಂಧನ ಉತ್ಪಾದನೆಯನ್ನು ಇತ್ತೀಚೆಗೆ ವಿವಿಧ ಮೂಲಗಳಿಂದ ನಡೆಸಲು ಸಾಧ್ಯವಾಗಿದೆ. ಇದೇ ರೀತಿಯಲ್ಲಿ ಆಹಾರ ಮತ್ತು ತರಕಾರಿ ತ್ಯಾಜ್ಯಗಳಿರುವ ಬಯೋ ವೇಸ್ಟ್​​ನಿಂದಲೂ ಬಯೋ ಗ್ಯಾಸ್ ಉತ್ಪಾದನೆ ಮಾಡಲಾಗುತ್ತದೆ. ಇದನ್ನು ಮಂಗಳೂರಿನ ಎನ್​​ಐಟಿಕೆ ಸಂಸ್ಥೆ ತನ್ನ ಪ್ಲಾಂಟ್​ನಲ್ಲಿ ಆರಂಭಿಸುವ ಮೂಲಕ ಇಂಧನ ಬಳಕೆಯಲ್ಲಿ ಸ್ವಾವಲಂಬಿಯಾಗಲು ಮುಂದಾಗಿದೆ.

ಬಯೋ ವೇಸ್ಟ್​​ನಿಂದ ಬಯೋಗ್ಯಾಸ್ ಉತ್ಪಾದನೆ

ಮಂಗಳೂರಿನ ಸುರತ್ಕಲ್​ನಲ್ಲಿರುವ ಎನ್​ಐಟಿಕೆಯಲ್ಲಿ ಬಯೋ ವೇಸ್ಟ್‌ ರೀಸೈಕ್ಲಿಂಗ್ ಪೈಲಟ್ ಘಟಕ ಆರಂಭಿಸಲಾಗಿದೆ. ನೈಸರ್ಗಿಕ ಸಂಪನ್ಮೂಲಗಳನ್ನು ಪರಿವರ್ತಿಸುವಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರಾದ ಇಟಲಿಯ ಮೈರೆ ಟೆಕ್ನಿಮಾಂಟ್ ಗ್ರೂಪ್​​ ಮಂಗಳೂರಿನ ಎನ್ ಐ ಟಿ ಕೆ ಯಲ್ಲಿ ಬಯೋ ವೇಸ್ಟ್‌ ಪುನರ್ ಬಳಕೆ ಪೈಲಟ್ ಘಟಕ ಆರಂಭಿಸಿದೆ. ಮಂಗಳೂರಿನ ಎನ್ ಐ ಟಿ ಕೆಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ವಿಡಿಯೋ ಮೂಲಕ ಉದ್ಘಾಟಿಸಿದರು.

ಈ ಬಯೋ ಗ್ಯಾಸ್ ಪೈಲಟ್ ಘಟಕವು ಕ್ಯಾಂಪಸ್​ನೊಳಗೆ ಇಂಧನ ಸ್ವಾವಲಂಬನೆಯನ್ನು ‌ಸಾಧಿಸುವುದಕ್ಕೆ ಮೀಸಲಾಗಿದೆ. ಎನ್​​ಐಟಿಕೆ ಕ್ಯಾಂಪಸ್​ನೊಳಗೆ ಇರುವ ಕ್ಯಾಂಟೀನ್ ಮತ್ತು ಹಾಸ್ಟೆಲ್ ಬ್ಲಾಕ್​​ಗಳಲ್ಲಿ ಉತ್ಪಾದನೆಯಾಗುವ ಆಹಾರ ಮತ್ತು ತರಕಾರಿ ತ್ಯಾಜ್ಯಗಳನ್ನು ಬಳಸಿ ಬಯೋ ಗ್ಯಾಸ್ ಉತ್ಪಾದನೆ ಮಾಡಲಿದೆ.

ಇದನ್ನೂ ಓದಿ: ವಿಮ್ಸ್​ನಲ್ಲಿ ವಿಕಿರಣ ಚಿಕಿತ್ಸಾ ವಿಭಾಗ ಪುನಾರಂಭ: ತಪ್ಪಿತು ಕ್ಯಾನ್ಸರ್ ರೋಗಿಗಳ ಅಲೆದಾಟ

ಎನ್​ಐಟಿಕೆ ಕ್ಯಾಂಪಸ್​ನಲ್ಲಿ ಪ್ರತಿದಿನ 500 ಕೆ ಜಿ ಯಷ್ಟು ಬಯೋ ತ್ಯಾಜ್ಯ ಉತ್ಪಾದಿಸುತ್ತದೆ. ಈ ತ್ಯಾಜ್ಯದಿಂದ ವಾರ್ಷಿಕವಾಗಿ 35,400 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ಬಯೋ ಗ್ಯಾಸ್ ಉತ್ಪಾದಿಸಲಾಗುತ್ತದೆ. ಈ ಬಯೋ ಗ್ಯಾಸ್​​ನನ್ನು ಎನ್​ಐಟಿಕೆಯ ಹಾಸ್ಟೆಲ್ ಮತ್ತು ಕ್ಯಾಂಟೀನ್​​ನಲ್ಲಿ ಉಪಯೋಗಿಸುವ ಗ್ಯಾಸ್​ಗೆ ಪರ್ಯಾಯವಾಗಿ ಬಳಸಲು ನಿರ್ಧರಿಸಲಾಗಿದೆ. ಇದರಿಂದಾಗಿ ವಾರ್ಷಿಕವಾಗಿ ಎನ್​ಐಟಿಕೆಗೆ 2.42 ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.

Last Updated : Mar 25, 2021, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.