ಸುಳ್ಯ(ದಕ್ಷಿಣ ಕನ್ನಡ): ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಚೇರಿಗೆ ನುಗ್ಗಿಗ್ರಾಮ ಲೆಕ್ಕಿಗನ ಮೇಲೆ ತಲ್ವಾರ್ನಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಕಲ್ಲು ಎತ್ತಿಹಾಕಿ ಕೊಲೆಗೆ ಯತ್ನಿಸಿದ ಘಟನೆ ಕಡಬ ತಾಲೂಕಿನ ಸವಣೂರು ಜಂಕ್ಷನ್ನಲ್ಲಿ ಬುಧವಾರ ನಡೆದಿದೆ.
ಸವಣೂರು/ಪುಣ್ಷಪ್ಪಾಡಿ ಗ್ರಾಮ ಕರಣಿಕರರಾದ ಬಸವರಾಜ್ ಎಂಬುವರ ಮೇಲೆ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಹಲ್ಲೆ, ಕೊಲೆ ಬೆದರಿಕೆ, ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಹುಡುಗ ಹುಡುಗಿ ಮೇಲೆ ಹಲ್ಲೆ ಆರೋಪ: ಪ್ರಕರಣದ ದಾಖಲು
ಅಷ್ಟೇ ಅಲ್ಲದೆ, ಸವಣೂರು ಗ್ರಾ.ಪಂ ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿಗೆ ಸೇರಿದ ಬೇಕರಿಯನ್ನು ಆರೋಪಿಗಳು ತಲವಾರಿನಿಂದ ಪುಡಿಗೈದಿದ್ದಾನೆ ಎನ್ನಲಾಗ್ತಿದೆ.
ಸ್ಥಳಕ್ಕೆ ಬೆಳ್ಳಾರೆ ಠಾಣೆ ಎಸ್ಐ ಸುಹಾಸ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಸಾದ್, ಭರತ, ಬಾಲಕೃಷ್ಣ, ಪೂವಣಿ ಗೌಡ ಎಂಬುವರ ಮೇಲೆ ಕೇಸ್ ದಾಖಲಾಗಿದೆ.