ETV Bharat / state

ಯುವತಿ ಜೊತೆ ಬೈಕ್​ನಲ್ಲಿ ಓಡಾಟ: ಅನ್ಯಕೋಮಿನ ಯುವಕನಿಗೆ ಥಳಿತ - Etv Bharat Karnataka

ಅನ್ಯಕೋಮಿನ ಯುವಕನೊಂದಿಗೆ ಯುವತಿ ತಿರುಗುತ್ತಿರುವುದನ್ನು ಕಂಡು ಭಜರಂಗದಳದ ಕಾರ್ಯಕರ್ತರು ಯುವಕನನ್ನು ಥಳಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

Kn_Mng
ಅನ್ಯಕೋಮಿನ ಯುವಕನಿಗೆ ಭಜರಂಗದಳ ಕಾರ್ಯಕರ್ತರಿಂದ ಥಳಿತ
author img

By

Published : Dec 6, 2022, 8:35 PM IST

Updated : Dec 6, 2022, 10:31 PM IST

ಮಂಗಳೂರು: ಅನ್ಯಕೋಮಿನ ಯುವಕ ಲವ್ ಜಿಹಾದ್ ಮಾಡುತ್ತಿದ್ದಾನೆಂದು ಆರೋಪಿಸಿ ಮಂಗಳೂರಿನ ಜ್ಯುವೆಲ್ಲರಿ ಶಾಪ್‌ನೊಳಗೆ ನುಗ್ಗಿದ ಭಜರಂಗದಳದ ಕಾರ್ಯಕರ್ತರು ಯುವಕನಿಗೆ ಥಳಿಸಿದ್ದಾರೆ. ನಗರದ ಕಂಕನಾಡಿ ಬಳಿಯ ಜ್ಯುವೆಲ್ಲರಿ ಅಂಗಡಿಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಯುವಕ ಕೆಲಸ ಮಾಡುತ್ತಿದ್ದರು‌. ಇವರು ಬೈಕ್​ನಲ್ಲಿ ಓಡಾಡುವುದನ್ನು ಗಮನಿಸಿದ ಸಂಘಟನೆಯ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ.

ಅಲ್ಲದೇ ಈ ವಿಷಯವನ್ನು ಯುವತಿಯ ಪೋಷಕರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದು ಭಜರಂಗದಳ ಕಾರ್ಯಕರ್ತರು ಮತ್ತು ಪೊಲೀಸರ ಜೊತೆಗೆ ಯುವತಿ ಪೋಷಕರು ಜ್ಯುವೆಲ್ಲರಿ ಶಾಪ್​ಗೆ ಬಂದಿದ್ದು, ಈ ವೇಳೆ ಪೊಲೀಸರೆದುರೇ ಯುವಕನ ಮೇಲೆ ಹಲ್ಲೆ ನಡೆದಿದೆ. ಯುವತಿಗೆ ಪೋಷಕರು ಥಳಿಸಿದ್ದಾರೆ‌ ಎಂದು ತಿಳಿದುಬಂದಿದೆ. ‌

ಇದನ್ನೂ ಓದಿ: ಮಂಗಳೂರಿನಲ್ಲಿ ನೈತಿಕ ಪೊಲೀಸ್​​ಗಿರಿ: ಸಂಘಟನೆ ಕಾರ್ಯಕರ್ತರಿಂದ ಯುವಕನ ಮೇಲೆ ಹಲ್ಲೆ ಆರೋಪ

Last Updated : Dec 6, 2022, 10:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.