ETV Bharat / state

ಬ್ಯಾರಿ ಅಕಾಡೆಮಿಯ ಲಿಪ್ಯಾಂತರ ವೆಬ್​ಸೈಟ್​ ಹ್ಯಾಕ್- ಸೈಬರ್ ಪೊಲೀಸ್ ಠಾಣೆಗೆ ದೂರು - ಬ್ಯಾರಿ ಅಕಾಡೆಮಿಯ ಲಿಪ್ಯಾಂತರ ವೆಬ್​ಸೈಟ್ ಹ್ಯಾಕ್​ ಸುದ್ದಿ 2021

ಜುಲೈ 14ರಂದು ಮೊದಲ ಬಾರಿಗೆ ಈ ವೆಬ್‌ಸೈಟನ್ನು ಹ್ಯಾಕ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸೈಟ್​ನ್ನು ತೆರೆದಾಗ ಅಶ್ಲೀಲ ಚಿತ್ರಗಳು ಕಂಡು ಬರುತ್ತಿತ್ತು. ಅಲ್ಲದೇ ಅದರಲ್ಲಿ HACKED BY MR.7 MIND ಎಂದು ಬರೆಯಲಾಗಿತ್ತು..

Barrie Sahitya Academy of Karnataka
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
author img

By

Published : Jul 23, 2021, 3:45 PM IST

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಇತ್ತೀಚೆಗಷ್ಟೆ ಆರಂಭಿಸಿದ್ದ ಇಂಗ್ಲಿಷ್ ಲಿಪಿಯಿಂದ ಬ್ಯಾರಿ ಭಾಷೆಯ ಲಿಪಿಗೆ ಲಿಪ್ಯಾಂತರ ಮಾಡುವ ವೆಬ್‌ಸೈಟನ್ನು ಹ್ಯಾಕ್ ಮಾಡಲಾಗಿದೆ.

ವೆಬ್​ಸೈಟ್​ ಜುಲೈ 7ರಂದು ಲೋಕಾರ್ಪಣೆಗೊಂಡಿದೆ. ಇದರಲ್ಲಿ ಇಂಗ್ಲಿಷ್​ ಲಿಪಿಯಲ್ಲಿ ಟೈಪ್ ಮಾಡಿದರೆ ಅದು ಬ್ಯಾರಿ ಭಾಷೆಗೆ ಅನುವಾದವಾಗುವ ತಂತ್ರಾಂಶವನ್ನಾಗಿ ಅಭಿವೃದ್ದಿಪಡಿಸಲಾಗಿತ್ತು.

ಜುಲೈ 14ರಂದು ಮೊದಲ ಬಾರಿಗೆ ಈ ವೆಬ್‌ಸೈಟನ್ನು ಹ್ಯಾಕ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಸೈಟ್​ನ್ನು ತೆರೆದಾಗ ಅಶ್ಲೀಲ ಚಿತ್ರಗಳು ಕಂಡು ಬರುತ್ತಿತ್ತು. ಅಲ್ಲದೇ ಅದರಲ್ಲಿ HACKED BY MR.7 MIND ಎಂದು ಬರೆಯಲಾಗಿತ್ತು.

ನಂತರ ಇದರ ಪಾಸ್​ವರ್ಡ್ ಬದಲಿಸಿ ಸರಿಪಡಿಸಲಾಗಿತ್ತು. ಇದೀಗ 2ನೇ ಬಾರಿಗೆ ಹ್ಯಾಕ್ ಮಾಡಲಾಗಿದೆ. ಈ ಹಿನ್ನೆಲೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಮಂಗಳೂರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಓದಿ: ಸಿಎಂ ಅವರೇ ಸ್ಪಷ್ಟಪಡಿಸಿದ್ದಾರೆ, ನಾನು ಹೇಳುವುದೇನಿದೆ: ಸಚಿವ ಸುರೇಶ್ ಕುಮಾರ್ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.