ETV Bharat / state

ಗೋ ಹತ್ಯೆ ನಿಷೇಧ ಕಾಯ್ದೆ ಜೊತೆಗೆ ಲವ್ ಜಿಹಾದ್ ವಿರುದ್ಧ ಕಾನೂನು ರಚಿಸಲು ಭಜರಂಗದಳ ಮನವಿ

ಕರ್ನಾಟಕದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ ತುಂಬಾ ದುರ್ಬಲವಾಗಿದೆ. ರಾಜ್ಯಾದ್ಯಂತ ನಿರಂತರ ಸಾವಿರಾರು ಗೋವುಗಳ ಹತ್ಯಾ ದಂಧೆ ನಡೆಯುತ್ತಲೇ ಇದೆ. ಹಿಂದೂಗಳಿಗೆ ಪೂಜ್ಯನೀಯವಾಗಿರುವ ಗೋಮಾತೆಗೆ ಹಿಂಸೆ, ವಧೆ ಮಾಡುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬರುವಂತಾಗಿದೆ. ಮೇಯಲು ಬಿಟ್ಟ ಗೋವುಗಳನ್ನು ಕೂಡಾ ಕದ್ದು ಸಾಗಿಸಿ ಕಸಾಯಿಖಾನೆಯಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಗೋ ಹತ್ಯೆ ನಿಷೇಧ ಕಾಯ್ದೆ
ಗೋ ಹತ್ಯೆ ನಿಷೇಧ ಕಾಯ್ದೆ
author img

By

Published : Nov 29, 2020, 3:40 AM IST

ಪುತ್ತೂರು: ರಾಜ್ಯದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆಯನ್ನು ಬಲಿಷ್ಟಗೊಳಿಸುವುದರ ಜೊತೆಗೆ ಲವ್​ ಜಿಹಾದ್​ ಅನ್ನು ಕೂಡ ನಿಷೇಧಿಸಬೇಕೆಂದು ಭಜರಂಗದಳದ ದಕ್ಷಿಣ ಪ್ರಾಂತ್ಯದ ಪಧಾದಿಕಾರಿಗಳು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲ್​ಗೆ ಮನವಿ ಸಲ್ಲಿಸಿದ್ದಾರೆ.

ಕರ್ನಾಟಕದಲ್ಲಿ ಈಗ ಜಾರಿಯಲ್ಲಿರುವ ಗೋಹತ್ಯಾ ನಿಷೇಧ ಕಾಯ್ದೆ ತುಂಬಾ ದುರ್ಬಲವಾಗಿದೆ. ರಾಜ್ಯಾದ್ಯಂತ ನಿರಂತರ ಸಾವಿರಾರು ಗೋವುಗಳ ಹತ್ಯಾ ದಂಧೆ ನಡೆಯುತ್ತಲೇ ಇದೆ. ಹಿಂದೂಗಳಿಗೆ ಪೂಜ್ಯನೀಯವಾಗಿರುವ ಗೋಮಾತೆಗೆ ಹಿಂಸೆ, ವಧೆ ಮಾಡುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಬರುವಂತಾಗಿದೆ. ಮೇಯಲು ಬಿಟ್ಟ ಗೋವುಗಳನ್ನು ಕೂಡಾ ಕದ್ದು ಸಾಗಿಸಿ ಕಸಾಯಿಖಾನೆಯಲ್ಲಿ ಬಂಧಿಸಿ ಹಿಂಸಿಸಲಾಗುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ಇದರ ಜತೆಗೆ ಪ್ರಸ್ತುತ ಸಾಮಾಜಿಕವಾಗಿ ಅನ್ಯಧರ್ಮೀಯ ಮತಾಂತರ ಎನ್ನುವ ಪ್ರಕರಣ ಆರಂಭವಾಗಿದ್ದು, ಹಿಂದೂ ಹೆಣ್ಣು ಮಕ್ಕಳು ಲವ್ ಜಿಹಾದ್ ಬಲೆಯಲ್ಲಿ ಸಿಲುಕುವ ಸನ್ನಿವೇಶಗಳು ನಿರ್ಮಾಣವಾಗಿದೆ. ಲವ್ ಜಿಹಾದ್‌ , ಗೋ ಹತ್ಯೆ ನಿಷೇಧ ಕುರಿತಂತೆ ಕಠಿಣ ಕಾನೂನು ಕ್ರಮ ತರುವಂತೆ ಹಾಗೂ ಚಿಕ್ಕಮಗಳೂರಿನ ದತ್ತಪೀಠಕ್ಕೆ ಖಾಯಂ ಅರ್ಚಕರನ್ನು ನೇಮಿಸುವಂತೆ ಆಗ್ರಹಿಸಿ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಬಜರಂಗದಳ ದಕ್ಷಿಣ ಪ್ರಾಂತ್ರ್ಯದ ವತಿಯಿಂದ ಮನವಿ ಸಲ್ಲಿಸಿಲಾಗಿದೆ.

ಈ ಸಂದರ್ಭ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಹ ಸಂಯೋಜಕ ಮುರಳೀಕೃಷ್ಣ ಹಸಂತ್ತಡ್ಕ, ಪುತ್ತೂರು ಜಿಲ್ಲಾ ಸಂಯೋಜಕ ಶ್ರೀಧರ ತೆಂಕಿಲ, ಪುತ್ತೂರು ಸಹ ಸಂಯೋಜಕ ಜಯಂತ ಕುಂಜೂರು ಪಂಜ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಸಹ ಕಾರ್ಯದರ್ಶಿ ವಿಶಾಖ್ ಸಸಿಹಿತ್ಲು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.