ETV Bharat / state

ಜ.24 ಬಂಗಾರ್ ಪಲ್ಕೆ ಫಾಲ್ಸ್ ಭೂ ಕುಸಿತವಾಗುತಿದ್ದರೆ ನಡೆಯುತ್ತಿತ್ತು ಘೋರ ದುರಂತ.. - ಹುಡುಗನ‌ ಮೇಲೆ ಗುಡ್ಡ ಕುಸಿದ ಘಟನೆ

ಜ.24 ಭಾನುವಾರ ಈ ಜಲಪಾತ ವೀಕ್ಷಣೆಗೆ ಬಂದು ತುಂಬಾ ಹೊತ್ತು ಇದ್ದರು. ಆ ಸಮಯದಲ್ಲಿ ಇಂತಹ ಘಟನೆ ನಡೆಯದಿರುವುದು ದೊಡ್ಡ ಪುಣ್ಯ. ನಡೆದಿದ್ರೆ, ಕರಾಳ ಘಟನೆಗೆ ಈ ಪ್ರದೇಶ ಸಾಕ್ಷಿಯಾಗುತ್ತಿತ್ತು ಎಂದು ಆತಂಕದಿಂದ ದೊಡ್ಡ ದುರ್ಘಟನೆ ತಪ್ಪಿದ ಕ್ಷಣ ಸ್ಮರಿಸಿಕೊಳ್ಳುತ್ತಾರೆ..

Bangar Palka Falls Landslide in beltangadi news
ಬಂಗಾರ್ ಪಲ್ಕೆ ಫಾಲ್ಸ್ ಭೂ ಕುಸಿತ
author img

By

Published : Jan 30, 2021, 10:24 PM IST

ಬೆಳ್ತಂಗಡಿ : ಎಳನೀರು, ಬಂಗಾರ್ ಪಲ್ಕೆ ಜಲಪಾತ ಸಂಸ್ಥೆಯಿಂದ ಸುಮಾರು 8 ಕಿ.ಮೀ. ದೂರದಲ್ಲಿದೆ. ಪ್ರಕೃತಿ ರಮಣೀಯ ಪ್ರದೇಶವಾಗಿದೆ. ಕಡಿದಾದ ದಾರಿ ಸ್ವಲ್ಪ ಎಚ್ಚರ ತಪ್ಪಿದ್ರೂ ಅಪಾಯ ಕಟ್ಟಿಟ್ಟ ಬುತ್ತಿ. ಆದರೂ ದಿನದಿಂದ ದಿನಕ್ಕೆ ಇಲ್ಲಿ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಬಂಗಾರ್ ಪಲ್ಕೆ ಫಾಲ್ಸ್ ಭೂ ಕುಸಿತ..

ಓದಿ: ನಾಳೆಯಿಂದ ರಾಜ್ಯದಲ್ಲಿ 4 ದಿನಗಳ ಕಾಲ ಕೋವಿಡ್ ಲಸಿಕೆಗೆ ಬ್ರೇಕ್..

ತುಂಬಾ ಎತ್ತರದಿಂದ ನೀರು ಧುಮುಕುವುದನ್ನು ನೋಡುವುದೇ ಸುಂದರ. ಆದರೆ, ಈ ಪ್ರದೇಶಕ್ಕೆ ಹೋಗಲು ಅಷ್ಟೇ ಕಷ್ಟ ಪಡಬೇಕು. ಯಾವುದೇ ನೆಟ್ ವರ್ಕ್ ಇಲ್ಲ, ಜೀಪ್ ಅಥವಾ ಬೈಕ್‌ಗಳಲ್ಲಿ ಮಾತ್ರ ಬರಬೇಕು. ಬಂದರೂ ಸ್ವಲ್ಪ ದೂರ ನಡೆದುಕೊಂಡು ಸಾಗಬೇಕು. ಸಂಸ್ಥೆಯ ಸುತ್ತಮುತ್ತ ಹಲವು ಹೋಂ ಸ್ಟೇಗಳಿವೆ. ಇವರು ಈ ಅಪಾಯಕಾರಿ ಜಲಪಾತದ ಬಗ್ಗೆ ಮಾಹಿತಿ ನೀಡಿ ಪ್ರವಾಸಿಗರನ್ನು ವಾಹನಗಳ ಮೂಲಕ ಕರೆ ತರುತ್ತಿದ್ದಾರೆ.

ಈ ಪ್ರದೇಶಕ್ಕೆ ಯಾರೇ ಬಂದರೂ ಎಚ್ಚರಿಕೆ ಅಗತ್ಯ. ಇದು ಅಪಾಯಕಾರಿಯಾಗಿದೆ. ಸ್ವಲ್ಪ ನಿರ್ಲಕ್ಷವಹಿಸಿದ್ರೂ ಪ್ರಪಾತಕ್ಕೆ ಬೀಳುತ್ತಾರೆ ಎಂಬ ಮಾಹಿತಿ ಸ್ಥಳೀಯರು, ಪ್ರವಾಸಿಗರಿಗೆ ನೀಡುತ್ತಾರೆ. ಸ್ಥಳೀಯರೊಬ್ಬರು ಮಾತನಾಡಿದ್ದು, ಜ.25ರಂದು ಹುಡುಗನ‌ ಮೇಲೆ ಗುಡ್ಡ ಕುಸಿದ ಘಟನೆ ನಡೆಯಬಾರದಿತ್ತು. ಈ ಬಗ್ಗೆ ತುಂಬಾ ಬೇಸರವಿದೆ. ನಮ್ಮ ಮನೆ ಮಗನನ್ನು ಕಳೆದುಕೊಂಡಷ್ಟು ಬೇಸರವಾಗುತ್ತಿದೆ.

ಘಟನೆ ನಡೆದ ಹಿಂದಿನ ದಿನ ಅಂದರೆ ಜ. 24ರಂದು ಭಾನುವಾರ ಒಂದು ವೇಳೆ ಈ ಘಟನೆ ನಡೆಯುತ್ತಿದ್ದರೆ ಸುಮಾರು 50ಕ್ಕಿಂತಲೂ ಅಧಿಕ ಮಂದಿ ಮಣ್ಣಿನಡಿಯಲ್ಲಿ ಸಿಲುಕಿ ಸಮಾಧಿಯಾಗುವ ಮೂಲಕ ಬಹುದೊಡ್ಡ ದುರ್ಘಟನೆ ನಡೆಯುತ್ತಿತ್ತು. ವಾರಂತ್ಯವಾದ ಕಾರಣ ಎಳನೀರು ತನಕ ಬಸ್ಸಿನಲ್ಲಿ ಒಂದು ಪ್ರವಾಸಿ ತಂಡ ಇಲ್ಲಿಗೆ ಆಗಮಿಸಿತ್ತು.

ಜ.24 ಭಾನುವಾರ ಈ ಜಲಪಾತ ವೀಕ್ಷಣೆಗೆ ಬಂದು ತುಂಬಾ ಹೊತ್ತು ಇದ್ದರು. ಆ ಸಮಯದಲ್ಲಿ ಇಂತಹ ಘಟನೆ ನಡೆಯದಿರುವುದು ದೊಡ್ಡ ಪುಣ್ಯ. ನಡೆದಿದ್ರೆ, ಕರಾಳ ಘಟನೆಗೆ ಈ ಪ್ರದೇಶ ಸಾಕ್ಷಿಯಾಗುತ್ತಿತ್ತು ಎಂದು ಆತಂಕದಿಂದ ದೊಡ್ಡ ದುರ್ಘಟನೆ ತಪ್ಪಿದ ಕ್ಷಣ ಸ್ಮರಿಸಿಕೊಳ್ಳುತ್ತಾರೆ.

ಪ್ರವಾಸಿರನ್ನು ಆಕರ್ಷಿಸಲು ಇಂತಹ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಿರುವ ಹೋಂ ಸ್ಟೇಗಳು ಇನ್ನಾದ್ರೂ ಆ ಸ್ಥಳಗಳ ಬಗ್ಗೆ ಸರಿಯಾಗಿ ತಿಳಿದು ಮಾಹಿತಿ ನೀಡಬೇಕು ಎನ್ನುತ್ತಾರೆ ಸ್ಥಳೀಯರು. ದೂರ ದೂರಿನಿಂದ ಬರುವ ಪ್ರವಾಸಿಗರು ತಮ್ಮ ಕುಟುಂಬದವರೊಂದಿಗೆ ಇಂತಹ ಸ್ಥಳಗಳ ಬಗ್ಗೆ ಮಾಹಿತಿ ಇರದೆ ಬಂದು ತೊಂದರೆ ಅನುಭವಿಸುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.