ETV Bharat / state

ಆಟೋ ಗ್ಯಾಸ್ ಸಿಲಿಂಡರ್ ಸ್ಫೋಟ: ಓರ್ವನಿಗೆ ಗಾಯ, ರಿಕ್ಷಾ ಸುಟ್ಟು ಭಸ್ಮ - ಬಂಟ್ವಾಳ ಗ್ಯಾಸ್ ಸಿಲಿಂಡರ್ ಸ್ಫೋಟ

ಆಟೋ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ನಡೆದಿದೆ.

auto-gas-cylinder-blast-in-bantwala
ಆಟೋ ಗ್ಯಾಸ್ ಸಿಲಿಂಡರ್ ಸ್ಫೋಟ, ಓರ್ವನಿಗೆ ಗಾಯ, ರಿಕ್ಷಾ ಭಸ್ಮ
author img

By

Published : Jan 30, 2022, 5:39 AM IST

ಬಂಟ್ವಾಳ: ಆಟೋ ಗ್ಯಾಸ್ ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸ್ಫೋಟಗೊಂಡು ವ್ಯಕ್ತಿಯೊಬ್ಬ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಅಮ್ಮೆಮಾರ್ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ಬಂಟ್ವಾಳದ ಕಾರಾಜೆ ನಿವಾಸಿ ಅಬ್ದುಲ್ ರಝಾಕ್ (62) ಗಾಯಗೊಂಡವರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಗುಜರಿ ವ್ಯಾಪಾರಿಯಾದ ಅಮ್ಮೆಮಾರ್ ನಿವಾಸಿ ತಸ್ಲೀಮ್ ಎಂಬವರ ಮನೆಯಲ್ಲಿ ಗುಜರಿಗೆ ಬಂದಿದ್ದ ಆಟೋ ಗ್ಯಾಸ್ ಸಿಲಿಂಡರ್ ಕತ್ತರಿಸಲು ಅಬ್ದುಲ್ ರಝಾಕ್ ಅವರು ಆಟೋ ರಿಕ್ಷಾದಲ್ಲಿ ಬಂದಿದ್ದರು. ಸಿಲಿಂಡರ್ ಕತ್ತರಿಸುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.

ಘಟನೆಯಿಂದ ಸಿಲಿಂಡರ್ ಕತ್ತರಿಸುತ್ತಿದ್ದ ಅಬ್ದುಲ್ ರಝಾಕ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಬಂದಿದ್ದ ಆಟೋ ರಿಕ್ಷಾ ಭಸ್ಮವಾಗಿದ್ದು ಸಮೀಪದ ಮನೆಗಳ ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಶೃಂಗೇರಿ ತಹಸೀಲ್ದಾರ್ ಕಾರು ಚಾಲಕ ಆತ್ಮಹತ್ಯೆಗೆ ಶರಣು.. ಕಾರಣ ನಿಗೂಢ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.