ಮಂಗಳೂರು : ಅಖಿಲ ಭಾರತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೂರುದಾರ ಸುರೇಶ್ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಜತೆ ಕೆಲಸಕ್ಕೆ ಸೇರಿದ್ದರು. ಸುರೇಶ್ ಮೇಲೆ ಆರೋಪ ಕೇಳಿ ಬಂದಾಗ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಆಗ ಅವರು ಲ್ಯಾಪ್ ಟಾಪ್ ಅಲ್ಲೇ ಬಿಟ್ಟು ಹೋಗಿದ್ದರು. ಇದೀಗ ಪೊಲೀಸರು ಯಾವುದೇ ನೋಟಿಸ್ ನೀಡದೆ ಬಂಧನ ಮಾಡಿದ್ದಾರೆ ಎಂದರು.
ಇನ್ನು ಪಕ್ಷದ ರಾಜ್ಯಾಧ್ಯಕ್ಷರನ್ನು ನೋಟಿಸ್ ನೀಡದೇ ಬಂಧನ ಮಾಡಿರುವ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಚುನಾವಣೆ ಹತ್ತಿರ ಬರುವಾಗ ನಮ್ಮನ್ನು ದಮನ ಮಾಡುವ ರಾಜಕೀಯ ಪ್ರಯತ್ನ ನಡೆಯುತ್ತಿದೆ. ಸುರೇಶ್ ಉದ್ಯಮಿಯೇ ಅಲ್ಲ, ಕೆಲಸಕ್ಕಾಗಿ ಬಂದು ಸೇರಿದವರು. ನಮ್ಮ ಮೇಲೆ ನೂರು ಕೇಸ್ ಬೇಕಾದರೂ ಹಾಕಿ ನಾವು ತಯಾರಿದ್ದೇವೆ. ಅದರಿಂದ ಮಟ್ಟ ಹಾಕಬಹುದು ಎಂದುಕೊಂಡರೆ ಅದರಲ್ಲಿ ಅವರು ಸಫಲರಾಗಲ್ಲ. ಪ್ರಕರಣದ ಹಿಂದಿರುವ ಕಾಣದ ಕೈಗಳನ್ನು ಬಂಧಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ : ಡಿ.17ರಂದು ರಾಜ್ಯದ ಎಲ್ಲ ವಿವಿ, ಪದವಿ ಕಾಲೇಜುಗಳು ಬಂದ್: ಎನ್ಎಸ್ಯುಐ