ಮಂಗಳೂರು(ದಕ್ಷಿನ ಕನ್ನಡ): ಮಳಲಿ ಮಸೀದಿಯ ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಈ ಜಾಗಕ್ಕೆ ಸಂಬಂಧಿಸಿದಂತೆ ಆರ್ಟಿಸಿಯಲ್ಲಿ ಹೆಸರು ನಮೂದಿಗೆ ಮಂಗಳೂರಿನ ಸಹಾಯಕ ಆಯುಕ್ತರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ಕಾಲಂ ನಂ.11ರಲ್ಲಿ ಮಸೀದಿಯ ಹೆಸರು ನಮೂದಿಗೆ ತಡೆಯಾಜ್ಞೆ ನೀಡಿ ಸಹಾಯಕ ಆಯುಕ್ತರ ನ್ಯಾಯಾಲಯ ಸೋಮವಾರ ಆದೇಶ ನೀಡಿದೆ. ಮಸೀದಿ ಜಾಗದ ಆರ್‌ಟಿಸಿಯ ಕಾಲಂ ನಂ.9ರಲ್ಲಿ ಜಾಗದ ಮಾಲೀಕರು ಸರ್ಕಾರ ಎಂದು ನಮೂದಿಸಲಾಗಿದ್ದು, ಕಾಲಂ ಸಂಖ್ಯೆ 11ರಲ್ಲಿ ಜಾಗದ ಹಕ್ಕುದಾರರಾಗಿ ಮಸೀದಿ ಹೆಸರನ್ನು ಉಲ್ಲೇಖಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ಸೈನ್ಯಕ್ಕೆ ಸೇರುವವರು ರೈಲು, ಬಸ್ಗಳಿಗೆ ಬೆಂಕಿ ಹಚ್ಚುತ್ತಾರಾ?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ