ETV Bharat / state

ಮನಪಾ ಅಧಿಕಾರಿಗಳ ಸೋಗಿನಲ್ಲಿ ಬಟ್ಟೆ ಮಳಿಗೆಯಲ್ಲಿ ಹಣ ವಸೂಲಿಗೆ ಯತ್ನ! - ಮಹಾನಗರ ಪಾಲಿಕೆಯ ಅಧಿಕಾರಿ

ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ಬಟ್ಟೆ ಅಂಗಡಿಗೆ ಬಂದ ಖದೀಮರು, ದಂಡ ಹಾಕುವ ನೆಪದಲ್ಲಿ ಹಣ ಸುಲಿಗೆಗೆ ಯತ್ನಿಸಿದ್ದಾರೆ.

mng
mng
author img

By

Published : Jun 17, 2021, 12:18 PM IST

ಮಂಗಳೂರು: ಮಹಾನಗರ ಪಾಲಿಕೆಯ ಅಧಿಕಾರಿಗಳ ಸೋಗಿನಲ್ಲಿ ನಗರದ ಟೋಕಿಯೋ ಮಾರ್ಕೆಟ್​​ನಲ್ಲಿರುವ ಬಟ್ಟೆ ಮಳಿಗೆಗೆ ದಾಳಿ ನಡೆಸಿರುವ ಮೂವರು ಆರೋಪಿಗಳು, ಹಣ ನೀಡಲು ಒತ್ತಾಯಿಸಿರೋದಾಗಿ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.

ಟೋಕಿಯೋ ಮಾರ್ಕೆಟ್​ನಲ್ಲಿರುವ ಸಾಗರ್ ವೆಡ್ಡಿಂಗ್ ಎಂಬ ಬಟ್ಟೆ ಮಳಿಗೆಗೆ ಬುಧವಾರ ಬೆಳಗ್ಗೆ 9ರ ವೇಳೆಗೆ ಏಕಾಏಕಿ ಬಂದ ಮೂವರು, ತಮ್ಮನ್ನು ಮಂಗಳೂರು ಮನಪಾ ಅಧಿಕಾರಿಗಳೆಂದು ಹೇಳಿದ್ದಾರೆ. ಲಾಕ್​​ಡೌನ್ ಸಂದರ್ಭದಲ್ಲಿ ಮಳಿಗೆ ತೆರೆದಿರೋದು ಯಾಕೆ ಎಂದು ಪ್ರಶ್ನಿಸಿರುವ ಅವರು, 50 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಾಗ, ಎಲ್ಲವನ್ನೂ ಸರಿಪಡಿಸಲಾಗುವುದೆಂದು ಹೇಳಿ 10 ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದಾರೆ.

ಈ ಸಂದರ್ಭ ಅಲ್ಲಿ ಜನ ಜಮಾಯಿಸಿದ್ದು, ಬಂದವರು ಮನಪಾ ಅಧಿಕಾರಿಗಳ ಸೋಗಿನಲ್ಲಿ ಬಂದಿರೋದಾಗಿ ತಿಳಿದು ಬಂದಿದೆ. ತಕ್ಷಣ ಈ ಬಗ್ಗೆ ಸಾಗರ್ ವೆಡ್ಡಿಂಗ್ ಮಾಲೀಕ ಅಬ್ದುಲ್ ರಹ್ಮಾನ್ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.