ಮಂಗಳೂರು: ಜಿಲ್ಲೆಯ ಪೂರ್ವ (ಕದ್ರಿ) ಠಾಣೆಯ ಪೊಲೀಸರು ಗರ್ಭಿಣಿ ಪೊಲೀಸ್ ಸಿಬ್ಬಂದಿಯೋರ್ವರಿಗೆ ಸೀಮಂತ ಮಾಡಿರುವ ಅಪರೂಪದ ಘಟನೆ ನಡೆದಿದೆ.
ನಗರದ ಬೆಂದೂರ್‌ನ ಸಂತ ಸೆಬಾಸ್ಟಿಯನ್ ಸಭಾಂಗಣದಲ್ಲಿ ಪೊಲೀಸ್ ನಿರೀಕ್ಷಕ ಶಾಂತಾರಾಮ್ ಮತ್ತು ಠಾಣಾ ಸಿಬ್ಬಂದಿಯಿಂದ ಕದ್ರಿ ಠಾಣಾ ಸಿಬ್ಬಂದಿ ಗೌರಮ್ಮ ಅವರಿಗೆ ಸಾಂಪ್ರದಾಯಿಕವಾಗಿ ಸೀಮಂತ ನಡೆಸಿಕೊಟ್ಟರು.