ಮಂಗಳೂರು: ಯುವತಿಯ ಅಶ್ಲೀಲ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ನಿವಾಸಿ ಜಿತೇಶ್ ಸಪಲ್ಯ ಬಂಧಿತ ಆರೋಪಿ. ಜಿತೇಶ್ಗೆ ಸಂತ್ರಸ್ತ ಯುವತಿಯೊಂದಿಗೆ 2-3 ವರ್ಷಗಳಿಂದ ಗೆಳೆತನವಿತ್ತು. ಈ ಹಿನ್ನೆಲೆ ಮೇ 8, 2018 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆಗೆ ಬಂದು ಯುವತಿಯ ಅಶ್ಲೀಲ ಭಾವಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಜಿತೇಶ್ಗೆ ನ್ಯಾಯಾಂಗ ಬಂಧನ ವಿಧಿಸಿದೆ.