ETV Bharat / state

ಉಳ್ಳಾಲದಲ್ಲಿ ಮಹಿಳೆಯ ಸರ ಎಗರಿಸಿದ್ದ ಕಳ್ಳನ ಬಂಧನ - Ullala Police Station

ಬೈಕ್​ನಲ್ಲಿ ಬಂದು ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

df
ಉಳ್ಳಾಲದಲ್ಲಿ ಮಹಿಳೆಯ ಸರ ಎಗರಿಸಿದ್ದ ಕಳ್ಳನ ಬಂಧನ
author img

By

Published : Nov 7, 2020, 10:54 AM IST

ಉಳ್ಳಾಲ: ಬಗಂಬಿಲ ರಸ್ತೆಯಲ್ಲಿ ಯುವತಿಯ ಸರ ಕಳವು ಮಾಡಿದ್ದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ಸುಲ್ತಾನ್ (28) ಬಂಧಿತ. ದೇರಳಕಟ್ಟೆಯಲ್ಲಿರುವ ಹೋಟೆಲ್​​​​ನಲ್ಲಿ ಕೆಲಸಕ್ಕಿದ್ದ ಈತ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ನಿನ್ನೆ ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ನಿಶಾ ಎಂಬವರ ಕುತ್ತಿಗೆಯಿಂದ ಒಂದು ತೊಲ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದು ಈತ ಎಗರಿಸಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ತಪಾಸಣೆ ಆರಂಭಿಸಿದ್ದರು. ಕೊಣಾಜೆ ಠಾಣಾ ಕ್ರೈಂ ತಂಡದ ಸಹಕಾರ ಪಡೆದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.