ಸುಳ್ಯ(ದಕ್ಷಿಣ ಕನ್ನಡ): ನಗರದ ಸಂತೋಷ್ ಚಿತ್ರಮಂದಿರದಲ್ಲಿ ಕಾಂತಾರ ಸಿನೆಮಾ ನೋಡಲು ಬಂದ ಯುವಕ ಹಾಗೂ ಯುವತಿಗೆ ಥಳಿಸಲಾಗಿದ್ದು, ಸುಳ್ಯ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಕೇಸು ದಾಖಲಾಗಿದೆ. ಹಲ್ಲೆಗೊಳಗಾದ ಬಂಟ್ವಾಳದ ಬಿಮೂಡ ಗ್ರಾಮದ ಮೊಹಮ್ಮದ್ ಇಮ್ತಿಯಾಜ್ ಎಂಬಾತ ನೀಡಿದ ದೂರಿನ ಆಧಾರದ ಮೇಲೆ ಕೇಸು ದಾಖಲಿಸಲಾಗಿದೆ.
ಯುವಕ ತನಗೆ ಪರಿಚಯವಿದ್ದ ಯುವತಿಯ ಭೇಟಿಗೆಂದು ಸುಳ್ಯಕ್ಕೆ ಬಂದಿದ್ದ. ಈ ವೇಳೆ ಇಬ್ಬರೂ ಸುಳ್ಯದ ಸಂತೋಷ್ ಚಿತ್ರಮಂದಿರಕ್ಕೆ ಸಿನೆಮಾ ನೋಡಲು ಹೋಗಿದ್ದರು. ಆಗ ಸಿನೆಮಾ ಆರಂಭಕ್ಕೆ ತಡವಿದ್ದ ಕಾರಣ ಚಿತ್ರಮಂದಿರದ ಆವರಣದಲ್ಲಿ ಮಾತನಾಡುತ್ತಾ ನಿಂತಾಗ ಯುವಕರ ಗುಂಪೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಥಳಿಸಿದೆ ಎಂದು ದೂರಲಾಗಿದೆ.
ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಹಮೀದ್, ಅಶ್ರಫ್, ಸಾದಿಕ್, ಜಾಬಿರ್ ಜಟ್ಟಿಪಳ್ಳ ಸಿದ್ದಿಕ್ ಬೋರುಗುಡ್ಡೆ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇನ್ಸ್ಟಾದಲ್ಲಿ ಪರಿಚಯವಾದ ಬಾಲಕಿಗೆ ಲೈಂಗಿಕ ದೌರ್ಜನ್ಯ: ಬಾಲಕನ ವಿರುದ್ಧ ಪೋಕ್ಸೋ ಕೇಸು