ETV Bharat / state

ವೇಷರಹಿತ ಯಕ್ಷಗಾನಕ್ಕೆ ಆನ್​​ಲೈನ್ ವೇದಿಕೆ: ಪ್ರದರ್ಶನಕ್ಕೆ ಬಂಟ್ವಾಳದ ಕಲಾ ತಂಡ ಸಜ್ಜು - ಆನ್​​ಲೈನ್​ನಲ್ಲಿ ಯಕ್ಷಗಾನ ಪ್ರದರ್ಶನ

ಬಂಟ್ವಾಳ ತಾಲೂಕಿನ ಯಕ್ಷಗಾನ ಕಲಾ ತಂಡವೊಂದು ವೇಷ ರಹಿತವಾಗಿ ಆನ್​ಲೈನ್​ನಲ್ಲಿ ಯಕ್ಷಗಾನ ಪ್ರದರ್ಶನ ಮಾಡಲು ಮುಂದಾಗಿದೆ.

ವೇಷರಹಿತ ಯಕ್ಷಗಾನ ಪ್ರದರ್ಶನಕ್ಕೆ ಬಂಟ್ವಾಳ ಕಲಾ ತಂಡ ಸಜ್ಜು
Bantwal taluk Yakshagana artists performing on online
author img

By

Published : Dec 14, 2020, 1:02 PM IST

Updated : Dec 14, 2020, 1:23 PM IST

ಬಂಟ್ವಾಳ: ಕೊರೊನಾ ಇರುವ ಈ ಸಮಯದಲ್ಲಿ ಮನೆಯಲ್ಲೇ ಕುಳಿತು ಆನ್​ಲೈನ್​ ಮೂಲಕ ಯಕ್ಷಗಾನ ವೀಕ್ಷಿಸಬಹುದಾಗಿದೆ. ಅದಕ್ಕಾಗಿ ತಾಲೂಕಿನ ಕಲಾ ತಂಡವೊಂದು ತಯಾರಿ ನಡೆಸಿದ್ದು, ಪ್ರದರ್ಶನಕ್ಕೆ ಸಜ್ಜಾಗಿದೆ.

ಕಲಾತಂಡದ ಸಂಘಟಕ ಕಿಶನ್ ಹೊಳ್ಳ ನೂಜಿಪ್ಪಾಡಿ ಮಾತನಾಡಿರುವುದು

ತಾಲೂಕಿನ ಮಂಚಿ ಹಾಗೂ ಬಿಸಿ ರೋಡಿನ ಕೆಲ ಉತ್ಸಾಹಿ ತರುಣರ ಗುಂಪೊಂದು ವೇಷರಹಿತ ಯಕ್ಷಗಾನದ ಲೈವ್ ಪ್ರದರ್ಶನವನ್ನು ನೀಡುವ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಯುವಕರು ಯಕ್ಷನೂಜಿಪ್ಪಾಡಿ ಎಂಬ ಕಲಾತಂಡವನ್ನು ರಚಿಸಿಕೊಂಡು ಆ ಮೂಲಕ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಯೂಟ್ಯೂಬ್ ಮತ್ತು ಫೇಸ್​​ಬುಕ್ ಲೈವ್​​ನಲ್ಲಿ ಯಕ್ಷನೂಜಿಪ್ಪಾಡಿ ಹೆಸರಲ್ಲಿ ಯಕ್ಷಾಗಾನ ಪ್ರದರ್ಶಿಸಲಿದ್ದಾರೆ. ಈ ತಂಡ ಡಿ.20 ರಂದು ಸಂಜೆ 5 ರಿಂದ ಮೇದಿನಿ ನಿರ್ಮಾಣ ಭೂ ಉದ್ಧರಣ ಪ್ರಸಂಗವನ್ನು ಪ್ರದರ್ಶಿಸಲಿದೆ.

Bantwal taluk Yakshagana artists performing on online
ಯಕ್ಷಗಾನ ಕಲಾತಂಡ

ಏನಿದು ವೇಷರಹಿತ ಪ್ರದರ್ಶನ:

ಸಾಮಾನ್ಯವಾಗಿ ಅಧ್ಯಯನ ಶಿಬಿರಗಳಲ್ಲಿ, ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ವೇಷ ಧರಿಸದೆ ಅಭಿನಯ ಮಾಡುವುದುಂಟು. ಆಗ ಇಜಾರು (ಪ್ಯಾಂಟು), ಬನಿಯನ್, ಗೆಜ್ಜೆ ಧರಿಸಿ ಅಭಿನಯ ಮಾಡಲಾಗುತ್ತದೆ. ಪ್ರಸಂಗ ಅಧ್ಯಯನ ಶಿಬಿರಗಳಲ್ಲೂ ಇಂಥದ್ದನ್ನು ಮಾಡಲಾಗುತ್ತದೆ. ಆದರೆ ಇವು ಶಿಬಿರಗಳಿಗಷ್ಟೇ ಮೀಸಲಾಗಿರುತ್ತವೆ. ಅದನ್ನೇ ಪ್ರದರ್ಶನವನ್ನಾಗಿ ಮಾಡುವ ಹೊಸ ಪ್ರಯೋಗ ಇದಾಗಿದ್ದು, ವೇಷ ಧರಿಸದೆ ಕೇವಲ ತಮ್ಮ ಅಭಿನಯದ ಮೂಲಕ ಪಾತ್ರಕ್ಕೆ ಜೀವ ತುಂಬಿ ಪ್ರೇಕ್ಷರನ್ನು ಸೆಳೆಯುವುದಕ್ಕೆ ಮುಂದಾಗಿದೆ. ಇಲ್ಲಿ ವೇಷ ಇಲ್ಲದಿದ್ದಾಗ ಪಾತ್ರಕ್ಕೆ ಜೀವಕಳೆ ತುಂಬುವುದು ದೊಡ್ಡ ಸವಾಲಾಗಿರುತ್ತದೆ.

ಕಲಾತಂಡದಿಂದ ಡಿ.20 ರಂದು ನಡೆಯಲಿರುವ ಪ್ರದರ್ಶನ

ಈ ಕುರಿತಂತೆ ಕಲಾತಂಡದ ಸಂಘಟಕ ಕಿಶನ್ ಹೊಳ್ಳ ನೂಜಿಪ್ಪಾಡಿ ಮಾತನಾಡಿ, ಪ್ರೇಕ್ಷಕನಿಗೆ ವೇಷಸಹಿತ ಕಲಾವಿದ ಎದುರು ನಿಂತಾಗ ವೇಷದ ಕಡೆಗೆ ಹೆಚ್ಚಿನ ಗಮನ ಹೋಗುತ್ತದೆ. ಅದಿಲ್ಲದ್ದಿದ್ದಾಗ ನಮ್ಮ ಅಭಿನಯ, ಹಾವ-ಭಾವಗಳ ಮೂಲಕ ಪ್ರೇಕ್ಷಕನಿಗೆ ವೇಷರಹಿತವಾಗಿಯೂ ಯಕ್ಷಗಾನವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ. ನಾವು ವೇಷ ಧರಿಸದೆ ಪ್ರಾಯೋಗಿಕವಾಗಿ ಕೆಲವು ಪ್ರದರ್ಶನಗಳನ್ನು ನೀಡಿದ್ದೇವೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ಕಲಾವಿದ ಕರ್ಗಲ್ಲು ವಿಶ್ವೇಶ್ವರ ಭಟ್ಟರು ನಮ್ಮ ಪ್ರದರ್ಶನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕರಿಂದಲೂ ಉತ್ತಮ ಸ್ಪಂದನೆ ದೊರಕಿದೆ ಎಂದರು.

ನೂಜಿಪ್ಪಾಡಿ ತಂಡ:

ಈ ನೂಜಿಪ್ಪಾಡಿ ಕಲಾತಂಡದಲ್ಲಿ ಬೇರೆ ಬೇರೆ ಉದ್ಯೋಗ, ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಈ ತಂಡ ಹೊಸದೊಂದು ಪ್ರಯೋಗ ಮಾಡಲು ಮುಂದಾಗಿದೆ. ಈಗಾಗಲೇ ಈ ತಂಡಗಳು ಐದಾರೂ ಪ್ರದರ್ಶನಗಳನ್ನು ಮನೆ ಮನೆಗಳಲ್ಲಿ ನಡೆದಿದೆ. ಕಿಶನ್ ಹೊಳ್ಳ ನೂಜಿಪ್ಪಾಡಿ, ನರಸಿಂಹ ಮಯ್ಯ ಅಲೆತ್ತೂರು, ಗಣೇಶ್ ಹೆಗಡೆ ಬಂಟ್ವಾಳ, ಸಚಿನ್ ಹೊಳ್ಳ ಕಳ್ಳಿಮಾರು, ರಾಘವೇಂದ್ರ ಕಾರಂತ ಮೊಗರ್ನಾಡು, ವೇಣುಗೋಪಾಲ ಕೆ, ಶ್ರೀಧರ ಎ.ಪಿ.ರಾವ್, ಯಜ್ಞನಾರಾಯಣ ಐತಾಳ್, ರಾಮಕೃಷ್ಣ ಐತಾಳ್. ರಶ್ಮಿ ಎಂ.ಪಿ., ವಸುಧಾ ಜಿ.ಎನ್. ಹಿಮ್ಮೇಳಕ್ಕೆ ವಿಶ್ವಾಸ ಭಟ್ ಕರ್ಬೆಟ್ಟು, ಶ್ರೀವತ್ಸ ಸೋಮಯಾಜಿ, ನವೀನಚಂದ್ರ ಆಚಾರ್ಯ, ಸಂದೇಶ್ ರಾವ್ ಬಿ. ಯಕ್ಷನೂಜಿಪ್ಪಾಡಿ ತಂಡದಲ್ಲಿದ್ದಾರೆ.

Last Updated : Dec 14, 2020, 1:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.