ಬಂಟ್ವಾಳ(ದ.ಕ): ಬಿ.ಸಿ.ರೋಡಿನಿಂದ ಮಾಣಿ ಮಾರ್ಗದಲ್ಲಿರುವ ಮೆಲ್ಕಾರ್ ಬಸ್ ನಿಲ್ದಾಣದಲ್ಲಿ ಬ್ರೀಜಾ ಕಾರೊಂದರಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಡಿಸಿಐಬಿ ಪೊಲೀಸರು, 1.48 ಕೆಜಿ ಗಾಂಜಾ ಮತ್ತು ಕಾರು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ಬಂದರು ಅನ್ಸಾರಿ ಕ್ರಾಸ್ ರೋಡ್ ನಿವಾಸಿ ಟಿ.ಪಿ.ಫಾರೂಕ್ (50) ಮತ್ತು ನೇಪಾಳದ ನಿವಾಸಿ, ಸದ್ಯ ಪಿವಿಎಸ್ ವೃತ್ತದ ಬಳಿ ಪಿಜಿಯಲ್ಲಿ ವಾಸವಿರುವ ಸಾಗರ್ ಸಿಂಗ್ (22) ಬಂಧಿತ ಆರೋಪಿಗಳು. ಇಬ್ಬರೂ ಗಾಂಜಾ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದು, ಬಳಿಕ ಅವರ ವಶದಲ್ಲಿದ್ದ ಒಟ್ಟು 1.480 ಕೆ.ಜಿ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಬಂಧಿತರಿಂದ 10.32 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯನ್ನು ಡಿ.ಸಿ.ಐ.ಬಿ ಪೊಲೀಸ್ ನಿರೀಕ್ಷಕರಾದ ಚೆಲುವರಾಜು ಬಿ ನೇತೃತ್ವದಲ್ಲಿ ನಡೆಸಲಾಗಿದೆ.