ಉಳ್ಳಾಲ(ದಕ್ಷಿಣಕನ್ನಡ): ಶಿಕ್ಷಣ ಇಲಾಖೆಯ ಆದೇಶದಂತೆ ಹಿಜಾಬ್ ಧರಿಸಬೇಡಿ ಎಂದ ಕಾಲೇಜಿನ ಆಡಳಿತ ಮಂಡಳಿಯು ಅಲ್ಲಿಯ ಉಪನ್ಯಾಸಕರಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಉಳ್ಳಾಲದ ಭಾರತ್ ಪಿಯು ಕಾಲೇಜಿನಲ್ಲಿ ಗೊಂದಲದ ವಾತಾವರಣದ ಉಂಟಾಗಿತ್ತು.
ಹಿಜಾಬ್ ಧರಿಸುತ್ತೇವೆ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಶಾಸಕ ಯು.ಟಿ ಖಾದರ್, ಕಾಲೇಜಿನ ಆಡಳಿತಮಂಡಳಿಯೊಂದಿಗೆ ಸಭೆ ನಡೆಸಿದರು. ವಿದ್ಯಾರ್ಥಿಗಳ ಭವಿಷ್ಯ ಮುಖ್ಯ, ವಿದ್ಯಾಭ್ಯಾಸ ಹಾಳಾಗಬಾರದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.
ಈ ವೇಳೆ ಮುಂದಿನ ಕೊರ್ಟ್ ಆದೇಶ ಬರುವವರೆಗೆ ರಜೆ ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು. ಇವರ ಮನವಿ ಮೇರೆಗೆ ಕಾಲೇಜಿನ ಆಡಳಿತ ಮಂಡಳಿ ರಜೆ ಘೋಷಿಸಿತು. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಸಹ ಭೇಟಿ ನೀಡಿ ಪ್ರಕರಣವನ್ನ ತಿಳಿಗೊಳಿಸಲು ಹರಸಾಹಪಟ್ಟರು.
ಆದರೆ, ದರ್ಗಾ ಅಧ್ಯಕ್ಷರು ಮನವರಿಕೆ ಮಾಡಿದ ಬಳಿಕವೂ ಕೆಲ ವಿದ್ಯಾರ್ಥಿಗಳು ಪಟ್ಟು ಹಿಡಿದು ಕಾಲೇಜಿನ ಗೇಟ್ ಬಳಿ ಪ್ರತಿಭಟಿಸಿದರು. ಇದರಿಂದ ಅನ್ಯ ಮಾರ್ಗ ಕಾಣದ ಕಾಲೇಜು ಆಡಳಿತ ಮಂಡಳಿಯು ಈ ನಿರ್ಧಾರಕ್ಕೆ ಬರಬೇಕಾಯಿತು.