ದಕ್ಷಿಣಕನ್ನಡ : ಬಟ್ಟೆ ಅಂಗಡಿ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದರೂ ಕೂಡ ಕೊರೊನಾ ಜಾಗೃತಿಗೆ ಸಮಸ್ಯೆಯಾಗಬಹುದೆಂದು ಬಂಟ್ವಾಳ ವಿಟ್ಲದ ಎಲ್ಲಾ ಮುಸ್ಲಿಂ ವ್ಯಾಪಾರಸ್ಥರು ರಂಜಾನ್ ಮುಗಿಯುವವರೆಗೆ ಅಂಗಡಿಗಳನ್ನು ತೆರೆಯುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
ರಂಜಾನ್ ತಿಂಗಳು ಮುಕ್ತಾಯವಾಗುವ ತನಕ ತಮ್ಮ ವ್ಯವಹಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಂಟ್ವಾಳ ಮತ್ತು ವಿಟ್ಲದ ಮುಸ್ಲಿಂ ವರ್ತಕರು ತೀರ್ಮಾನಿಸಿದ್ದಾರೆ. ಬಟ್ಟೆ ಮತ್ತಿತರ ಅಂಗಡಿಗಳನ್ನು ತೆರೆಯದಿರಲು ನಿರ್ಧರಿಸಿದ್ದಾರೆ. ರಂಜಾನ್ ಹಬ್ಬದ ಖರೀದಿಗೆ ಜನಜಂಗುಳಿ ಸೇರಬಹುದು. ರೆಡಿಮೇಡ್ ವಸ್ತ್ರದ ಅಂಗಡಿಗಳನ್ನು ಫ್ಯಾನ್ಸಿ-ಕಾಸ್ಮೆಟಿಕ್ಸ್ ಅಂಗಡಿಗಳು ಫುಟ್‌ವೇರ್ ಶಾಪ್ಗಳು ಹಾಗೂ ಟೇಲರ್ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮೊಬೈಲ್ ಶಾಪ್, ಜ್ಯುವೆಲ್ಲರಿ, ಬ್ಯಾಗ್, ವಾಚ್, ಫರ್ನಿಚರ್ಸ್, ಎಲೆಕ್ಟ್ರಾನಿಕ್ಸ್ ಮೊದಲಾದ ಅಂಗಡಿಗಳನ್ನು ಬೆಳಗ್ಗೆ 7 ರಿಂದ ಮಧ್ಯಾಹ್ನ 12ರ ತನಕ ಮಾತ್ರ ತೆರೆಯಲು ಅವಕಾಶವಿದೆ. ಸಾಮಾಜಿಕ ಅಂತರ ನಿಯಮವನ್ನು ಕಾಯ್ದುಕೊಂಡು ತೆರೆಯುಲಾಗುವುದು ಎಂದರು. ದಿನ ಬಳಕೆ ವಸ್ತುಗಳ ಅಂಗಡಿಗಳನ್ನು ಜಿಲ್ಲಾಡಳಿತದ ನಿಯಮದ ಪ್ರಕಾರ ತೆರೆದಿಡುವುದು ಎಂದು ಎಂದು ವಿಟ್ಲದಲ್ಲಿ ತೀರ್ಮಾನಿಸಲಾಗಿದೆ ಎಂದು ಪಿ ಎ ರಹೀಂ ತಿಳಿಸಿದ್ದಾರೆ.