ದಕ್ಷಿಣಕನ್ನಡ: ಬಂಟ್ವಾಳ ತಾಲೂಕಿನ ಗ್ರಾಮಾಂತರ ಠಾಣಾ ಪೊಲೀಸರು, ಕೊಪ್ಪಳ ಮೂಲದ 12 ಕಾರ್ಮಿಕರಿಗೆ ತಮಗಾಗಿ ತಂದಿದ್ದ ಮಧ್ಯಾಹ್ನದ ಊಟ ನೀಡುವ ಮೂಲಕ ಮಾನವೀಯತೆ ಮೆರೆದರು.
ಕೊಪ್ಪಳ ಮೂಲದ 12 ಮಂದಿ ಕೆಲಸವಿಲ್ಲದೇ ಕಾಲ್ನಡಿಗೆಯಲ್ಲಿ ಬಿ.ಸಿ.ರೋಡ್ ಗೆ ಬಂದಿದ್ದ ಸಂದರ್ಭ ಟೋಲ್ಗೇಟ್ ಸಮೀಪ ಪೊಲೀಸರ ಕಣ್ಣಿಗೆ ಬಿದ್ದರು. ಈ ವೇಳೆ ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ಅವರಿಗೆ ಫರಂಗಿಪೇಟೆಯ ತನ್ನ ಸಿಬ್ಬಂದಿಗೆಂದು ತರಿಸಿಕೊಟ್ಟ ಊಟವನ್ನೇ ನೀಡಿ ಮಾನವೀಯತೆ ಮೆರೆದರು.
ಬಳಿಕ ತಾಲೂಕು ಆಡಳಿತಕ್ಕೆ ಕಾರ್ಮಿಕರ ಕುರಿತು ಗಮನಕ್ಕೆ ತಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವತ್ತ ತಾಲೂಕು ಆಡಳಿತ ಹೊರಟಿದೆ. ಎ.ಎಸ್.ರಮೇಶ್, ಸಿಬ್ಬಂದಿಗಳಾದ ನಜೀರ್ ಸೋಮಶೇಖರ್ ಕಾರ್ಮಿಕರಿಗೆ ಊಟ ವಿತರಿಸಿದರು.