ಬಂಟ್ವಾಳ(ದಕ್ಷಿಣ ಕನ್ನಡ): ಈ ವರ್ಷ ವಿವಿಧ 12 ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಂಡ 17 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಬಂಟ್ವಾಳ ನಗರ ಪೊಲೀಸರು ವಾರಸುದಾರರಿಗೆ ಸೋಮವಾರ ಹಸ್ತಾಂತರಿಸಿದರು.
ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ, ಸುಲಿಗೆ, ವಂಚನೆ ಪ್ರಕರಣಗಳೂ ಸೇರಿದಂತೆ ದಾಖಲಾದ ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇವುಗಳಲ್ಲಿ 252.390 ಗ್ರಾಂ. ತೂಕದ ಚಿನ್ನಾಭರಣಗಳು, ಬೋಲೇರೊ ಜೀಪ್, ಒಂದು ಆಲ್ಟೋ ಕಾರು, ಒಂದು ಮೋಟಾರ್ ಸೈಕಲ್, ಲ್ಯಾಪ್ಟಾಪ್ಗಳು ಸೇರಿವೆ.
ವಿವಿಧ ಪ್ರಕರಣಗಳಲ್ಲಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಂದು ನ.22 ರಂದು ಸಹಾಯಕ ಪೊಲೀಸ್ ಅಧೀಕ್ಷಕ ಶಿವಾಂಷು ರಜಪೂತ್ ಅವರು ವಾರಸುದಾರರಿಗೆ ಹಸ್ತಾಂತರ ಮಾಡಿದರು.
11,34000 ರೂ ಮೌಲ್ಯದ 252.390 ಗ್ರಾಂ.ತೂಕ ದ ಚಿನ್ನಾಭರಣಗಳು, 5,49,000 ಮೌಲ್ಯದ ಬೋಲೇರೊ ಜೀಪ್, ಒಂದು ಆಲ್ಟೋ ಕಾರು, ಒಂದು ಮೋಟಾರ್ ಸೈಕಲ್, ರೂ.50,000 ಮೌಲ್ಯದ ಲ್ಯಾಪ್ಟಾಪ್ಗಳನ್ನು ಸ್ವಾಧೀನಪಡಿಸಿಕೊಂಡು ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದರು.